ಹೈದರಾಬಾದ್:ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ನಟನೆಯ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲಿ 22.59 ಕೋಟಿ ರೂ. ಗಳಿಕೆ ಮಾಡಿದೆ. ಭಾನುವಾರ ಒಂದೇ ದಿನ ದೇಶೀಯ ಚಿತ್ರಮಂದಿರಗಳಲ್ಲಿ 9.90 ಕೋಟಿ ರೂ. ಬಾಚಿಕೊಂಡಿರುವ ಬಗ್ಗೆ ಚಿತ್ರ ತಂಡ ಹೇಳಿಕೊಂಡಿದೆ.
ಕಳೆದ ಶುಕ್ರವಾರ ಬಿಡುಗಡೆಯಾದ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಮೊದಲ ದಿನ 5.49 ಕೋಟಿ ಗಳಿಸಿತ್ತು. ಶನಿವಾರವಾದ ಎರಡನೇ ದಿನ 7.20 ಕೋಟಿ ಗಳಿಸಿತ್ತು. ಭಾನುವಾರ 9.90 ಕೋಟಿ ರೂ. ಸೇರಿದಂತೆ ಒಟ್ಟು 22.59 ಕೋಟಿ ರೂ. ಗಳಿಕೆ ಮಾಡಿದೆ. ಒಂದು ಟಿಕೆಟ್ ಖರೀದಿಗೆ ಮತ್ತೊಂದು ಟಿಕೆಟ್ ಉಚಿತ ಎಂಬ ನೀತಿಯಿಂದ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ತನ್ನ ವಿಕೆಂಡ್ ಆದಾಯವನ್ನು ಹೆಚ್ಚಿಸಿಕೊಂಡಿದೆ. ಚಿತ್ರ ಪ್ರೇಮಿಗಳು ಕೂಡ ಇದರ ಲಾಭ ಪಡೆಯುವಲ್ಲಿ ಹಿಂದೆ ಬಿದ್ದಿಲ್ಲ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಸೋಮವಾರ ಚಿತ್ರದ ವ್ಯವಹಾರದ ಕುರಿತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಮೂರನೇ ದಿನಕ್ಕೆ ಮುನ್ನುಗ್ಗುತ್ತಿದೆ. ಸೋಮವಾರವೂ ಕೂಡ ಹಲವು ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಶುಕ್ರವಾರ 5.49 ಕೋಟಿ ಬಾಚಿಕೊಂಡಿದ್ದ ಚಿತ್ರ ಶನಿವಾರ 7.20 ಕೋಟಿ ಹೊತ್ತು ತಂದಿತ್ತು. ಭಾನುವಾರ 9.90 ಕೋಟಿ ಸೇರಿದಂತೆ ಭಾರತದಲ್ಲಿಯೇ ಒಟ್ಟು 22.59 ಕೋಟಿ ವ್ಯವಹಾರ ಮಾಡಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಜೊತೆಯಾಗಿ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಸ್ಪೈಡರ್ ಮ್ಯಾನ್: ಅಕ್ರಾಸ್ ದಿ ಸ್ಪೈಡರ್-ವರ್ಸ್ ಮತ್ತು ದಿ ಕೇರಳ ಸ್ಟೋರಿ ಚಿತ್ರದ ಪೈಪೋಟಿಯ ನಡುವೆಯೂ ಜರಾ ಹಟ್ಕೆ ಜರಾ ಬಚ್ಕೆ ಚಿತ್ರ ಉತ್ತಮ ಗಳಿಕೆಯ ಹಾದಿಯಲ್ಲಿದೆ.