ಮೊಂಟಾನಾ (ಅಮೆರಿಕ):ಸಿಯಾಟಲ್ ಮತ್ತು ಚಿಕಾಗೊ ನಡುವೆ ಚಲಿಸುತ್ತಿದ್ದ ಅಮ್ಟ್ರಾಕ್ ರೈಲು ಹಳಿ ತಪ್ಪಿದ್ದು ಮೂವರು ಮೃತಪಟ್ಟಿರುವ ಘಟನೆ ಮೊಂಟಾನಾದಲ್ಲಿ ನಡೆದಿದೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಿಯಾಟಲ್ನಿಂದ ಚಿಕಾಗೋಗೆ ಚಲಿಸುವ ಎಂಪೈರ್ ಬಿಲ್ಡರ್ ರೈಲಿನ ಐದು ಬೋಗಿಗಳು ಹಳಿ ತಪ್ಪಿವೆ ಎಂದು ಅಮ್ಟ್ರಾಕ್ ವಕ್ತಾರ ಜೇಸನ್ ಅಬ್ರಾಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೈಲಿನಲ್ಲಿ ಸುಮಾರು 147 ಪ್ರಯಾಣಿಕರು ಮತ್ತು 13 ಸಿಬ್ಬಂದಿ ಇದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.