ಕರ್ನಾಟಕ

karnataka

ETV Bharat / headlines

COVID 19: ತಾನು ಓದದಿದ್ದರೂ ಪತ್ನಿಗೆ ವಿದ್ಯೆ ಕೊಡಿಸಿ ತಹಶೀಲ್ದಾರ್ ಮಾಡಿದ್ದ​ ಕಡ್ಡಿ ಸೀನ ಇನ್ನಿಲ್ಲ - COVID 19,

ಶಿವಮೊಗ್ಗದ ಕಾಮಾಕ್ಷಿ‌ ಬೀದಿಯ‌ ನಿವಾಸಿಯಾದ ಶ್ರೀನಿವಾಸ್ ಎಂಬಾತ ಈ ಹಿಂದೆ ರೌಡಿ ಶೀಟರ್​ ಆಗಿದ್ದನಂತೆ. ಆದರೆ ಇದೀಗ ಆತ ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದಾನೆ.

shivamogga  rowdy sheeter Shrinivas
shivamogga rowdy sheeter Shrinivas

By

Published : May 27, 2021, 3:01 PM IST

Updated : May 27, 2021, 4:07 PM IST

ಶಿವಮೊಗ್ಗ: ತಾನು ಓದದಿದ್ದರೂ ತನ್ನ ಪತ್ನಿಯನ್ನು ಕೆಎಎಸ್ ಶಿಕ್ಷಣ ಕೊಡಿಸಿ ತಹಶೀಲ್ದಾರ್ ಮಾಡಿದ್ದ ರೌಡಿ‌ ಶೀಟರ್ COVIDಗೆ ಬಲಿಯಾಗಿದ್ದಾನೆ.

ಶ್ರೀನಿವಾಸ್​ ಅಲಿಯಾಸ್​ ಕಡ್ಡಿ ಸೀನ ಕೊರೊನಾಗೆ ಬಲಿಯಾದವ. ಇಲ್ಲಿನ ಕಾಮಾಕ್ಷಿ‌ ಬೀದಿಯ‌ ನಿವಾಸಿಯಾದ ಶ್ರೀನಿವಾಸ್ ಈ ಹಿಂದೆ ರೌಡಿ ಶೀಟರ್ ಆಗಿದ್ದನಂತೆ. ಈತ ಕಾರಬ್ ಶಿವುನ ಪ್ರಾಣ ಸ್ನೇಹಿತ.

ತನ್ನ ಅಕ್ಕನ ಮಗಳನ್ನೇ ಮದುವೆಯಾಗಿದ್ದ ಸೀನ, ಆಕೆಯನ್ನು ಕೆಎಎಸ್ ಓದಿಸಿ ಕಳೆದ ಎರಡು ವರ್ಷದ ಹಿಂದೆ ತಹಶೀಲ್ದಾರ್ ಆಗಿ ಉದ್ಯೋಗ ದೊರಕುವಂತೆ ಮಾಡಿದ್ದ. ಆದರೆ ವಿಧಿಯ ಆಟಕ್ಕೆ ಶ್ರೀನಿವಾಸ್ ಬಲಿಯಾಗಿದ್ದಾನೆ.

ಎರಡು ದಿನಗಳ ಹಿಂದೆ ಜ್ವರ ಎಂದು ಮೆಗ್ಗಾನ್ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದ ಶ್ರೀನಿವಾಸ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾನೆ. ಅಪಘಾತವಾಗಿ ಬಿಲಗಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿ‌ಕೊಂಡಿದ್ದ ಶ್ರೀನಿವಾಸ್ ಊರುಗೋಲಿನ ಸಹಾಯದಿಂದ ಓಡಾಡುತ್ತಿದ್ದ. ಈತನಿಗೆ 7 ವರ್ಷದ ಮಗ ಇದ್ದಾನೆ.

Last Updated : May 27, 2021, 4:07 PM IST

ABOUT THE AUTHOR

...view details