ವಿಶಾಕಪಟ್ಟಣಂ: ಮಹಾಮಾರಿ ಕೊರೊನಾ 35 ದಿನಗಳ ಮಗುವಿಗೂ ವಕ್ಕರಿತ್ತು. ಆದರೆ, ಇನ್ನೂ ಪ್ರಪಂಚವನ್ನೇ ಸರಿಯಾಗಿ ಕಣ್ತೆರೆದು ನೋಡದ ಮಗು ಮಹಾಮಾರಿಯನ್ನು ಒದ್ದೋಡಿಸಿದೆ.
ಗಜುವಾಕಾ ನಾಡುಪುರ ಪ್ರದೇಶದ ಅಕುಲ ಪ್ರಶಾಂತಿ (31) ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಏಪ್ರಿಲ್ 27 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗು ಜನಿಸಿದ ತಂತರ ಉಸಿರಾಟದ ತೊಂದರೆಯಿಂದ ಬಳಲುತ್ತಿತ್ತು.
9ನೇ ದಿನ ತೀವ್ರ ಅಸ್ವಸ್ಥವಾಗಿತ್ತು. ಈ ಹಿನ್ನೆಲೆ ಮಗುವನ್ನು ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಮಗುವಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದಾಗ ಕೊರೊನಾ ಪಾಸಿಟಿವ್ ಕಂಡು ಬಂದಿದೆ.