ಜೋಹಾನ್ಸಬರ್ಗ್: ದಕ್ಷಿಣ ಆಫ್ರಿಕಾದ ಸಂಸತ್ ಸದಸ್ಯರು ನಡೆಸುತ್ತಿದ್ದ ವಿಡಿಯೋ ಕಾನ್ಫರೆನ್ಸ್ ಹ್ಯಾಕ್ ಮಾಡಿ, ಮಧ್ಯದಲ್ಲಿ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟಿದ್ದರಿಂದ ಭಾರಿ ಮುಜುಗರದ ಸನ್ನಿವೇಶ ಉಂಟಾಗಿದ್ದ ಬಗ್ಗೆ ವರದಿಯಾಗಿದೆ. ರಾಷ್ಟ್ರೀಯ ಸಂಸತ್ತಿನ ಸ್ಪೀಕರ್ ಆಗಿರುವ ಮಹಿಳೆ ಥಂಡಿ ಮೊಡಿಸೆ ಅವರನ್ನು ಗುರಿಯಾಗಿಟ್ಟುಕೊಂಡು, ಲೈಂಗಿಕವಾಗಿ ಅವಮಾನಿಸುವ ಹಾಗೂ ಜನಾಂಗೀಯ ನಿಂದನೆಯ ಚಿತ್ರಗಳನ್ನು ಹ್ಯಾಕರ್ಗಳು ಕಾನ್ಫರೆನ್ಸ್ ಮಧ್ಯೆ ಹರಿಬಿಟ್ಟಿದ್ದಾರೆ.
ಸಂಸದರ ಝೂಮ್ ಕಾನ್ಫರೆನ್ಸ್ ಹ್ಯಾಕ್ ; ಅಶ್ಲೀಲ ಚಿತ್ರ ಪ್ರದರ್ಶನ!! - ಜನಾಂಗೀಯ ನಿಂದನೆ
ಝೂಮ್ ಆ್ಯಪ್ ಬಳಕೆ ಸುರಕ್ಷತವಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಸಂಸದರ ಝೂಮ್ ವರ್ಚ್ಯುವಲ್ ಕಾನ್ಫರೆನ್ಸ್ ಹ್ಯಾಕ್ ಮಾಡಲಾಗಿದೆ.
South Africa parliament video call hacked
ಝೂಮ್ ಆ್ಯಪ್ ಮೂಲಕ ಕಾನ್ಫರೆನ್ಸ್ ನಡೆಸುವುದು ಸೂಕ್ತವಲ್ಲ ಎಂದು ಥಂಡಿ ಮೊಡಿಸೆ ಮೊದಲೇ ಆತಂಕ ವ್ಯಕ್ತಪಡಿಸಿದ್ದರು. ಕೊನೆಗೂ ಝೂಮ್ ಆ್ಯಪ್ ಕಾನ್ಫರೆನ್ಸ್ ಹ್ಯಾಕ್ ಆದ ನಂತರ ಬೇರೆ ಲಿಂಕ್ ಮೂಲಕ ವರ್ಚ್ಯುವಲ್ ಸಭೆ ಮುಂದುವರಿಸಲಾಯಿತು. ಝೋಂಬ್ ಬಾಂಬಿಂಗ್ ಅಥವಾ ಝೂಮ್ ಹ್ಯಾಕಿಂಗ್ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ.