ಕರ್ನಾಟಕ

karnataka

ETV Bharat / entertainment

ಬಿಗ್​ ಬಾಸ್​: 'ಆನೆಯನ್ನು ಪಳಗಿಸುವ ಮಾವುತ' ಅಂತಿದ್ದ ಅವಿನಾಶ್​ ಮೇಕೆಯಾದ್ರು ನೋಡಿ - ಈಟಿವಿ ಭಾರತ ಕನ್ನಡ

BBK10: ರಕ್ಕಸರು ಮತ್ತು ಗಂಧರ್ವರ ನಡುವಿನ ಗುದ್ದಾಟ ತಾರಕಕ್ಕೆ ಏರಿರುವ ಹೊತ್ತಿನಲ್ಲಿಯೇ ಕಾಮಿಡಿ ಸನ್ನಿವೇಶಗಳಿಗೂ ಬಿಗ್​ ಬಾಸ್​ ಸಾಕ್ಷಿಯಾಗುತ್ತಿದೆ.

Bigg Boss kannada season 10 promo
ಬಿಗ್​ ಬಾಸ್​: 'ಆನೆಯನ್ನು ಪಳಗಿಸುವ ಮಾವುತ' ಅಂತಿದ್ದ ಅವಿನಾಶ್​ ಮೇಕೆಯಾದ್ರು ನೋಡಿ..

By ETV Bharat Karnataka Team

Published : Dec 7, 2023, 5:01 PM IST

ಕಿಚ್ಚ ಸುದೀಪ್​ ನಡೆಸಿಕೊಡುವ ಕನ್ನಡದ ಖ್ಯಾತ ರಿಯಾಲಿಟಿ ಶೋ 'ಬಿಗ್​ ಬಾಸ್​' ಪ್ರೇಕ್ಷಕರಿಗೆ ಹೆಚ್ಚು ಮನರಂಜನೆ ನೀಡುತ್ತಿದೆ. ದಿನಕ್ಕೊಂದು ಟಾಸ್ಕ್​ಗಳ ಜೊತೆ ಸ್ಪರ್ಧಿಗಳ ನಡುವಿನ ಸ್ಪರ್ಧೆ​ ಕೂಡ ಹೆಚ್ಚಾಗುತ್ತಿದೆ. ಈ ವಾರ ದೊಡ್ಮನೆಯಲ್ಲಿ ರಕ್ಕಸರು ಮತ್ತು ಗಂಧರ್ವರ ನಡುವೆ ಗುದ್ದಾಟ ಜೋರಾಗಿದೆ. ರಾಕ್ಷಸರು ಕ್ರೂರತೆ ಮೆರೆಯುತ್ತಿದ್ದರೆ, ಗಂಧರ್ವರು ತಮ್ಮ ಸಹನಾ ಶಕ್ತಿ ಸಾಬೀತುಪಡಿಸುತ್ತಿದ್ದಾರೆ.

ಎರಡೂ ತಂಡಗಳ ನಡುವಿನ ಜಿದ್ದಾ ಜಿದ್ದಿ ತಾರಕಕ್ಕೆ ಏರಿರುವ ಹೊತ್ತಿನಲ್ಲಿಯೇ ನಗೆ ಬುಗ್ಗೆ ಉಕ್ಕಿಸುವಂತಹ ಕಾಮಿಡಿ ಸನ್ನಿವೇಶಗಳಿಗೂ ಬಿಗ್​ ಬಾಸ್​ ಸಾಕ್ಷಿಯಾಗುತ್ತಿದೆ. ಇಂತಹದ್ದೊಂದು ಹಾಸ್ಯ ದೃಶ್ಯದ ಝಲಕ್​ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಾಣಿಸಿಕೊಂಡಿದೆ. ಆರಂಭದಲ್ಲಿ ರಕ್ಕಸರಾಗಿದ್ದ ಸಂಗೀತಾ ಅವರ ತಂಡವೀಗ ಗಂಧರ್ವರಾಗಿದ್ದಾರೆ. ಮೊದಲ ದಿನ ರಕ್ಕಸರಿಂದ ಕಿರುಕುಳ ಅನುಭವಿಸಿದ್ದ ವರ್ತೂರು ಸಂತೋಷ್ ಅವರ ತಂಡ ದುಪ್ಪಟ್ಟು ರೋಷದೊಂದಿಗೆ ರಕ್ಕಸರಾಗಿ ಗಂಧರ್ವರ ಮೇಲೆ ದಾಳಿ ಮಾಡುತ್ತಿದ್ದಾರೆ.

'ಆನೆಯನ್ನು ಪಳಗಿಸುವ ಮಾವುತನಾಗುತ್ತೇನೆ' ಎಂದು ಹೇಳಿಕೊಂಡೇ ಅವಿನಾಶ್‌ ಶೆಟ್ಟಿ ಮನೆಯೊಳಗೆ ಬಂದಿದ್ದರು. ಮನೆಯೊಳಗೂ ಹಲವು ಸದಸ್ಯರು ಅವರನ್ನು ಮಾವುತ ಎಂದೇ ಕರೆಯುತ್ತಿದ್ದಾರೆ. ಆದರೆ ಈ ಗಂಧರ್ವ ಮತ್ತು ರಕ್ಕಸರ ಗುದ್ದಾಟದಲ್ಲಿ ಈ ಮಾವುತ ಮೇಕೆಯಾಗಿದ್ದಾರೆ. ತುಕಾಲಿ ಸಂತೋಷ್ ಮತ್ತು ವರ್ತೂರ್​ ಸಂತೋಷ್​ ಅವರು 'ನೀನು ಮಾವುತನಾ? ಮೇಕೆಯಾ?' ಎಂದು ಕೇಳಿದಾಗ ಅವಿನಾಶ್‌, 'ನಾನು ಮೇಕೆಯಾಗುವುದಿಲ್ಲ' ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ. ಆದರೆ, ಅದರ ಮರುಕ್ಷಣವೇ ಅವರು ಮೇಕೆಯ ಗೆಟಪ್‌ನಲ್ಲಿ ಮ್ಯಾ… ಎಂದು ಕೂಗುತ್ತ ಓಡಾಡುವ ದೃಶ್ಯಗಳೂ ಇವೆ.

ವರ್ತೂರ್​ ಸಂತೋಷ್, ಅವಿನಾಶ್ ಶೆಟ್ಟಿ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. 'ನೀವು ವೀರನಾಗಬೇಕು' ಎಂದು ಮೋಟಿವೇಷನಲ್ ಸ್ಪೀಚ್ ಕೂಡ ಕೊಟ್ಟಿದ್ದಾರೆ. ಇದರಿಂದ ಸ್ಫೂರ್ತಿಗೊಂಡ ಅವಿನಾಶ್‌, 'ವೀರನಾ… ಧೀರನಾ…' ಎಂದು ಹೇಳುತ್ತಾ ಎದ್ದು ನಿಂತಿದ್ದಾರೆ.

ಎದುರಾಳಿ ತಂಡದ ಸದಸ್ಯನನ್ನು ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆಯೇ ವರ್ತೂರು ಸಂತೋಷ್​? ಇದಕ್ಕೆ ಅವಿನಾಶ್ ಶೆಟ್ಟಿ ಮರುಳಾಗುತ್ತಾರಾ? ಸದ್ಯ ಇಡೀ ಬಿಗ್​ ಬಾಸ್ ಮನೆ ರಣರಂಗವಾಗಿದ್ದು, ಯಾವುದು ಸರಿ? ಯಾವುದು ತಪ್ಪು? ಎಂಬುದು ತಿಳಿಯದಷ್ಟು ಗೊಂದಲದ ಗೂಡಾಗಿದೆ. ಇದರ ಪರಿಣಾಮ ಏನಾಗುತ್ತದೆ? ಯಾವ ತಂಡ ಗೆಲುವಿನ ದಡ ಸೇರುತ್ತದೆ? ಯಾವ ತಂಡ ಸೋಲಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ? ಈ ಪ್ರಶ್ನೆಗಳ ಉತ್ತರಕ್ಕಾಗಿ ನೀವೂ ಕಾಯಲೇಬೇಕು. ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ. ಪ್ರತಿದಿನದ ಎಪಿಸೋಡ್‌ಗಳು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗುತ್ತವೆ.

ಇದನ್ನೂ ಓದಿ:ಬಿಗ್​​ ಬಾಸ್ ಕನ್ನಡ​​​: ಗಂಧರ್ವರು ರಾಕ್ಷಸರಾದಾಗ - ಪ್ರೋಮೋ ನೋಡಿ

ABOUT THE AUTHOR

...view details