ಕರ್ನಾಟಕ

karnataka

ETV Bharat / headlines

ನಾಲ್ಕು ಮೊಟ್ಟೆ ಇಟ್ಟ ಕೆಂಪು ಟಿಟ್ಟಿಭ : 4 ತಿಂಗಳು ಮಳೆಯಾಗುತ್ತಾ?

ಮಳೆಗಾಲದ ಮೊದಲು ಈ ಹಕ್ಕಿಗಳು ಮೊಟ್ಟೆಗಳನ್ನು ಇಡುತ್ತವೆ. ಕೆಂಪು ಟಿಟ್ಟಿಭ ಹಕ್ಕಿ 2 ಮೊಟ್ಟೆಗಳನ್ನು ಹಾಕಿದರೆ, ಮಳೆಗಾಲದ ಅವಧಿ 2 ತಿಂಗಳುಗಳು ಎಂದು ನಂಬಲಾಗುತ್ತದೆ. ಹಾಗೆ ಈ ಬಾರಿ ನಾಗಾಲಾ ಭಂಡ್‌ನ ಹೊಲಗಳ ತುದಿಯಲ್ಲಿ ಕೆಂಪು ಟಿಟ್ಟಿಭದ 4 ಮೊಟ್ಟೆಗಳು ಕಂಡು ಬಂದಿವೆ..

tithari-bird-eggs-and-weather-forecast-in-bharatpur
tithari-bird-eggs-and-weather-forecast-in-bharatpur

By

Published : Jun 1, 2021, 9:53 PM IST

ಭಾರತ್ಪುರ: ಈ ಬಾರಿ ಕೆಂಪು ಟಿಟ್ಟಿಭ ಮಾನ್ಸೂನ್‌ಗೆ ಮುಂಚಿತವಾಗಿ ನಾಲ್ಕು ಮೊಟ್ಟೆಗಳನ್ನು ಹಾಕಿದೆ. ಈ ಹಿನ್ನೆಲೆ ಸ್ಥಳೀಯ ಹವಾಮಾನಶಾಸ್ತ್ರಜ್ಞರು ಅಂದರೆ ಗ್ರಾಮದ ಹಿರಿಯರು, ಈ ಬಾರಿ ಮಳೆಗಾಲವು ಸಂಪೂರ್ಣ 4 ತಿಂಗಳುಗಳ ಕಾಲ ಇರುತ್ತದೆ ಮತ್ತು ಉತ್ತಮ ಮಾನ್ಸೂನ್ ಬರುವ ಸಾಧ್ಯತೆಗಳಿವೆ ಎಂದು ನಂಬಿದ್ದಾರೆ.

ತಮ್ಮ ಹಿರಿಯರು ಮತ್ತು ಪೂರ್ವಜರು ಪ್ರಾಣಿಗಳು, ಪಕ್ಷಿಗಳು ಮತ್ತು ಪ್ರಾಣಿಗಳ ಚಲನೆಯಿಂದ ಮುಂಬರುವ ಹವಾಮಾನವನ್ನು ತಿಳಿದುಕೊಳ್ಳುತ್ತಿದ್ದರು ಎಂದು ನಾಗ್ಲಾ ಭಂಡ್ ನಿವಾಸಿ ಯಾದ್ರಾಮ್​ ಹೇಳಿದ್ದಾರೆ. ಹಿರಿಯರು ತಮ್ಮ ಮಕ್ಕಳಿಗೆ ಈ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ಹಿರಿಯರಿಂದ ಪಡೆದ ಜ್ಞಾನದ ಪ್ರಕಾರ, ಮಾನ್ಸೂನ್ ಅಂದಾಜು ಮಾಡಲು ಕೆಂಪು ಟಿಟ್ಟಿಭ ಹಕ್ಕಿಯ ಚಟುವಟಿಕೆ ವೀಕ್ಷಣೆ ಮಾಡಲಾಗುತ್ತದೆ ಎಂದು ಯಾದ್ರಾಮ್ ಹೇಳಿದ್ದಾರೆ.

ನಾಲ್ಕು ಮೊಟ್ಟೆಗಳು :ಮಳೆಗಾಲದ ಮೊದಲು ಈ ಹಕ್ಕಿಗಳು ಮೊಟ್ಟೆಗಳನ್ನು ಇಡುತ್ತವೆ. ಕೆಂಪು ಟಿಟ್ಟಿಭ ಹಕ್ಕಿ 2 ಮೊಟ್ಟೆಗಳನ್ನು ಹಾಕಿದರೆ, ಮಳೆಗಾಲದ ಅವಧಿ 2 ತಿಂಗಳುಗಳು ಎಂದು ನಂಬಲಾಗುತ್ತದೆ.

ಹಾಗೆ ಈ ಬಾರಿ ನಾಗಾಲಾ ಭಂಡ್‌ನ ಹೊಲಗಳ ತುದಿಯಲ್ಲಿ ಕೆಂಪು ಟಿಟ್ಟಿಭದ 4 ಮೊಟ್ಟೆಗಳು ಕಂಡು ಬಂದಿವೆ. ಹೀಗಾಗಿ, ಈ ಬಾರಿ ಮಳೆಗಾಲವು 4 ತಿಂಗಳು ಇರುತ್ತದೆ ಮತ್ತು ಇದು ಉತ್ತಮ ಮಳೆಗಾಲದ ಸಂಕೇತವಾಗಿದೆ ಎಂದು ನಂಬಲಾಗಿದೆ.

ಮೊಟ್ಟೆಗಳು

24 ಗಂಟೆಗಳಲ್ಲಿ ಮಳೆ ಬೀಳುತ್ತದಂತೆ :ಪ್ರಾಣಿಗಳು ಮತ್ತು ಪಕ್ಷಿಗಳ ಎಲ್ಲಾ ಚಟುವಟಿಕೆಗಳ ಆಧಾರದ ಮೇಲೆ ಹವಾಮಾನವನ್ನು ಅಂದಾಜಿಸಲಾಗುತ್ತದೆ ಎಂದು ಯಾದವ್ ಹೇಳಿದ್ದಾರೆ. ಒಂದು ಪಕ್ಷಿ ಧೂಳಿನ ಮಣ್ಣಿನಲ್ಲಿ ಸ್ನಾನ ಮಾಡಿದರೆ ಅದು ಶೀಘ್ರದಲ್ಲೇ ಮಳೆಯ ಸಂಕೇತವಾಗಿದೆ ಎಂದು ಅರ್ಥ, ಹಾಗೆ 24 ಗಂಟೆಗಳಲ್ಲಿ ಮಳೆ ಬೀಳುತ್ತದೆ ಎಂಬುದು ನಂಬಿಕೆ.

ಇರುವೆಗಳ ಸಾಲಿನ ಮುನ್ಸೂಚನೆ ಏನು?:ಅದೇ ರೀತಿ, ಇರುವೆಗಳು ಕ್ಯೂ ಮಾಡಿ ಮೊಟ್ಟೆಗಳನ್ನು ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕೊಂಡೊಯ್ಯುವುದನ್ನು ನೋಡಿದರೆ, ಶೀಘ್ರದಲ್ಲೇ ಮಳೆ ಬೀಳಲಿದೆ ಎಂದು ಅರ್ಥಮಾಡಿಕೊಳ್ಳಬೇಕಂತೆ. ಇರುವೆಗಳು ನೆಲದಲ್ಲಿನ ತೇವಾಂಶವನ್ನು ಬಹಳ ಬೇಗನೆ ತಿಳಿದುಕೊಳ್ಳುತ್ತವೆ ಎಂದು ಹಿರಿಯರು ನಂಬುತ್ತಾರೆ. ಅದಕ್ಕಾಗಿಯೇ ಸಂಭವನೀಯ ಮಳೆಯ ದೃಷ್ಟಿಯಿಂದ ಅವು ತಮ್ಮ ಮೊಟ್ಟೆಗಳನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತವೆ ಎಂದಿದ್ದಾರೆ.

ABOUT THE AUTHOR

...view details