ಕರ್ನಾಟಕ

karnataka

ETV Bharat / international

ಪಾಕ್​ ವೇಗಿಗಳ ಮುಂದೆ ಮಂಡಿಯೂರಿದ ದ.ಆಫ್ರಿಕಾ... ಸರಣಿ 2-2ರಲ್ಲಿ ಸಮಬಲ

ಟಾಸ್​ ಗೆದ್ದ ಪಾಕ್ ನಾಯಕ ಮಲ್ಲಿಕ್​​ ಎದುರಾಳಿ ತಂಡಕ್ಕೆ ಬ್ಯಾಟಿಂಗ್​ ಅಹ್ವಾನ ನೀಡಿದರು. ಇದರ ಫಲ ಬೇಗನೆ ಫಲಿಸಿತು. ಕೇವಲ 18 ರನ್​ಗಳಿಸುವಷ್ಟರಲ್ಲಿ ಡಿಕಾಕ್(0)​ ಹಾಗೂ ಕಳೆದ ಪಂದ್ಯದ ಹೀರೋ ರೀಝಾ ಹೆಂಡ್ರಿಕ್ಸ್​(2) ಪೆವಿಲಿಯನ್​ ಸೇರಿಕೊಂಡರು.

Cricket

By

Published : Feb 7, 2019, 11:57 PM IST

ಜೋಹಾನ್ಸ್​ಬರ್ಗ್​: ಪಾಕಿಸ್ತಾನ ತಂಡ ಬೌಲಿಂಗ್​ ಹಾಗೂ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಅತಿಥೇಯ ದ.ಆಫ್ರಿಕಾ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ 2-2 ರಲ್ಲಿ ಸಮಬಲ ಸಾಧಿಸಿದೆ.

ಟಾಸ್​ ಗೆದ್ದ ಪಾಕ್ ನಾಯಕ ಮಲ್ಲಿಕ್​​ ಎದುರಾಳಿ ತಂಡಕ್ಕೆ ಬ್ಯಾಟಿಂಗ್​ ಅಹ್ವಾನ ನೀಡಿದರು. ಇದರ ಫಲ ಬೇಗನೆ ಫಲಿಸಿತು. ಕೇವಲ 18 ರನ್​ಗಳಿಸುವಷ್ಟರಲ್ಲಿ ಡಿಕಾಕ್(0)​ ಹಾಗೂ ಕಳೆದ ಪಂದ್ಯದ ಹೀರೋ ರೀಝಾ ಹೆಂಡ್ರಿಕ್ಸ್​(2) ಪೆವಿಲಿಯನ್​ ಸೇರಿಕೊಂಡರು. ನಂತರ ಒಂದಾದ ಆಮ್ಲ (59) ಹಾಗೂ ಪ್ಲೆಸಿಸ್​(57) 3ನೇ ವಿಕೆಟ್​ಗೆ 101 ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು.

ಆದರೆ ಇವರಿಬ್ಬರ ವಿಕೆಟ್​ ಪತನದ ನಂತರ ತರಗೆಲೆಯಂತೆ ಉದುರಿದ ಹರಿಣಗಳ ಪಡೆ 41 ಓವರ್​ಗಳಲ್ಲಿ ಕೇವಲ 164 ರನ್​ಗೆ ಸರ್ವ ಪತನ ಕಂಡಿತು. ಅದ್ಭುತ ಬೌಲಿಂಗ್​ ದಾಳಿ ನಡೆಸಿದ ಉಸ್ಮಾನ್​ ಖಾನ್​ 4, ಶಾಹೀನ್​ ಅಫ್ರಿದಿ 2, ಶದಾಬ್​ ಖಾನ್​ 2, ಇಮಾದ್​ ವಾಸಿಂ,ಅಮೀರ್ ತಲಾ ಒಂದು ವಿಕೆಟ್​ ಪಡೆದರು.​

165 ರನ್​ಗಳ ಗುರಿ ಪಡೆದಿದ್ದ ಪಾಕಿಸ್ತಾನ 2 ವಿಕೆಟ್​ ಕಳೆದುಕೊಂಡು 31.3 ಓವರ್​ಗಳಲ್ಲಿ ಗುರಿ ತಲುಪಿ ಜಯ ಸಾಧಿಸಿತು. ಇಮಾಮ್​ ಉಲ್​-ಹಕ್​ 71 ರನ್​ಗಳಿಸಿ ಪೆಹ್ಲುಕ್ವಾಯೋಗೆ ಹಾಗೂ ಫಾಕರ್​ ಝಮಾನ್ (44) ತಾಹಿರ್​ಗೆ ವಿಕೆಟ್ ಒಪ್ಪಿಸಿದರು.​ ಕೊನೆಗೆ ಬಾಬರ್​ ಅಜಾಮ್​ 41 ಹಾಗೂ ರಿಜ್ವಾನ್​ ತಾವೆದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ಗೆಲುವಿನ ದಡ ಸೇರಿಸಿದರು.

5 ಪಂದ್ಯಗಳ ಸರಣಿಯಲ್ಲಿ ಎರಡು ತಂಡಗಳು 2-2 ರಲ್ಲಿ ಸಮಬಲ ಸಾಧಿಸಿದ್ದು, ಮುಂದಿನ ಪಂದ್ಯ ಎರಡು ತಂಡಕ್ಕೂ ಮಹತ್ವದ ಪಂದ್ಯವಾಗಲಿದೆ. ಕೊನೆಯ ಪಂದ್ಯ ಜನವರಿ 30 ಕೇಪ್​ಟೌನ್​ನಲ್ಲಿ ನಡೆಯಲಿದೆ.

ABOUT THE AUTHOR

...view details