ಕರ್ನಾಟಕ

karnataka

By

Published : Jun 2, 2023, 5:38 PM IST

Updated : Jun 2, 2023, 7:04 PM IST

ETV Bharat / entertainment

ZHZB: 'ಸರ್ಕಾರದಿಂದ ಸಿಗುವ ಮನೆ ಹೊಂದಲು ದಂಪತಿಯ ವಿಚ್ಛೇದನ ನಾಟಕ'

ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾ ಬಿಡುಗಡೆ ಆಗಿದೆ.

Zara Hatke Zara Bachke
ಜರಾ ಹಟ್ಕೆ ಜರಾ ಬಚ್ಕೆ

ಲಕ್ಷ್ಮಣ್ ಉಟೇಕರ್ ಅವರು ಉತ್ತಮ ಚಿತ್ರಗಳನ್ನು ನಿರ್ದೇಶಿಸಿ ಹೆಸರುವಾಸಿಯಾಗಿದ್ದಾರೆ. ಇಂದು ಅವರ ಬಹುನಿರೀಕ್ಷಿತ 'ಜರಾ ಹಟ್ಕೆ ಜರಾ ಬಚ್ಕೆ' (Zara Hatke Zara Bachke) ಚಿತ್ರ ತೆರೆ ಕಂಡಿದೆ. ಈ ಸಿನಿಮಾ ಹಾಸ್ಯ, ಸಮಾಜದಿಂದ ಎದುರಾಗುವ ಕಾಮೆಂಟ್​ಗಳು ಮತ್ತು ಪ್ರೀತಿಯಲ್ಲಿರುವ ದಂಪತಿಯ ಕುರಿತಾಗಿದೆ. ಮಧ್ಯಮ ವರ್ಗದ ಕುಟುಂಬದ ಕಥೆ ಆಧರಿಸಿದ ಈ ಚಿತ್ರದಲ್ಲಿ, ವಿಕ್ಕಿ ಕೌಶಲ್ ಇಂದೋರ್‌ನ ಜಿಮ್ ತರಬೇತುದಾರ ಕಪಿಲ್ ಪಾತ್ರವನ್ನು ನಿರ್ವಹಿಸಿದರೆ, ಸಾರಾ ಅಲಿ ಖಾನ್ ಮಕ್ಕಳಿಗೆ ಕೋಚಿಂಗ್ ಕಲಿಸುವ ಸೌಮ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಕಥೆ: ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಮೊದಲ ಬಾರಿಗೆ ಕಾಲೇಜಿನಲ್ಲಿ ಭೇಟಿಯಾಗುತ್ತಾರೆ ಮತ್ತು ಕಾಲಾನಂತರದಲ್ಲಿ ಅವರ ಸ್ನೇಹ ಪ್ರೀತಿಗೆ ತಿರುಗುತ್ತದೆ. ದಾಂಪತ್ಯ ಜೀವನ ಶುರು ಮಾಡುತ್ತಾರೆ. ಆದರೆ, ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಕನಸು ಕಂಡಂತೆ ಏನೂ ಆಗುವುದಿಲ್ಲ. ತಮ್ಮ ಜೀವನದಲ್ಲಿ ಶಾಂತಿ ಮತ್ತು ಸಂತೋಷ ಕಂಡುಕೊಳ್ಳಲು ಬಯಸುತ್ತಾರೆ.

ಮಧ್ಯಮ ವರ್ಗದ ಕುಟುಂಬವು ಪೋಷಕರು ಮತ್ತು ಸಂಬಂಧಿಯಿಂದ ಕೂಡಿರುತ್ತದೆ. ಇದರಿಂದಾಗಿ ಸಾರಾ ಮತ್ತು ವಿಕ್ಕಿ ತಮ್ಮ ಖಾಸಗಿ ಸಮಯಕ್ಕಾಗಿ ಹಂಬಲಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಸಾರಾ ತಮ್ಮ ಸ್ವಂತ ಮನೆ ಹೊಂದಲು ಬಯಸುತ್ತಾರೆ. ಅದನ್ನು ಅವರು ಸಂಪೂರ್ಣವಾಗಿ ತಮ್ಮದೇ ಮನೆ ಎಂದು ಕರೆಯಬಹುದು. ಇದು ಮಧ್ಯಮ ವರ್ಗದ ಹೆಚ್ಚಿನವರ ಕನಸು. ಅನೇಕರಿಗೆ, ಸಂಪನ್ಮೂಲಗಳ ಕೊರತೆ ಮತ್ತು ಕುಟುಂಬದಿಂದ ಬೇರ್ಪಟ್ಟ ನೋವಿನ ಹಿನ್ನೆಲೆ ಕನಸು ಸಂಪೂರ್ಣವಾಗಿ ನನಸಾಗುವುದಿಲ್ಲ.

ಸೌಮ್ಯ ಮತ್ತು ಕಪಿಲ್ ಮನೆ ಹುಡುಕಲು ಹೊರಟರು. ಆದರೆ ಮೋಸ, ಗೇಲಿಗೆ ಒಳಗಾಗುತ್ತಾರೆ. ಆದರೆ, ಒಂದು ದಿನ ಸೌಮ್ಯ ಅವರಿಗೆ ಸರ್ಕಾರಿ ವಸತಿ ಯೋಜನೆ, ವಿಚ್ಛೇದಿತ ಮಹಿಳೆಯರಿಗೆ ಕೈಗೆಟುಕುವ ಮನೆ ಬಗ್ಗೆ ತಿಳಿಯುತ್ತದೆ. ಈ ಫಾರ್ಮ್ ನೋಡಿದ ಸೌಮ್ಯ ಮತ್ತು ವಿಕ್ಕಿ ಅವರು ಜಗಳವಾಡಿ ವಿಚ್ಛೇದನ ಪಡೆದು ಸರ್ಕಾರಿ ಯೋಜನೆಯಡಿ ಮಂಜೂರಾಗಿರುವ ಮನೆಯನ್ನು ತಮ್ಮದಾಗಿಸಲು ಪ್ಲ್ಯಾನ್​ ಮಾಡುತ್ತಾರೆ. ಇಲ್ಲಿ ವಿಚ್ಛೇದನ ಅವರಾಡುವ ನಾಟಕ.

ಇದನ್ನೂ ಓದಿ:27ನೇ ವಿವಾಹ ವಾರ್ಷಿಕೋತ್ಸವ: ಶ್ರೀದೇವಿ ಜೊತೆಗಿನ ಸುಂದರ ಚಿತ್ರ ಹಂಚಿಕೊಂಡ ಬೋನಿ ಕಪೂರ್

ಕಪಿಲ್ ಮತ್ತು ಸೌಮ್ಯ ತಮ್ಮ ವಿಚ್ಛೇದನಕ್ಕೆ, ತಮ್ಮ ನಡುವೆ ಬಿರುಕು ಮೂಡಿದೆ ಎಂದು ತೋರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದರು. ಅದಕ್ಕಾಗಿ ಹಣವನ್ನೂ ಖರ್ಚು ಮಾಡಿದರು. ಆದರೆ, ಯೋಜನೆ ಪ್ರಕಾರ, ಕೆಲಸಗಳು ನಡೆಯಲಿಲ್ಲ. ಇದರ ಹೊರತಾಗಿಯೂ, ಅವರು ತಮ್ಮ ಪ್ರಯತ್ನ ಬಿಡುವುದಿಲ್ಲ. ಕಪಿಲ್ ಮತ್ತು ಸೌಮ್ಯ ಪಾತ್ರ ನಿಮಗಿಡಿಸುತ್ತದೆ. ಅವರ ಪ್ರೀತಿ ಎಷ್ಟು ಆಳವಾಗಿದೆ ಎಂದರೆ ಅವರು ಎಲ್ಲವನ್ನೂ ಸಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇಲ್ಲಿ ಈ ದಂಪತಿಯ ಪ್ರೀತಿ ಪ್ರೇಕ್ಷಕರ ಗಮನ ಸೆಳೆಯುತ್ತದೆ.

ಇದನ್ನೂ ಓದಿ:HBD ಮಣಿರತ್ನಂ: ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಬಗ್ಗೆ ನಿಮಗೆಷ್ಟು ಗೊತ್ತು

ಇನ್ನೂ ನಟ ವಿಕ್ಕಿ ಕೌಶಲ್​​ ಈ ಚಿತ್ರದ ಶೂಟಿಂಗ್​ನ ಮೊದಲ ದಿನದ ಚಿತ್ರ ಹಂಚಿಕೊಂಡಿದ್ದಾರೆ. ಶೂಟಿಂಗ್​ನ ಮೊದಲ ದಿನ, ಸಿನಿಮಾ ಬಿಡುಗಡೆಯ ಮೊದಲ ದಿನ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

Last Updated : Jun 2, 2023, 7:04 PM IST

ABOUT THE AUTHOR

...view details