ಕರ್ನಾಟಕ

karnataka

ETV Bharat / entertainment

ಬಿಗ್​​ ಬಾಸ್​: ಮತ್ತೊಂದು ಟಾಸ್ಕ್‌, ಮತ್ತಷ್ಟು ರಿಸ್ಕ್‌; ಸಂಗೀತಾ - ವರ್ತೂರ್ ಅಸಮಾಧಾನ! - ವರ್ತೂರ್ ಸಂತೋಷ್

''ಆಟ ಗೆದ್ರೆ ಒಂದು ಲೆಕ್ಕ; ಸೋತರೆ ಮತ್ತೊಂದು ಲೆಕ್ಕ!'' ಶೀರ್ಷಿಕೆಯಡಿ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ.

varthur santhosh and sangeetha
ಸಂಗೀತಾ-ವರ್ತೂರ್ ಅಸಮಧಾನ!

By ETV Bharat Karnataka Team

Published : Jan 17, 2024, 5:25 PM IST

ಕನ್ನಡ ಪ್ರೇಕ್ಷಕರ ಮನ ಗೆದ್ದಿರುವ 'ಬಿಗ್‌ ಬಾಸ್' ಸೀಸನ್‌ ಹತ್ತು ಅಂತಿಮ ಘಟ್ಟದಲ್ಲಿದೆ. ಈಗಾಗಲೇ ಹದಿನಾಲ್ಕು ವಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಿಗ್​ ಬಾಸ್​ ಹದಿನೈದನೇ ವಾರದ ಆಟಗಳಲ್ಲಿ ಬ್ಯುಸಿಯಾಗಿದೆ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ಬಿಗ್​ ಬಾಸ್​ ಮನೆಗೆ ಹಳೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿರೋದು ನಿಮಗೆ ತಿಳಿದಿರೋ ವಿಚಾರವೇ.

ಬಿಗ್‌ ಬಾಸ್‌ ಮನೆಯಿಂದ ಹೊರಹೋದ ಸ್ಪರ್ಧಿಗಳೆಲ್ಲ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಇಡೀ ಮನೆ ತುಂಬಿ ನಳನಳಿಸುತ್ತಿದೆ. ಎಲ್ಲರೂ ತಮ್ಮ ಸ್ನೇಹಿತರಿಗೆ ಟಿಪ್ಸ್‌ ಕೊಡುವುದರಲ್ಲಿ ಮಗ್ನರಾಗಿರುವಾಗ ಬಿಗ್‌ ಬಾಸ್ ಮನೆಗೆ ಒಂದು ಲಕ್ಷ ರೂ. ಮೌಲ್ಯದ ಟಾಸ್ಕ್‌ ನೀಡಿದೆ. ಏನದು ಟಾಸ್ಕ್? ಈ ಕುರಿತು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸುಳಿವು ದೊರಕಿದೆ.

ಟಾಸ್ಕ್‌ ಆಡಲು ಸ್ಪರ್ಧಿಗಳು ಇತರ ಸ್ಪರ್ಧಿಗಳ ಹೆಸರು ಸೂಚಿಸಿದ್ದಾರೆ. ಕೆಲವರು ವಿನಯ್ ಹೆಸರನ್ನೂ, ಕೆಲವರು ವರ್ತೂರು ಸಂತೋಷ್ ಅವರ ಹೆಸರನ್ನು ಸೂಚಿಸಿದ್ದಾರೆ. ಕೊನೆಗೆ ವರ್ತೂರ್ ಅವರೇ ಟಾಸ್ಕ್‌ ಆಡಲು ಆಯ್ಕೆಯಾಗಿದ್ದಾರೆ. ಚೆಂಡನ್ನು ಒಂದು ದೊಡ್ಡ ತಿರುಗುಣಿಯ ಮೇಲೆ ಜೋಡಿಸಿಡಲಾಗಿದೆ. ಚೆಂಡುಗಳನ್ನು ಬೀಳಿಸಬಾರದು. ತಿರುಗುಣಿ ತಿರುಗಿಸುವ ಟಾಸ್ಕ್‌ನಲ್ಲಿ ವರ್ತೂರು ಸಂತೋಷ್ ವಿಫಲರಾಗಿದ್ದಾರೆ. ಇದನ್ನು ಕಂಡು ಸಂಗೀತಾ ಅಸಹನೆ ವ್ಯಕ್ತಪಡಿಸಿದ್ದಾರೆ.

ಯಾರಿಗೆ ಆಟ ಆಡಲು ಬರುತ್ತದೆಯೋ ಅವರೇ ಹೋಗಿ ಎಂದು ಇದಕ್ಕೇ ನಾನು ಹೇಳಿದ್ದು ಎಂದು ಹೇಳಿದ್ದಾರೆ. ಇದನ್ನು ಕೇಳಿ ಸಿಟ್ಟಿಗೆದ್ದ ವರ್ತೂರು ಸೋತೋಷ್​, ಇರ್​​​​ರೆಸ್ಪೆಕ್ಟೀವ್ ಆಗಿ ಮಾತಾಡಬೇಡಿ. ನೀವು ಒಬ್ಬರ ಮೇಲೆ ಬ್ಲೇಮ್ ಮಾಡುವುದಕ್ಕಿಂತ ಮೊದಲು ನೀವೇನು ಎನ್ನುವುದನ್ನು ನೋಡಿಕೊಂಡರೆ ತುಂಬಾ ಉತ್ತಮವಾಗಿರುತ್ತದೆ ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ:ಜ.19ಕ್ಕೆ 'ಮತ್ತೆ ಮತ್ತೆ' ತೆರೆಗೆ: ಹಿರಿಯ ನಟ ಉಮೇಶ್ - ಸಂಜನಾ ಗಲ್ರಾನಿ ಸ್ಕ್ರೀನ್​ ಶೇರ್

ಹಾಗಾದರೆ ಮನೆಯ ಸದಸ್ಯರು ಗೇಮ್‌ನಲ್ಲಿ ಗೆದ್ದರಾ ಸೋತರಾ? ಪರಿಣಾಮ ಏನಾಗಲಿದೆ?. ಕಳೆದ ವಾರ ಸುದೀಪ್‌, ಎಲಿಮಿನೇಷನ್‌ ಕ್ಯಾನ್ಸಲ್ ಆಗಿಲ್ಲ, ಹೋಲ್ಡ್‌ನಲ್ಲಿ ಇರಿಸಲಾಗಿದೆ ಎಂದು ಹೇಳಿದ್ದರು. ಹಾಗಾದರೆ ಹೋಲ್ಡ್‌ನಲ್ಲಿರುವ ಎಲಿಮಿನೇಷನ್‌ ಯಾವತ್ತು ಚಾಲ್ತಿಗೆ ಬರಲಿದೆ? ಅದಕ್ಕೆ ಯಾರು ಬಲಿಯಾಗಲಿದ್ದಾರೆ?. ಫಿನಾಲೆಗೆ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿರುವಾಗ ಹಲವು ಸರ್ಪೈಸ್‌ಗಳನ್ನು ಬಿಗ್‌ ಬಾಸ್‌ ನೀಡುತ್ತಿದ್ದಾರೆ. ಆ ಸರ್ಪೈಸ್‌ಗಳನ್ನು ಮಿಸ್‌ ಮಾಡಿಕೊಳ್ಳದಿರಲು ನಿರಂತರವಾಗಿ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ನೋಡುತ್ತಿರಿ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಮತ್ತು ಎಪಿಸೋಡ್‌ಗಳನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ:700ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶೋಭರಾಜ್​ಗೆ ಶ್ರೀ ಸಿದ್ದಶ್ರೀ ಪ್ರಶಸ್ತಿ

ABOUT THE AUTHOR

...view details