ಕರ್ನಾಟಕ

karnataka

ETV Bharat / headlines

ಡಿಕೆಶಿ ನ್ಯಾಯಾಂಗ ಬಂಧನ ವಿಸ್ತರಣೆ; ನಾಳೆ ಜಾಮೀನು ಅರ್ಜಿ ವಿಚಾರಣೆ

ದೆಹಲಿ ನ್ಯಾಯಾಲಯ ಮಾಜಿ ಸಚಿವ ಡಿಕೆ ಶಿಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿತು. ಇಡಿ ಮತ್ತು ಡಿಕೆಶಿ ಪರ ವಕೀಲರ ವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ನಾಳೆಗೆ (ಬುಧವಾರ) ಮುಂದೂಡಿದೆ.

ಡಿಕೆಶಿ

By

Published : Sep 17, 2019, 3:11 PM IST

Updated : Sep 17, 2019, 5:46 PM IST

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳ ವಶದಲ್ಲಿದ್ದ ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿರುವ ಕೋರ್ಟ್‌, ಅರ್ಜಿ ವಿಚಾರಣೆಯನ್ನು ನಾಳೆಗೆ (ಬುಧವಾರ) ಮುಂದೂಡಿದೆ.

ನ್ಯಾಯಾಲಯದಲ್ಲಿ ನಡೆದ ವಾದ- ಪ್ರತಿವಾದದ ವಿವರ:

ಡಿಕೆಶಿ ಪರ ಅಭಿಷೇಕ್ ಮನುಸಿಂಘ್ವಿ, ಇಡಿ ಪರ ನಟರಾಜ್‌ ವಾದ ಮಂಡನೆ

* ಆಸ್ಪತ್ರೆಯಲ್ಲಿ ವೈದ್ಯರ ನಿರ್ಧಾರದ ಬಳಿಕ ಮುಂದಿನ ಕ್ರಮ

* ಡಿಕೆಶಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್​, ಆಸ್ಪತ್ರೆಯಲ್ಲಿರಲು ಅವಕಾಶ ಮಾಡಿ ಕೊಡುವಂತೆ ಕೋರ್ಟ್​ಗೆ ಸಿಂಘ್ವಿ ಮನವಿ

* 23 ವರ್ಷದ ಮಗಳು 108 ಕೋಟಿ ರೂ. ವ್ಯವಹಾರ ಮಾಡಿದ್ದಾರೆ ಎಂದರೆ ನಂಬಲು ಸಾಧ್ಯವೇ? ಇಡಿ ವಕೀಲರ ಪ್ರಶ್ನೆ

* ಆರೋಪಿಗಳು ಎಲ್ಲರೂ ಸೇರಿ ಕ್ರಿಮಿನಲ್​ ಒಳಸಂಚು ಮಾಡಿದ್ದಾರೆ: ನಟರಾಜ್​ ವಾದ

* ಬೇರೆ ಬೇರೆ ಸ್ಥಳಗಳು ಡಿಕೆಶಿ ನಿಯಂತ್ರಣದಲ್ಲಿದ್ದವು. 9 ಮಂದಿಗೆ ಸಮನ್ಸ್‌ ನೀಡಿ ಹೇಳಿಕೆ ಪಡೆದಿದ್ದೇವೆ: ಇಡಿ ವಕೀಲರ ಸ್ಪಷ್ಟನೆ

* ಡಿಕೆಶಿಯ 143 ಕೋಟಿ ರೂ. ವ್ಯವಹಾರ ಮಾಡಿದ್ದಾರೆ. ಲೆಕ್ಕಪತ್ರವಿಲ್ಲದೆ 143 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ: ನಟರಾಜ್​ ಹೇಳಿಕೆ

* 41 ಲಕ್ಷ ರೂ. ಸಿಕ್ಕಿದೆ ಎಂದು ಪ್ರತಿ ಪಾದಿಸುತ್ತಿದ್ದಾರೆ. ಆದರೆ, 8.5 ಕೋಟಿ ರೂ. ಮೇಲೆ ಡಿಕೆಶಿಯ ಪರೋಕ್ಷ ಹಿಡಿತವಿದೆ: ಕೋರ್ಟ್​​ ಮುಂದೆ ನಟರಾಜ್​ ವಾದ

* ಅರ್ಧ ಗಂಟೆಯಲ್ಲಿ ವಿಚಾರಣೆ ಮುಗಿಸಲು ಎಎಸ್​ಒಜಿಗೆ ಸೂಚನೆ; ಒಂದು ಗಂಟೆ ಸಮಯ ಕೇಳಿದ ನಟರಾಜ್​

* ಡಿಕೆಶಿಗೆ ವೈದ್ಯಕೀಯ ಸೌಲಭ್ಯ ನೀಡಿದ್ದೇವೆ: ಇಡಿ ಪರ ಎಎಸ್​​ಜಿ ಕೆ.ಎಂ. ನಟರಾಜ್​ ವಾದ

* ಸಿಆರ್​ಪಿಸಿ ಸೆಕ್ಷನ್​ 161 ಅಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಸಿಆರ್​ಪಿಸಿ 161 ಅಡಿ ಸಾಕ್ಷಿಗಳ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ

* ದೆಹಲಿಯಲ್ಲಿ ಸಿಕ್ಕ ಹಣಕ್ಕೆ ಡಿಕೆಶಿ ಜವಾಬ್ದಾರರಲ್ಲ: ಹಿರಿಯ ವಕೀಲ ಮುಕುಲ್​ ರೋಹ್ಟಗಿ

* ಪಿಎಂಎಲ್​ಎ ಕೇಸ್​ ಏಕೆ ಹಾಕಿದ್ದಾರೆ ತಿಳಿಯುತ್ತಿಲ್ಲ. ದೆಹಲಿಯಲ್ಲಿ ಸಿಕ್ಕ ಹಣಕ್ಕೆ ದಾಖಲೆಗಳನ್ನು ಒದಗಿಸಲಾಗಿದೆ. ಆದರೂ ಪಿಎಂಎಲ್​ಎ ಅಡಿ ದೂರು ದಾಖಲಿಸಿಕೊಂಡಿದ್ದಾರೆ: ರೋಹ್ಟಗಿ

* ಡಿ.ಕೆ. ಶಿವಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವರಿಗೆ ಜಾಮೀನು ನೀಡಲೇಬೇಕು. ಡಿಕೆಶಿ ಪ್ರಕರಣವನ್ನು ಅನುಸೂಚಿತ ಅಪರಾಧವೆಂದು ಪರಿಗಣಿಸುವಂತಿಲ್ಲ: ಮುಕುಲ್​ ರೋಹ್ಟಗಿ

* ಹಿರಿಯ ವಕೀಲ ಮುಕುಲ್​ ರೋಹ್ಟಗಿ ವಾದನ ಮಂಡನೆ ಆರಂಭ

* ಪದೇ ಪದೇ ವಿಚಾರಣೆ ಮಾಡುವುದರಿಂದ ನಿಮಗೆ (ಇಡಿ) ಏನು ಸಿಗುತ್ತೆ? ಕೂಡಲೇ ಜಾಮೀನು ನೀಡಿ ಡಿಕೆಶಿಯನ್ನು ಬಿಡುಗಡೆ ಮಾಡಿ: ಮನು ಸಿಂಘ್ವಿ ನ್ಯಾಯಾಲಯದ ಮುಂದೆ ಕೋರಿಕೆ

* ತಂದೆಯ ಮರಣದ ನಂತರ ಆಸ್ತಿ ಮಕ್ಕಳಿಗೆ ಬಂದಿದೆ: ಸಿಂಘ್ವಿ

* ಸೆಕ್ಷೆನ್​ 45ರ ಅಡಿ ಪ್ರಾಸಿಕ್ಯೂಷನ್​ಗೆ ಜಾಮೀನು ವಿರೋಧಿಸುವ ಅವಕಾಶವಿದೆ: ಹೈಕೋರ್ಟ್​ ಮತ್ತು ಸುಪ್ರೀಂಕೋರ್ಟ್​ ಆದೇಶ ಉಲ್ಲೇಖಿಸಿದ ಡಿಕೆಶಿ ಪರ ವಕೀಲ

* ನನ್ನ ಅಳಿಯ ತಮ್ಮ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಅಷ್ಟೇ ಅಲ್ಲ, ನನ್ನ ಅಳಿಯನಿಗೆ ಇದುವರೆಗೂ ಇಡಿ ಸಮನ್ಸ್​ ಜಾರಿ ಮಾಡಿಲ್ಲ

* ಬಂಧನಕ್ಕೆ ಪಡೆಯುವುದರಿಂದ ಸತ್ಯ ಹೊರ ಬರುತ್ತದಾ? ಇಲ್ಲಿವರೆಗೂ ಉತ್ತರ ಪಡೆಯಲು ಆಗಿಲ್ಲ ಎಂದು ಹೇಳುತ್ತಿದೆ ಇಡಿ, ಮತ್ತೆ ಕಸ್ಟಡಿಗೆ ಪಡೆದರೆ ಉತ್ತರ ಪಡೆಯಲು ಸಾಧ್ಯವೇ?

* ನನ್ನಿಂದ ಕೇವಲ 41 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. 8.59 ಕೋಟಿ ರೂ. ನನ್ನದಲ್ಲ

* ಇಡಿ ಪೂರ್ವಾಗ್ರಹ ಪೀಡಿತವಾಗಿ ವರ್ತಿಸುತ್ತಿದೆ: ಮನು ಸಿಂಘ್ವಿ ಆರೋಪ

* ನಾವು ಅವರ ಜಾಮೀನು ಅರ್ಜಿಯ ಮನವಿಯನ್ನು ವಿರೋಧಿಸುತ್ತೇವೆ: ಇಡಿ ಪರ ವಕೀಲ ನಟರಾಜ್​ ಆಕ್ಷೇಪಣೆ

* 317 ಖಾತೆಗಳು ಇವೆ ಎಂದು ಇಡಿ ಹೇಳುತ್ತಿದೆ. ಆದರೆ, ಡಿಕೆಶಿಗೆ ಸಂಬಂಧಿಸಿದ 20 ಖಾತೆಗಳು ಮಾತ್ರ ಇವೆ. ವಸ್ತುಸ್ಥಿತಿ ಹೀಗಿರುವಾಗ 317 ಖಾತೆಗಳು ಇವೆ ಎಂದು ಹೇಳುವುದು ಎಷ್ಟು ಸರಿ ಸಿಂಘ್ವಿ ಪ್ರಶ್ನೆ

* ಡಿಕೆಶಿ ಹೃದಯ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದಾರೆ ಜಾಮೀನು ಅಗತ್ಯವಾಗಿದೆ ಸಿಂಘ್ವಿ ಸ್ಪಷ್ಟನೆ

Last Updated : Sep 17, 2019, 5:46 PM IST

ABOUT THE AUTHOR

...view details