ಕರ್ನಾಟಕ

karnataka

By

Published : Jun 6, 2022, 12:15 PM IST

Updated : Jun 6, 2022, 12:55 PM IST

ETV Bharat / entertainment

ಕುತೂಹಲ ಕೆರಳಿಸಿದ ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್ ಸಾಂಗ್​​... ಮೋಡಿ ಮಾಡ್ತಾರಾ ಕ್ರೇಜಿಸ್ಟಾರ್​​​ ಪುತ್ರ

ತ್ರಿವಿಕ್ರಮ ಚಿತ್ರ ತಂಡ ಬಾಕಿ ಉಳಿದಿದ್ದ, ಹಾಡಿನ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ.

Trivikrama movie shooting completed
ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದ 'ತ್ರಿವಿಕ್ರಮ' ಚಿತ್ರತಂಡ

ಕನ್ನಡ ಚಿತ್ರರಂಗದ ಶೋ ಮ್ಯಾನ್ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಮಕ್ಕಳಾದ ಮನುರಂಜನ್ ಹಾಗೂ ವಿಕ್ರಮ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ಗೊತ್ತಿರುವ ವಿಚಾರ. ಇದೀಗ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಅಭಿನಯದ ಚೊಚ್ಚಲ ಸಿನಿಮಾ ತ್ರಿವಿಕ್ರಮ, ಸ್ಯಾಂಡಲ್​​ವುಡ್ ನಲ್ಲಿ ಒಂದಲ್ಲ ಒಂದು ವಿಷಯಕ್ಕೆ ಸದ್ದು ಮಾಡುತ್ತಿದೆ. ಇತ್ತೀಚೆಗೆ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ತಮ್ಮ ಮಗನ‌ ಸಿನಿಮಾದ ಹೈಲೆಟ್ಸ್ ಬಗ್ಗೆ ಮಾತನಾಡಿದರು. ಈ ತ್ರಿವಿಕ್ರಮ ಚಿತ್ರ ತಂಡ ಬಾಕಿ ಉಳಿದಿದ್ದ, ಹಾಡಿನ ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಒಡೆದಿದೆ.

'ತ್ರಿವಿಕ್ರಮ' ಚಿತ್ರತಂಡ

ಇದನ್ನೂ ಓದಿ:ವಿಕ್ರಮ್ ರವಿಚಂದ್ರನ್ ತ್ರಿವಿಕ್ರಮನಿಗೆ ಸಾಥ್ ಕೊಟ್ಟ ಕರುನಾಡ ಚಕ್ರವರ್ತಿ!

ಯೋಗರಾಜ್ ಭಟ್ ಸಾಹಿತ್ಯ ರಚಿಸಿರುವ 'ಶಕುಂತಲಾ ಶೇಕ್ ಎ ಬಾಡಿ ಪ್ಲೀಸ್' ಎಂಬ ಹಾಡನ್ನು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಬೃಹತ್ ಸೆಟ್ ಹಾಗೂ ಕಲರ್ ಕಲರ್ ಕಾಸ್ಟೂಮ್​​ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅರ್ಜುನ್ ಜನ್ಯ ಸಂಗೀತ ಇರುವ ಈ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಕ್ಕಿ ಹಾಗೂ ಆಕಾಂಕ್ಷಾ ಶರ್ಮಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

'ತ್ರಿವಿಕ್ರಮ' ಚಿತ್ರತಂಡ

ಹಿರಿಯ ನಟಿ ತುಳಸಿ, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ತಾರಾಗಣದಲ್ಲಿದ್ದಾರೆ. ರೋಜ್, ಮಾಸ್ ಲೀಡರ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಸಹನಾ ಮೂರ್ತಿ ತ್ರಿವಿಕ್ರಮನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ಬಂಡವಾಳ ಹೂಡಿದ್ದಾರೆ.

'ತ್ರಿವಿಕ್ರಮ' ಚಿತ್ರತಂಡ

ಈಗಾಗಲೇ ಬಿಡುಗಡೆಯಾಗಿರುವ 'ಪ್ಲೀಸ್ ಮಮ್ಮಿ' ಹಾಡು ಮಿಲಿಯನ್​​ಗಟ್ಟಲೆ ಹಿಟ್ಸ್ ದಾಖಲಿಸಿ, ಟ್ರೆಂಡಿಂಗ್​​ನಲ್ಲಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಇರುವ ಈ ಹಾಡನ್ನು ವಿಜಯ್​​ ಪ್ರಕಾಶ್ ಹಾಡಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಕೆ.ಎಂ.ಪ್ರಕಾಶ್ ಸಂಕಲನವಿದೆ. ಸದ್ಯ ಪೋಸ್ಟರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ ತ್ರಿವಿಕ್ರಮ ಸಿನಿಮಾ, ಜೂ.24ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಇದನ್ನೂ ಓದಿ:'ತ್ರಿವಿಕ್ರಮ' ಚಿತ್ರತಂಡದಿಂದ ಕ್ರೇಜಿಸ್ಟಾರ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್

Last Updated : Jun 6, 2022, 12:55 PM IST

ABOUT THE AUTHOR

...view details