ಮಿಚಿಗನ್:ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರು ಕಾರನ್ನು ಓಡಿಸುವುದಿಲ್ಲ. ಆದ್ರೆ ಜೋ ಬೈಡನ್ ತಮಗಿಷ್ಟವಾಗಿದ್ದ ಕಾರ್ನ್ನು ಓಡಿಸಿ ಖುಷಿಯಾಗಿದ್ದಾರೆ.
ಫೋರ್ಡ್ ಎಫ್ -150 ಎಂಬ ಎಲೆಕ್ಟ್ರಿಕ್ ಕಾರ್ ಮೇಲೆ ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ ಮನಸ್ಸಾಗಿದೆ. ಆ ಕಾರನ್ನು ಸ್ವತಃ ಟೆಸ್ಟ್ ಡ್ರೈವ್ ಮಾಡಲು ಮುಂದಾದರು. ಗಂಟೆಗೆ 80 ಮೈಲಿ ವೇಗದಲ್ಲಿ ಕಾರನ್ನು ಓಡಿಸಿ ಸಂತಸ ಪಟ್ಟರು.
ಈ ಕಾರು ತುಂಬಾ ವೇಗವಾಗಿ ಚಲಿಸುತ್ತದೆ. ಇದು 4.4 ಸೆಕೆಂಡುಗಳಲ್ಲಿ 0-60 ಮೈಲ್ನ್ನು ತಲುಪಬಹುದು. ಇದೊಂದು ಎಲೆಕ್ಟ್ರಿಕ್ ಕಾರ್ ಆಗಿರುವುದು ವಿಶೇಷ. ಭವಿಷ್ಯದಲ್ಲಿ ಈ ಕಾರನ್ನು ಖರೀದಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದರು.
ಈ ಕಾರು ಗಂಟೆಗೆ 300 ಮೈಲಿ ವೇಗವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತದೆ. ಇದು 500 ಬಿಹೆಚ್‌ಪಿ ಶಕ್ತಿಯನ್ನು ಹೊಂದಿದೆ ಎಂದು ಹೇಳಲಾಗಿದೆ. ಬೈಡನ್ ಎಲೆಕ್ಟ್ರಿಕ್ ಕಾರುಗಳ ಅಭಿಮಾನಿ. ಅವರು ಟ್ರಂಪ್ ನಿರ್ಧಾರವನ್ನು ಖಂಡಿಸಿದಲ್ಲದೇ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದರು. ಮಿಚಿಗನ್‌ನ ಟ್ರ್ಯಾಕ್‌ನಲ್ಲಿ ಕಾರಿನ ಟೆಸ್ಟ್ ಡ್ರೈವ್ ಸಮಯದಲ್ಲಿ ಫೋರ್ಡ್ ಕಂಪನಿಯೊಂದಿಗೆ 174 ಬಿಲಿಯನ್ ಡಾಲರ್ಗಳ ಎಲೆಕ್ಟ್ರಿಕ್ ಯೋಜನೆ ಬಗ್ಗೆ ಚರ್ಚಿಸಿದ್ದಾರೆ.