ಕರ್ನಾಟಕ

karnataka

ETV Bharat / entertainment

ಮುನಿಸು ಮರೆತು ಒಂದಾದ 'ಬಿಗ್​ ಬಾಸ್'​ ಸ್ಪರ್ಧಿಗಳು; ಗೆಳೆಯರ ನಡುವೆ ಅರಳಿತು ಸ್ನೇಹದ ಹೂವು - ಈಟಿವಿ ಭಾರತ ಕನ್ನಡ

BBK10: ಬಿಗ್​ ಬಾಸ್​ 'ಸೂಪರ್​ ಸಂಡೇ ವಿತ್​ ಸುದೀಪ' ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ.

Kannada Bigg Boss season 10 promo
ಮುನಿಸು ಮರೆತು ಒಂದಾದ 'ಬಿಗ್​ ಬಾಸ್'​ ಸ್ಪರ್ಧಿಗಳು; ಗೆಳೆಯರ ನಡುವೆ ಅರಳಿತು ಸ್ನೇಹದ ಹೂವು!

By ETV Bharat Karnataka Team

Published : Dec 10, 2023, 8:39 PM IST

ವೀಕೆಂಡ್​ ಬಂತೆಂದರೆ ಸಾಕು, ಬಿಗ್​ ಬಾಸ್​ ವೀಕ್ಷಕರ ಸಂಖ್ಯೆಯೂ ಏರುತ್ತದೆ. ಏಕೆಂದರೆ, ವಾರದ ಕೊನೆಯ ಸಂಚಿಕೆಗೆ ಸಪರೇಟ್​ ಫ್ಯಾನ್ಸ್​​ ಬೇಸ್​ ಇದೆ. ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್​​​ ಕಾರ್ಯಕ್ರಮ ನಡೆಸಿಕೊಟ್ಟು, ಒಬ್ಬರನ್ನು ಎಲಿಮಿನೇಟ್​ ಮಾಡುತ್ತಾರೆ. ಅತಿ ಹೆಚ್ಚು ಮತಗಳನ್ನು ಪಡೆದವರು ಮುಂದಿನ ವಾರಕ್ಕೆ ಪ್ರವೇಶ ಪಡೆದು, ಕಡಿಮೆ ಮತ ಗಳಿಸಿದವರು ಮನೆಯಿಂದ ಹೊರಬರುತ್ತಾರೆ. ಈ ವಾರದ ಶನಿವಾರದ ಪಂಚಾಯ್ತಿ ಮುಗಿದಿದ್ದು, ಇಂದು 'ಸೂಪರ್​ ಸಂಡೇ ವಿತ್​ ಸುದೀಪ' ಪ್ರಸಾರಗೊಳ್ಳಲಿದೆ.

ಈ ವಾರ ಸ್ಪರ್ಧಿಗಳಿಗೆ ರಾಕ್ಷಸರು ಮತ್ತು ಗಂಧರ್ವರು ಎಂಬ ವಿಶೇಷ ಟಾಸ್ಕ್​ವೊಂದನ್ನು ನೀಡಲಾಗಿತ್ತು. ಇದನ್ನು ಆಟವೆಂದು ಪರಿಗಣಿಸಿದ ಮನೆ ಮಂದಿ ವೈಯಕ್ತಿಕವಾಗಿ ಟಾರ್ಗೆಟ್​ ಮಾಡಿ ಆಡಿದ್ದರು. ಕೊನೆ ಕೊನೆಗೆ ಆಟವು ಆಜ್ಞೆಗಳ ಬದಲಾಗಿ ಶಿಕ್ಷೆಯ ರೂಪ ಪಡೆದುಕೊಂಡಿತ್ತು. ಸಂಗೀತಾ ಶೃಂಗೇರಿ ಹಾಗೂ ಪ್ರತಾಪ್​ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಬಗ್ಗೆ ಸುದೀಪ್​ ಯಾವ ರೀತಿಯಾಗಿ ಮನೆ ಮಂದಿಗೆ ಕ್ಲಾಸ್​ ತೆಗೆದುಕೊಳ್ಳುತ್ತಾರೆ ಎಂದು ನೋಡಲು ಜನರು ಕೂಡ ಕಾಯುತ್ತಿದ್ದರು.

ಅದರಂತೆ, ಶನಿವಾರದ ಕಿಚ್ಚನ ಪಂಚಾಯ್ತಿಯಲ್ಲಿ ಬಾರಿ ದೊಡ್ಡ ಚರ್ಚೆಯೇ ನಡೆಯಿತು. ಈ ವಾರದ ಕ್ಯಾಪ್ಟನ್​ ಆಗಿದ್ದ ಸ್ನೇಹಿತ್​ ತಮ್ಮ ಜವಾಬ್ದಾರಿಯನ್ನು ಮರೆತು ಆಡಿದ್ದರು. ಜಗಳ ಆಗುತ್ತಿರುವಾಗ, ಆಜ್ಞೆಗಳು ಶಿಕ್ಷೆಗಳಾಗಿ ಬದಲಾದಾಗ ಸುಮ್ಮನೆ ಕುಳಿತಿದ್ದ ಅವರನ್ನು ಕಿಚ್ಚ ಸುದೀಪ್​ ತಮ್ಮ ಮಾತುಗಳಿಂದಲೇ ತಿವಿದರು. ಕ್ಯಾಪ್ಟನ್​ ಆಗುವುದಕ್ಕೆ ನೀವು ಅರ್ಹರೇ? ಎಂದು ಪ್ರಶ್ನಿಸಿದರು. ಅಲ್ಲದೇ, ಮನೆ ಮಂದಿಗೆಲ್ಲಾ ಬುದ್ಧಿವಾದದ ಮಾತುಗಳನ್ನು ಹೇಳಿದರು. ಟಾಸ್ಕನ್ನು ಕ್ರಿಯೇಟಿವ್​ ಆಗಿ ಆಡಬಹುದಿತ್ತಲ್ಲವೇ? ಎಂದು ಪ್ರಶ್ನಿಸಿ, ಸ್ಪರ್ಧಿಗಳಿಗೆ ತಮ್ಮ ಮೇಲೆಯೇ ಪಶ್ಚಾತ್ತಾಪ ಮೂಡುವಂತೆ ಮಾಡಿದರು. ಕೊನೆಗೆ ಈ ವಾರ ನಾಮಿನೇಟ್​ ಆಗಿದ್ದ ಸಂಗೀತಾ ಮತ್ತು ಪ್ರತಾಪ್​ ಅವರನ್ನು ಜನರ ಮತಗಳನುಸಾರ ಸೇಫ್​ ಮಾಡಿದರು.

ಇಂದು 'ಸೂಪರ್​ ಸಂಡೇ ವಿತ್​ ಸುದೀಪ' ಸಂಚಿಕೆ ನಡೆಯಲಿದೆ. ಇದರಲ್ಲಿ ಈ ವಾರ ಯಾರು ಮನೆಗೆ ಹೋಗ್ತಾರೆ? ಅನ್ನೋದು ನಿರ್ಧಾರವಾಗಲಿದೆ. ಸಂಚಿಕೆಯ ಕೊನೆಯಲ್ಲಿ ಸುದೀಪ್​ ಅವರು ಅತ್ಯಂತ ಕಡಿಮೆ ಮತ ಪಡೆದ ಒಬ್ಬರನ್ನು ಎಲಿಮಿನೇಟ್​ ಮಾಡುತ್ತಾರೆ. ಅದಕ್ಕೂ ಮುನ್ನ, ಮನೆ ಮಂದಿಗೆ ಸುದೀಪ್​ ಚಿಕ್ಕ ಆಟ ಕೂಡ ಆಡಿಸುತ್ತಾರೆ. ಅದರ ಒಂದು ತುಣುಕನ್ನು ಕಲರ್ಸ್​ ಕನ್ನಡ ವಾಹಿನಿ ಹಂಚಿಕೊಂಡಿದೆ. 'ಗೆಳೆಯರ ನಡುವೆ ಮತ್ತೆ ಅರಳಿದೆ ಸ್ನೇಹದ ಹೂ' ಎಂಬ ಕ್ಯಾಪ್ಶನ್​ನೊಂದಿಗೆ ಪ್ರೋಮೋ ಬಿಡುಗಡೆಯಾಗಿದೆ.

ಈ ವಾರ ಜಗಳ, ಕಿತ್ತಾಟದಲ್ಲಿ ಮುನಿಸಿಕೊಂಡಿದ್ದ ಸ್ಪರ್ಧಿಗಳನ್ನು ಕಿಚ್ಚ ಸುದೀಪ್​ ಮತ್ತೆ ಒಂದು ಮಾಡಿದ್ದಾರೆ. ಬಿಳಿ ಗುಲಾಬಿಯನ್ನು ಸ್ಪರ್ಧಿಗಳ ಕೈಗೆ ಕೊಟ್ಟು, ನಿಮ್ಮಿಂದ ಆದ ತಪ್ಪನ್ನು ಈ ಮೂಲಕ ಸರಿಪಡಿಸಿಕೊಳ್ಳಿ ಎಂದು ಹೇಳುತ್ತಿರುವುದು ಪ್ರೋಮೋದಲ್ಲಿ ಕಾಣಬಹುದು. ಅದರಂತೆ, ವರ್ತೂರು ಅವರು ಪ್ರತಾಪ್​ ಬಳಿ ಹೋಗಿ, ತಾವು ಟಾಸ್ಕ್​ನಲ್ಲಿ ನೀರು ಎರೆಚಿದಕ್ಕಾಗಿ ಕ್ಷಮೆಯಾಚಿಸಿ, ಮತ್ತೆ ಮೊದಲಿನಂತೆ ಇರೋಣ ಎಂದು ಹೇಳುತ್ತಾರೆ. ಇದಕ್ಕೆ ಒಪ್ಪಿದ ಪ್ರತಾಪ್​, ವರ್ತೂರುರನ್ನು ಅಪ್ಪಿಕೊಂಡಿದ್ದಾರೆ. ಮತ್ತೊಂದೆಡೆ, ಬದ್ಧ ವೈರಿಗಳಂತಿದ್ದ ಕಾರ್ತಿಕ್​ ಮತ್ತು ವಿನಯ್​ ಕೂಡ ತಮ್ಮ ಮೊದಲ ಗೆಳತನವನ್ನು ಮತ್ತೆ ಮುಂದುವರೆಸಲು ಜೈ ಅಂದಿದ್ದಾರೆ.

ಒಟ್ಟಿನಲ್ಲಿ ಮನೆ ಮಂದಿ ನಡುವೆ ಇದ್ದ ಮುನಿಸನ್ನು ಸುದೀಪ್​ ಅವರು ಈ ರೀತಿಯಾಗಿ ಬಗೆ ಹರಿಸಿದ್ದಾರೆ. ಆದರೆ, ಈ ಸ್ನೇಹವನ್ನು ಸ್ಪರ್ಧಿಗಳು ಕೊನೆಯವರೆಗೂ ಉಳಿಸಿಕೊಳ್ಳುತ್ತಾರಾ? ಅಥವಾ ಮತ್ತೊಮ್ಮೆ ಜಗಳ ಮಾಡಿಕೊಳ್ಳುತ್ತಾರಾ? ಈ ವಾರ ಮನೆಯಿಂದ ಎಲಿಮಿನೇಟ್​ ಆಗೋರ್ಯಾರು? ಕಳೆದ ವಾರ ಯಾರನ್ನು ಮನೆಯಿಂದ ಹೊರ ಕಳುಹಿಸಿರಲಿಲ್ಲ. ಹೀಗಾಗಿ ಈ ವಾರ ಎರಡು ಎಲಿಮಿನೇಷನ್​ ನಡೆಯುತ್ತಾ? ಈ ಎಲ್ಲಾ ಕುತೂಹಲ ಪ್ರಶ್ನೆಗಳ ಉತ್ತರಕ್ಕಾಗಿ ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳು ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.

ಇದನ್ನೂ ಓದಿ:ಬಿಗ್​ ಬಾಸ್​: ಕಿಚ್ಚನ ಪಂಚಾಯಿತಿಯಲ್ಲಿ ಸುಂಟರಗಾಳಿ, ಮನೆಗೆ ವಾಪಸಾದ್ರು ಸಂಗೀತಾ - ಪ್ರತಾಪ್​

ABOUT THE AUTHOR

...view details