ನವದೆಹಲಿ: ಕೋವಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್ ವಿ ಹೊರತುಪಡಿಸಿ ಹಲವು ತಿಂಗಳುಗಳ ಕಾಲ ದೇಶದಲ್ಲಿ ಕೊರೊನಾ ವೈರಸ್ ಲಸಿಕೆಗಳಿಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.
“ಕೋವಿಶೀಲ್ಡ್, ಕೊವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಹೊರತುಪಡಿಸಿ ಬೇರೆ ಯಾವುದೇ ಲಸಿಕೆಗಳನ್ನು ಸರ್ಕಾರ ಅನುಮೋದಿಸಿಲ್ಲ ಎಂಬ ನನ್ನ ಅನುಮಾನ ಸರಿಯಾಗಿದೆ. ದೇಶಿ ಲಸಿಕೆಗಳಿಗೆ ಮೊದಲು ಅನುಮೋದನೆ ನೀಡದೆ ಫೈಝರ್ ಮತ್ತು ಮೊಡೆರ್ನಾ ಲಸಿಕೆಗಳ ವಿಷಯದ ಕುರಿತು ಮಾತುಕತೆ ನಡೆಸಲು ಸರ್ಕಾರ ಏಕೆ ಮುಂದಾಯಿತು. ಯುಎಸ್ ಮತ್ತು ಇತರ ದೇಶಗಳು ಅನುಮೋದನೆ ನೀಡಿದಾಗಲೂ ಕೇಂದ್ರ ಸರ್ಕಾರ ಒಪ್ಪಿಗೆ ನೀಡಲು 8-9 ತಿಂಗಳುಗಳನ್ನು ಏಕೆ ತೆಗೆದುಕೊಂಡಿದೆ? ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಸಹ ಈ ಅನುಮಾನಗಳನ್ನು ವ್ಯಕ್ತಪಡಿಸಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು. ಆದರೆ ಇದಕ್ಕೆ ಕೇಂದ್ರದಿಂದ ಸ್ಪಷ್ಟ ಉತ್ತರ ಬಂದಿರಲಿಲ್ಲ.