ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಗೆಳತಿ, ನಟಿ ಅಂಕಿತಾ ಲೋಖಂಡೆ ಹಿಂದಿ ಬಿಗ್ ಬಾಸ್ ಸೀಸನ್ 17ರ ಸ್ಪರ್ಧಿ. ಮೊದಲ ಬಾರಿಗೆ ಅವರು ಸುಶಾಂತ್ ಜೊತೆ ಬ್ರೇಕಪ್ ಆದ ಸಂದರ್ಭವನ್ನು ತೆರೆದಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತಮ್ಮಿಬ್ಬರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸುಮಾರು ಏಳು ವರ್ಷಗಳ ಕಾಲ ನಾವು ಜೊತೆಯಾಗಿ ಇದ್ದೆವು. ಸುಶಾಂತ್ ಬಾಲಿವುಡ್ಗೆ ಎಂಟ್ರಿ ಕೊಟ್ಟು ಯಶಸ್ಸು ಗಳಿಸುತ್ತಿರುವ ಸಮಯದಲ್ಲಿ ನಾವಿಬ್ಬರು ದೂರವಾದೆವು. ಆ ಒಂದು ರಾತ್ರಿ ಎಲ್ಲವೂ ಬದಲಾಯಿತು ಎಂದು ಹೇಳಿದ್ದಾರೆ.
ಬಿಗ್ ಬಾಸ್ 17ರ ಸಹ ಸ್ಪರ್ಧಿಯಾಗಿರುವ ಮುನಾವರ್ ಫರೂಕಿ ಅವರೊಂದಿಗೆ ನಟಿ ಅಂಕಿತಾ ಲೋಖಂಡೆ, ಸುಶಾಂತ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. "ಅವನು ಇದ್ದಕ್ಕಿಂದ್ದಂತೆ ನನ್ನ ಜೀವನದಿಂದ ದೂರವಾದ. ಸುಶಾಂತ್ ಸಿಂಗ್ಗೆ ಬಾಲಿವುಡ್ನಲ್ಲಿ ಯಶಸ್ಸು ಸಿಕ್ಕ ಬಳಿಕ ಅವನ ಮೇಲೆ ಕೆಲವರು ಪ್ರಭಾವ ಬೀರಲು ಆರಂಭಿಸಿದರು. ಅವನು ನನ್ನ ಸನಿಹದಿಂದ ಏಕಾಏಕಿ ಮಾಯಾವಾಗಿಬಿಟ್ಟ. ಅವನ ಕಣ್ಣು ನೋಡುವಾಗ ಮೊದಲ ಪ್ರೀತಿ ಕಾಣಿಸಲೇ ಇಲ್ಲ. ಅವನು ನನ್ನಿಂದ ದೂರವಾಗುವಾಗ ಯಾವುದೇ ಕಾರಣವನ್ನು ನೀಡಿಲ್ಲ. ಇಂದಿಗೂ ನಾವಿಬ್ಬರು ಯಾಕಾಗಿ ದೂರವಾದೆವು ಎಂಬುದೇ ತಿಳಿದಿಲ್ಲ" ಎಂದಿದ್ದಾರೆ.
ಇದನ್ನೂ ಓದಿ:ಜೀ ರಿಷ್ತೆ ಅವಾರ್ಡ್ಸ್ 2020: ಸುಶಾಂತ್ನನ್ನು ನೆನಪಿಸಿಕೊಂಡ ನಟಿ ಅಂಕಿತಾ ಲೋಖಂಡೆ