ಕರ್ನಾಟಕ

karnataka

ETV Bharat / international

19 ಮಂದಿ ಉಗ್ರರು ಮೂರು ಸಾವಿರ ಮಂದಿಯನ್ನು ಬಲಿ ಪಡೆದ ಕೃತ್ಯಕ್ಕೆ 19 ವರ್ಷ!

ಅಮೆರಿಕಾದಲ್ಲಿ ವಿಶ್ವ ವಾಣಿಜ್ಯ ಕಟ್ಟಡ ಮೇಲೆ ದಾಳಿ ನಡೆದು 19 ವರ್ಷಗಳಾಗಿದ್ದು, ಅಮೆರಿಕ ಭದ್ರತಾ ವೈಫಲ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಭಯೋತ್ಪಾದಕರು ಬಿಂಬಿಸಿದ್ದರು.

By

Published : Sep 11, 2020, 9:06 AM IST

Updated : Sep 11, 2020, 10:49 AM IST

attack on September 11, 2001
ಸೆಪ್ಟೆಂಬರ್ 11, 2001ರ ದಾಳಿ

ನವದೆಹಲಿ:19 ವರ್ಷಗಳ ಹಿಂದೆ ಅಮೆರಿಕಾಗೆ ಭಯೋತ್ಪಾದನೆಯ ನಿಜ ಪರಿಚಯವಾಗಿತ್ತು. ಅದೊಂದು ದಾಳಿಯಿಂದ ಸುಮಾರು ಮೂರು ಸಾವಿರ ಮಂದಿ ಅಮಾಯಕರು ಬಲಿಯಾಗಿದ್ದರು.

ಅದು ಮಂಗಳವಾರ, ಸೆಪ್ಟೆಂಬರ್ 11, 2001, ಅಮೆರಿಕಾದ ವಿವಿಧ ಸ್ಥಳಗಳಿಗೆ ತೆರಳುತ್ತಿದ್ದ ನಾಲ್ಕು ವಿಮಾನಗಳನ್ನು 19 ಮಂದಿ ಭಯೋತ್ಪಾದಕರು ಹೈಜಾಕ್ ಮಾಡಿ, ಅಮೆರಿಕಾದ ಭದ್ರತೆಗೆ ಸವಾಲೆಸೆದಿದ್ದರು.

ಅಷ್ಟು ಮಾತ್ರವಲ್ಲದೆ ವಿಶ್ವ ವಾಣಿಜ್ಯ ಕಟ್ಟಡ ಹಾಗೂ ಪೆಂಟಗಾನ್​ ಮೇಲೆ ದಾಳಿ ಮಾಡುವ ಮೂಲಕ ಅಂತಹ ಅಮೆರಿಕಾದ ಬೆವರಿಳಿಸಿದ್ದರು. ಅವರು ಅಲ್​ಖೈದಾ ಭಯೋತ್ಪಾದನಾ ಸಂಘಟನೆಗೆ ಸೇರಿದವರೆಂದು ನಂತರ ಗೊತ್ತಾಗಿತ್ತು.

ಸೆಪ್ಟೆಂಬರ್ 11, 2001ರ ದಾಳಿ

ಹೈಜಾಕ್ ಮಾಡಲಾಗಿದ್ದ ಅಮೆರಿಕನ್ ಏರ್​ಲೈನ್ಸ್ ಫ್ಲೈಟ್-11 ಮತ್ತು ಯುನೈಟೆಡ್ ಏರ್ಲೈನ್ಸ್ ಫ್ಲೈಟ್- 175 ವಿಮಾನಗಳ ಮೂಲಕ ವಿಶ್ವ ವಾಣಿಜ್ಯ ಕೇಂದ್ರದ ಉತ್ತರ ಹಾಗೂ ದಕ್ಷಿಣದಲ್ಲಿನ ಅವಳಿ ಗೋಪುರಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರ ತಂಡ, ಸುಮಾರು 2753 ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ಕಟ್ಟಡದಲ್ಲಿ ಹಾಗೂ ಕಟ್ಟಡದ ಬಳಿಯಿದ್ದ ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಪೆಂಟಗಾನ್ ಕಟ್ಟಡದ ಮೇಲೆ ಮೆರಿಕನ್ ಏರ್​ಲೈನ್ಸ್ ಫ್ಲೈಟ್- 77ರ ಮೂಲಕ ದಾಳಿ ಮಾಡಿದ ಉಗ್ರರು, ಅಲ್ಲಿಯೂ ರಕ್ತದೋಕುಳಿ ಹರಿಸಿದ್ದರು. ಇಲ್ಲಿ ಸತ್ತಿದ್ದು ಸುಮಾರು 184 ಮಂದಿ.

ಉಳಿದ ಮತ್ತೊಂದು ವಿಮಾನವಾದ ಯುನೈಟೆಡ್ ಏರ್ಲೈನ್ಸ್ ಫ್ಲೈಟ್- 93ಅನ್ನು ಪೆನ್ಸಿಲ್ವೇನಿಯಾ ಬಳಿಯ ಅಪಘಾತಕ್ಕೆ ಈಡಾಗುವಂತೆ ಮಾಡುವ ಮೂಲಕ 40 ಪ್ರಯಾಣಿಕರು ಹಾಗೂ ವಿಮಾನದಲ್ಲಿದ್ದ ಸಿಬ್ಬಂದಿ ಜೀವಕ್ಕೆರವಾಗಿದ್ದರು ಈ ಆಲ್​ಖೈದಾ ಸಂಘಟನೆಯ ಯಮಕಿಂಕರರು.

ಉಗ್ರರಿಂದ ಹೈಜಾಕ್​ ಆಗಿದ್ದ ವಿಮಾನವನ್ನು ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸಿದ್ದರು. ಇದೇ ಕಾರಣವಾಗಿ ಉಗ್ರರು ಜನವಸತಿ ಇರದ ಸ್ಥಳದಲ್ಲಿಯೇ ವಿಮಾನವನ್ನು ಅಪಘಾತಕ್ಕೆ ಈಡು ಮಾಡಿದ್ದಾರೆ ಎಂದು ಇಂದಿಗೂ ಕೆಲವು ತಜ್ಞರು ಹೇಳುವ ಮಾತು.

ಉಂಡ ಮನೆಗೆ ದ್ರೋಹ ಬಗೆದ ಒಸಾಮಾ.. ತಪ್ಪಿಗೆ ಶಿಕ್ಷೆ ಅನುಭವಿಸಿದ ಅಮೆರಿಕಾ!

ಆಲ್​​ಖೈದಾ, ಪಾಕಿಸ್ತಾನ ಮೂಲದ ಉಗ್ರಗಾಮಿ ಗುಂಪು. ಈ ಗುಂಪಿನ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್​ನನ್ನು ಪೋಷಿಸಿದ್ದೇ ಅಮೆರಿಕಾ. ಕೆಲವೊಂದು ಬಾರಿ ಅಮೆರಿಕಾವನ್ನು ಲಾಡೆನ್ ರಕ್ಷಣಾ ಗುರಾಣಿಯಾಗಿಯೂ ಬಳಸಿಕೊಂಡಿದ್ದ. ಅಲ್​ಖೈದಾ ಸೇರಿ ಹಲವು ಭಯೋತ್ಪಾದನಾ ಸಂಘಟನೆಗಳಿಗೆ ಬೇಕಾದ ಹಣ, ಸಾಮಗ್ರಿಗಳನ್ನು ಅಮೆರಿಕಾವೇ ಪೂರೈಸುತ್ತಿತ್ತು ಅನ್ನೋದು ಆಗಾಗ ಕೇಳಿ ಬರುತ್ತಿತ್ತು.

ಅಲ್​ಖೈದಾ ಪಾಕ್​ನಲ್ಲಿ ಜನ್ಮ ತಾಳಿದರೂ ಅದರ ಕಾರ್ಯಾಚರಣೆ ಅಫ್ಘಾನಿಸ್ತಾನದಲ್ಲಿಯೇ ಇತ್ತು. ದಾಳಿಯ ನಂತರ ಒಸಮಾ ಬಿನ್ ಲಾಡೆನ್ ಆಫ್ಘಾನಿಸ್ತಾನದಲ್ಲಿಯೇ ಅಡಗಿ ಕುಳಿತ. ಆದರೂ ಪಟ್ಟು ಬಿಡದ ಅಮೆರಿಕ ಸುಮಾರು 10 ವರ್ಷಗಳ ನಂತರ ಅಂದರೆ 2 ಮೇ 2011ರಂದು ಅವನ ಸ್ವಂತ ನೆಲದಲ್ಲಿಯೇ ಯಾರೂ ಊಹಿಸಿರದಂತಹ ಮಿಲಿಟರಿ ಕಾರ್ಯ ನಡೆಸಿ, ಕೊಂದು ಹಾಕಿತು.

ಈಗಲೂ ಕೂಡ ಅಫ್ಘಾನಿಸ್ತಾನದಲ್ಲಿ ಅಮೆರಿಕಾ ಸೇನೆ ನೆಲೆಯೂರಿದ್ದು, ಕೆಲವು ಶಾಂತಿ ಒಪ್ಪಂಗಳಿಗೆ ಸಹಿ ಹಾಕಿದೆ. ಅಮೆರಿಕಾದಲ್ಲಿ ಪ್ರತೀ ವರ್ಷ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರಿಗಾಗಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರಸ್ತುತ ಕೊರೊನಾ ಕಾರಣವಾಗಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರಿಗಾಗಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಮಂದಿ ಈ ಸ್ಥಳಕ್ಕೆ ಬಂದು ತಮ್ಮ ಕುಟುಂಬಸ್ಥರನ್ನು ನೆನೆದು, ಶ್ರದ್ಧಾಂಜಲಿ ಸಲ್ಲಿಸುತ್ತಾರೆ.

Last Updated : Sep 11, 2020, 10:49 AM IST

ABOUT THE AUTHOR

...view details