ವಾಷಿಂಗ್ಟನ್(ಅಮೆರಿಕ): ನಗರದಲ್ಲಿ ಉಂಟಾದ ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್ಗೆ (MERS-CoV) ಈಗಾಗಲೇ ಚಾಡ್-ಓ-ಎಕ್ಸ್-1(ChAdOx1) ಲಸಿಕೆ ಕಂಡುಹಿಡಿದಿದ್ದು, ಈ ಲಸಿಕೆಯನ್ನು ಮಂಗ ಹಾಗೂ ಚಿಂಪಾಜಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗ ಮಾಡಿದ್ದೇವೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್ಐಎಚ್) ತಿಳಿಸಿದೆ.
ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ ಕೊರೊನಾ ವೈರಸ್ ಎಂಬುದು ತೀವ್ರವಾದ ಉಸಿರಾಟದ ತೊಂದರೆ ಉಂಟುಮಾಡುವ ಖಾಯಿಲೆಯಾಗಿದೆ. ಪ್ರಸ್ತುತವಾಗಿ ವಿಶ್ವದೆಲ್ಲೆಡೆ ಹಬ್ಬುತ್ತಿರುವ ಕೊರೊನಾ ವೈರಸ್ಗೆ ಹೋಲುತ್ತದೆ ಎಂದು ಎನ್ಐಎಚ್ ಸಂಸ್ಥೆ ಹೇಳಿದೆ.
ಅಮೆರಿಕ ವಿಜ್ಞಾನಿಗಳು ಚಾಡ್-ಓ-ಎಕ್ಸ್-1 ಲಸಿಕೆಯನ್ನು ಕಂಡುಹಿಡಿಯುವುದರಲ್ಲಿ ಸಫಲರಾಗಿದ್ದು, ಕೋವಿಡ್-19ಕ್ಕೂ ಸಹ ಇದರ ಮುಂದಿನ ಭಾಗವಾಗಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚಾಡ್-ಓ-ಎಕ್ಸ್-1 ಲಸಿಕೆಯನ್ನು ಮಂಗಗಳ ಮೇಲೆ ಪ್ರಯೋಗ ಮಾಡಲಾಗಿದ್ದು, ಈ ಪೈಕಿ 3 ಗುಂಪುಗಳನ್ನಾಗಿ ವಿಂಗಡಿಸಿ ನಂತರ ಮರ್ಸ್-ಕೋವ್ ಸೋಂಕಿತ ಮಂಗಗಳಿಗೆ ಲಸಿಕೆ ನೀಡಲಾಯಿತು. ಇನ್ನೊಂದು ಗುಂಪಿಗೆ ವ್ಯಾಕ್ಸಿನೇಷನ್ ಮಾಡಿ ನಂತರ ಮೂರನೇ ಗುಂಪನ್ನು ಖಾಯಿಲೆ ನಿಯಂತ್ರಣದ ಗುಂಪನ್ನಾಗಿ ವಿಂಗಡಿಸಿ ಪರೀಕ್ಷಿಸಲಾಗಿದೆ.