ಸ್ಯಾಂಡಲ್ವುಡ್ನಲ್ಲಿ ತಾಜ್ ಮಹಲ್, ಕೃಷ್ಣ ಲೀಲಾ, ಕೃಷ್ಣ ರುಕ್ಮಿಣಿ ಚಿತ್ರಗಳ ಮೂಲಕ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ಅಜಯ್ ರಾವ್. ಇದೀಗ ಸ್ಯಾಂಡಲ್ವುಡ್ ಯುವ ನಿರ್ದೇಶಕನೊಂದಿಗೆ ಹೊಸ ಸಿನಿಮಾ ಘೋಷಿಸಿದ್ದಾರೆ. ಚಿತ್ರಕ್ಕೆ ಯುದ್ಧಕಾಂಡ ಎಂದು ಶೀರ್ಷಿಕೆ ಇಡಲಾಗಿದ್ದು, ಇಂದು ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಖತ್ ಇಂಟ್ರೆಸ್ಟಿಂಗ್ ಆಗಿರೋ ಯುದ್ಧಕಾಂಡ ಟೈಟಲ್ ಟೀಸರ್ ಸಿನಿರಸಿಕರ ಗಮನ ಸೆಳೆಯುತ್ತಿದೆ.
ಯುದ್ಧಕಾಂಡ ಚಿತ್ರವನ್ನು ಅಜಯ್ ರಾವ್ ತಮ್ಮದೇ ನಿರ್ಮಾಣ ಸಂಸ್ಥೆ 'ಶ್ರೀಕೃಷ್ಣ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್' ಮತ್ತು 'ಅಜಯ್ ರಾವ್ ಪ್ರೊಡಕ್ಷನ್ಸ್' ನಡಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಕೃಷ್ಣ ಲೀಲಾ ಸಿನಿಮಾ ನಂತರ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ. ಚಿತ್ರದಲ್ಲಿ ವಕೀಲರಾಗಿ ಕಾಣಿಸಿಕೊಳ್ಳುತ್ತಿರುವ ಅಜಯ್ ರಾವ್ ಸಿನಿಮಾವನ್ನು ವಕೀಲರಿಂದಲೇ ಲಾಂಚ್ ಮಾಡಿಸಿದ್ದು ವಿಶೇಷವಾಗಿತ್ತು.
ಈ ಸಿನಿಮಾ ಬಗ್ಗೆ ಮೊದಲು ಮಾತು ಶುರು ಮಾಡಿದ ಅಜಯ್ ರಾವ್, ಯುದ್ಧಕಾಂಡ ಸಿನಿಮಾ ಎಂದಾಗ ಎಲ್ಲರಿಗೂ ನೆನಪಾಗೋದು ಲೆಜೆಂಡರಿ ರವಿ ಸರ್ ಚಿತ್ರ. ಆ ಸಿನಿಮಾದ ನಿರ್ದೇಶಕರಾದ ಕೆ.ವಿ ರಾಜು ಸರ್ ಜೊತೆ ನಾನು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ.
ಅದು ನನ್ನ ಅದೃಷ್ಟ. ಈ ಸಿನಿಮಾ ಲಾಂಚ್ ಮಾಡೋವಾಗ ಮೊದಲು ರವಿ ಸರ್ ಭೇಟಿ ಮಾಡಿ ಆಶೀರ್ವಾದ ತೆಗೆದುಕೊಂಡು ಬಂದೆ. ಒಳ್ಳೆಯದಾಗ್ಲಿ ಎಂದು ಆಶೀರ್ವಾದ ಮಾಡಿದ್ರು. ಆದ್ರೆ ಆಗ ಬಂದ ಯುದ್ಧಕಾಂಡ ಚಿತ್ರಕ್ಕೂ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ಇದು ರಿಮೇಕ್ ಸಿನಿಮಾ ಕೂಡ ಅಲ್ಲ ಎಂದು ಮಾಹಿತಿ ಹಂಚಿಕೊಂಡ್ರು.