ಕರ್ನಾಟಕ

karnataka

ETV Bharat / entertainment

ರಾಕಿಭಾಯ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಯಶ್​ ಮುಂದಿನ ಸಿನಿಮಾ 'ಕೆಜಿಎಫ್​ 3' - ಈಟಿವಿ ಭಾರತ ಕನ್ನಡ

Yash's KGF 3 will hit the screens: ಹೊಂಬಾಳೆ ಫಿಲ್ಮ್ಸ್​ ಮತ್ತೊಮ್ಮೆ ಯಶ್​ ಜೊತೆಗೆ ಕೈ ಜೋಡಿಸಲಿದ್ದು, ಕೆಜಿಎಫ್​ 3 ನಿರ್ಮಾಣವಾಗಲಿದೆ ಎಂದು ಹತ್ತಿರದ ಮೂಲಗಳು ಬಹಿರಂಗಪಡಿಸಿದೆ.

Here's when Yash's KGF 3 will hit the screens, film to go on floors next month
ರಾಕಿಭಾಯ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​; ಯಶ್​ ಮುಂದಿನ ಸಿನಿಮಾ 'ಕೆಜಿಎಫ್​ 3'

By ETV Bharat Karnataka Team

Published : Sep 29, 2023, 3:37 PM IST

'Yash 19'.. ಸೋಷಿಯಲ್​ ಮೀಡಿಯಾದಲ್ಲಿ ಕಳೆದೊಂದು ವರ್ಷದಿಂದ ಟ್ರೆಂಡಿಂಗ್​ನಲ್ಲಿರುವ ಹೆಸರು. ರಾಕಿಂಗ್​ ಸ್ಟಾರ್​ ಯಶ್​ ಅವರ ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿದೆ. ಕೆಜಿಎಫ್​ 2 ಬಳಿಕ ನಟನ ಯಾವುದೇ ಸಿನಿಮಾ ಅನೌನ್ಸ್​ ಆಗಿಲ್ಲ. ಅಭಿಮಾನಿಗಳು ಎಷ್ಟೇ ಬೇಡಿಕೆ ಇಟ್ಟರೂ ರಾಕಿಭಾಯ್​ ತಮ್ಮ ಮುಂದಿನ ಸಿನಿಮಾ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ. ಆದರೆ, ಕಳೆದ ಒಂದು ತಿಂಗಳಿನಿಂದ ಯಶ್​ ಅವರ ನೆಕ್ಸ್ಟ್​ ಮೂವಿ ಬಗ್ಗೆ ಸಾಕಷ್ಟು ಅಂತೆ ಕಂತೆಗಳು ಕೇಳಿ ಬರುತ್ತಿವೆ.

ಇದೀಗ ಯಶ್​ ಅವರ ಮುಂದಿನ ಸಿನಿಮಾ 'ಕೆಜಿಎಫ್​ 3' ಅನ್ನೋದು ಗೊತ್ತಾಗಿದೆ. ಹೊಂಬಾಳೆ ಫಿಲ್ಮ್ಸ್​ ಮತ್ತೊಮ್ಮೆ ಯಶ್​ ಜೊತೆಗೆ ಕೈ ಜೋಡಿಸಲಿದ್ದು, ಕೆಜಿಎಫ್​ 3 ನಿರ್ಮಾಣವಾಗಲಿದೆ ಎಂದು ಹತ್ತಿರದ ಮೂಲಗಳು ಬಹಿರಂಗಪಡಿಸಿದೆ. ಸ್ಯಾಂಡಲ್​ವುಡ್​ ಬ್ಲಾಕ್​ಬಸ್ಟರ್​ ಚಿತ್ರ ಕೆಜಿಎಫ್​ನ ಮುಂದುವರಿದ ಭಾಗವಾಗಿರುವ ಕೆಜಿಎಫ್​ 3, 2025ರಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ತಯಾರಾಗಲಿರುವ ಈ ಚಿತ್ರದ ಕೆಲಸಗಳು ಇದೇ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್​ನಲ್ಲಿ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ.

ಕೆಜಿಎಫ್​ 3 ರಿಲೀಸ್​ ಬಗ್ಗೆ ಡಿಸೆಂಬರ್​ 21 ರಂದು ಅಧಿಕೃತ ಮಾಹಿತಿ ಹೊರಬೀಳಲಿದೆ. ಆ ದಿನದಂದು 'ಕೆಜಿಎಫ್'​ ಸಿನಿಮಾ ಬಿಡುಗಡೆಯಾಗಿ ಐದು ವರ್ಷ ಪೂರೈಸಲಿದೆ. ಈಗಾಗಲೇ ನಿರ್ದೇಶಕ, ನಿರ್ಮಾಪಕ ಮತ್ತು ನಟರ ನಡುವೆ ಕೆಜಿಎಫ್​ 3 ಬಗ್ಗೆ ಚರ್ಚೆಗಳು ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಕೆಜಿಎಫ್​ ಮುಂದುವರೆದ 3ನೇ ಭಾಗ ಬರಲಿದೆ ಎಂಬ ಊಹಾಪೋಹಗಳಿಗೆ ತುಪ್ಪ ಸುರಿದಂತಿದೆ. 2024ರ ಅಕ್ಟೋಬರ್​ ತಿಂಗಳಲ್ಲಿ ಕೆಜಿಎಫ್​ 3 ಚಿತ್ರೀಕರಣ ಪ್ರಾರಂಭವಾಗಲಿದೆ. 2025 ರಲ್ಲಿ ಸಿನಿಮಾ ಥಿಯೇಟರ್​ಗೆ ಬರಲಿದೆ.

ಇದಕ್ಕೂ ಮುನ್ನ ಯಶ್​ 19ಗೆ ಸಂಬಂಧಿಸಿ ಎರಡು ವಿಚಾರಗಳು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿದ್ದವು. ದಕ್ಷಿಣ ಚಿತ್ರರಂಗದ ವಿಶ್ಲೇಷಕ ಮನೋಬಾಲಾ ವಿಜಯಬಾಲನ್​ ಎಕ್ಸ್​ನಲ್ಲಿ ಹಾಲಿವುಡ್​ ಡೈರೆಕ್ಟರ್​ ಜೊತೆ ರಾಕಿಂಗ್​ ಸ್ಟಾರ್ ಯಶ್ ಫೋಟೋ ಶೇರ್ ಮಾಡಿ, ''ಲಂಡನ್‌ನಲ್ಲಿ ಹಾಲಿವುಡ್ ನಿರ್ದೇಶಕ ಜೆಜೆ ಪೆರಿ (Hollywood director JJPerry) ಅವರೊಂದಿಗೆ ಯಶ್ ಅವರ ಲೇಟೆಸ್ಟ್ ಫೋಟೋ. ಯಶ್​ 19ಗಾಗಿ ನಟ ಯಶ್​​ ಲುಕ್ ಟೆಸ್ಟ್‌ಗೆ ಒಳಗಾಗಿದ್ದಾರೆ. ಕೆಜಿಎಫ್​​ ಚಾಪ್ಟರ್ 2ರ ಯಶಸ್ಸಿನಲ್ಲಿರುವ ನಟ ಅಕ್ಟೋಬರ್ ತಿಂಗಳಲ್ಲಿ ಯಶ್ 19 ಅನ್ನು ಘೋಷಿಸಲಿದ್ದಾರೆ. ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶಿಸುವ ಸಾಧ್ಯತೆ ಇದೆ ಮತ್ತು ಇದೇ ಸಾಲಿನ ಡಿಸೆಂಬರ್‌ ತಿಂಗಳಲ್ಲಿ ಶೂಟಿಂಗ್​​ ಪ್ರಾರಂಭವಾಗುವ ನಿರೀಕ್ಷೆ ಇದೆ'' ಎಂದು ಬರೆದು ಕೊಂಡಿದ್ದರು.

ಅದಕ್ಕೂ ಮುನ್ನ ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ ದಾಸ್​ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ​'ಲೈಯರ್ಸ್ ಡೈಸ್' ಚಿತ್ರಕ್ಕಾಗಿ ಎರಡು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್​ಗೆ ಯಶ್​ ಒಲವು ತೋರಿದ್ದಾರೆ ಎನ್ನಲಾಗಿತ್ತು. ಈ ಚಿತ್ರ ಬಹುತೇಕ ಕನ್ಫರ್ಮ್​ ಆಗಿದೆ ಎಂಬ ವಿಚಾರ ಎಲ್ಲೆಡೆ ಸದ್ದು ಮಾಡಿದ್ದವು. 1900ರಲ್ಲಿ ನಡೆದ ಗೋವಾ ಮಾಫಿಯಾವನ್ನು ಕಥಾವಸ್ತುವನ್ನಾಗಿಟ್ಟುಕೊಂಡು ಈ ಸಿನಿಮಾ ತಯಾರಾಗಲಿದೆ ಎನ್ನಲಾಗಿತ್ತು.

ಇಷ್ಟೆಲ್ಲಾ ಊಹಾಪೋಹಗಳು ಕೇಳಿಬರುತ್ತಿದ್ದರೂ ಕೂಡ ನಟ ಯಶ್​ ತಮ್ಮ ಮುಂದಿನ ಸಿನಿಮಾದ ಗುಟ್ಟನ್ನು ಎಲ್ಲೂ ರಟ್ಟು ಮಾಡಿಲ್ಲ. ತುಂಬಾ ಸಸ್ಪೆನ್ಸ್​ ಆಗಿಯೇ ಉಳಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಯಶ್​ 19 ಮೇಲೆ ರಾಕಿ ಆರಾಧಕರು ಮುಗಿಲೆತ್ತರದ ನಿರೀಕ್ಷೆ ಇಟ್ಟುಕೊಂಡಿರುವುದಂತೂ ಸತ್ಯ.

ಇದನ್ನೂ ಓದಿ:ಗೋವಾ ಮಾಫಿಯಾದ ಕಥೆಯಲ್ಲಿ ರಾಕಿಂಗ್​ ಸ್ಟಾರ್​.. ಯಶ್​ 19 ಬಗ್ಗೆ ಸಿಕ್ತು ಬಿಗ್​ ಅಪ್​ಡೇಟ್

ABOUT THE AUTHOR

...view details