ಕರ್ನಾಟಕ

karnataka

ETV Bharat / international

'ರಷ್ಯಾದಿಂದ ಉಕ್ರೇನ್ ಮೇಲೆ ಅತಿಕ್ರಮಣ': ಹಲವು ರೀತಿಯ ಆರ್ಥಿಕ ನಿರ್ಬಂಧ ವಿಧಿಸಿದ ಅಮೆರಿಕ

ಉಕ್ರೇನ್​ನ ಎರಡು ಪ್ರದೇಶಗಳಲ್ಲಿ ತನ್ನ ಸೇನೆಯನ್ನು ನಿಯೋಜಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆದೇಶಿಸಿದ ಬೆನ್ನಲ್ಲೆ ಅಮೆರಿಕ, ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.

Russia
ವಿಧಿಸಿದ ಅಮೆರಿಕಾ

By

Published : Feb 23, 2022, 6:50 AM IST

ವಾಷಿಂಗ್ಟನ್:ಉಕ್ರೇನ್​ ಪೂರ್ವಭಾಗದಲ್ಲಿ ಬಂಡುಕೋರರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ತನ್ನ ಸೇನೆಯನ್ನು ನಿಯೋಜಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆದೇಶಿಸಿದ ಬೆನ್ನಲ್ಲೆ ಅಮೆರಿಕ, ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.

ಮೊದಲ ಭಾಗವಾಗಿ ಹಲವಾರು ನಿರ್ಬಂಧಗಳನ್ನು ವಿಧಿಸಿದ ಬಗ್ಗೆ ಮಾಹಿತಿ ನೀಡಿದ ಜೋ ಬೈಡನ್​, ರಷ್ಯಾವು ತನ್ನ ಸೇನೆಯನ್ನು ಉಕ್ರೇನ್​ ಪ್ರದೇಶಗಳಿಗೆ ಕಳುಹಿಸಿಕೊಟ್ಟು, ಆ ದೇಶದ ಪ್ರದೇಶವನ್ನು ಆಕ್ರಮಣ ಮಾಡಿಕೊಂಡಿದೆ. ಇದು ಯುದ್ಧಕ್ಕೆ ಸರಿಸಮಾನವಾದುದು ಎಂದು ಆರೋಪಿಸಿದ್ದಾರೆ.

ಉಕ್ರೇನ್​ ಪ್ರದೇಶಗಳಲ್ಲಿ ರಷ್ಯಾ ಸೇನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಇದು ರಷ್ಯಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮೀರಿದ್ದರಿಂದ ಆ ದೇಶದ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದಲ್ಲದೇ ರಷ್ಯಾ ಉಕ್ರೇನ್​ ಮೇಲೆ ಯುದ್ಧ ಮುಂದುವರಿಸಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ಮೇಲೆ ಏನೆಲ್ಲಾ ನಿರ್ಬಂಧಗಳು?

  • ರಷ್ಯಾದ ಎರಡು ಬ್ಯಾಂಕ್​ಗಳಾದ ವೆಬ್​ ಮತ್ತು ಮಿಲಿಟರಿ ಬ್ಯಾಂಕ್​ ಮೇಲೆ ಅಮೆರಿಕದಲ್ಲಿ ಕಾರ್ಯನಿರ್ವಹಣೆಗೆ ತಡೆ
  • ಇನ್ನು ಮುಂದೆ ರಷ್ಯಾ, ಅಮೆರಿಕದಲ್ಲಿ ಹಣಕಾಸು ಹೂಡಿಕೆ ಮಾಡುವಂತಿಲ್ಲ
  • ಅಮೆರಿಕ ಮತ್ತು ಯುರೋಪಿಯನ್​ ಮಾರುಕಟ್ಟೆಗಳಲ್ಲಿ ರಷ್ಯಾ ವಹಿವಾಟಿಗೆ ತಡೆ
  • ರಷ್ಯಾದಿಂದ ಬರುವ ಎಲ್ಲ ಗಣ್ಯರು, ಅವರ ಕುಟುಂಬಸ್ಥರಿಗೆ ಅಮೆರಿಕ ಪ್ರವೇಶ ನಿಷಿದ್ಧ
  • ತಕ್ಷಣದಿಂದಲೇ ಜಾರಿಯಾಗುವಂತೆ ರಷ್ಯಾದ ಗಣ್ಯರು ಅಮೆರಿಕ ಪ್ರವೇಶ ನಿರ್ಬಂಧಿಸಿ ಆದೇಶ
  • ರಷ್ಯಾದ ಜೊತೆ ಮಾಡಿಕೊಂಡಿದ್ದ ನಾರ್ಡ್​ ಸ್ಟ್ರೀಮ್​-2 ಒಪ್ಪಂದಕ್ಕೆ ತಡೆ
  • ಜರ್ಮನಿ ಜೊತೆಗೆ ಈ ಒಪ್ಪಂದ ಮುಂದುವರಿಸಲು ಅಮೆರಿಕ ಇಂಗಿತ

ಇದನ್ನೂ ಓದಿ:11 ವರ್ಷದ ಬಾಲಕನ ಚಿಕಿತ್ಸೆಗೆ 31 ಲಕ್ಷ ರೂ. ದೇಣಿಗೆ ನೀಡಿ ಹೃದಯವಂತಿಕೆ ಮೆರೆದ ಕೆ ಎಲ್ ರಾಹುಲ್​

ABOUT THE AUTHOR

...view details