ಕರ್ನಾಟಕ

karnataka

ETV Bharat / international

ಜಾಗತಿಕ ಹವಾಮಾನ ಕುರಿತು ಚರ್ಚೆ ನಡೆಸಲು ರಷ್ಯಾ, ಚೀನಾ ಆಹ್ವಾನಿಸಿದ ಬೈಡನ್ - ಜಾಗತಿಕ ಹವಾಮಾನದ ಕುರಿತು ಮಾತುಕತೆ

ಜಾಗತಿಕ ಹವಾಮಾನದ ಕುರಿತು ಮಾತುಕತೆ ನಡೆಸಲು ರಷ್ಯಾ, ಚೀನಾ ದೇಶಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆಹ್ವಾನಿಸಿದ್ದಾರೆ.

ಬೈಡನ್
ಬೈಡನ್

By

Published : Mar 27, 2021, 10:44 AM IST

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಜಾಗತಿಕ ಹವಾಮಾನಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾದ ಕ್ಸಿ ಜಿನ್‌ಪಿಂಗ್ ಅವರನ್ನು ಆಹ್ವಾನಿಸಿದ್ದಾರೆ.

ಜಾಗತಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವ ಉದ್ದೇಶದಿಂದ ಏಪ್ರಿಲ್ 22 ಮತ್ತು 23 ರಂದು ವರ್ಚುವಲ್​ ಮೂಲಕ ಶೃಂಗಸಭೆ ನಡೆಸಲು ತೀರ್ಮಾನಿಸಿದ್ದು, ಈ ವೇಳೆ ವಾಸ್ತವಿಕವಾಗಿ ಹವಾಮಾನದ ಕುರಿತು ಚರ್ಚೆ ನಡೆಸಲಾಗುವುದು.

ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ತೈಲ ಬಳಕೆಗೆ ಹೆಚ್ಚು ಒತ್ತು ನೀಡಿ, ಯುಎಸ್ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಆಡಳಿತ ಪಕ್ಷವು ತನ್ನದೇ ಆದ ಯೋಜನೆಗಳನ್ನು ರೂಪಿಸಿಕೊಂಡಿದೆ. ಜೊತೆಗೆ ಶೃಂಗಸಭೆಯಲ್ಲಿ ಸ್ಪರ್ಧಾತ್ಮಕ ರಾಜಕೀಯ ಬೆಳವಣೆಗೆ, ಆರ್ಥಿಕ ನೀತಿ ಮತ್ತು ಕೋವಿಡ್​ ಸಮಸ್ಯೆ, ಹವಾಮಾನ ಬದಲಾವಣೆ ವಿಷಯಗಳ ಚರ್ಚೆಗೆ ಪ್ರಥಮ ಆದ್ಯತೆ ನೀಡುವುದಾಗಿ ಬೈಡನ್​ ತಿಳಿಸಿದ್ದಾರೆ.

ABOUT THE AUTHOR

...view details