ಕರ್ನಾಟಕ

karnataka

ETV Bharat / entertainment

ಸ್ಟೇಡಿಯಂನಲ್ಲಿ ಪ್ರೀತಿಯ ಕ್ಷಣ ಹಂಚಿಕೊಂಡ ಶಾರುಖ್​ ಮಕ್ಕಳು: ವಿಡಿಯೋಗೆ ಫ್ಯಾನ್ಸ್​ ಮೆಚ್ಚುಗೆ - ಈಟಿವಿ ಭಾರತ ಕನ್ನಡ

ನಟ ಶಾರುಖ್​ ಖಾನ್ ಮಕ್ಕಳಾದ ಸುಹಾನಾ ಮತ್ತು ಅಬ್ರಾಹಂ​ ಪ್ರೀತಿಯ ಕ್ಷಣವನ್ನು ಹಂಚಿಕೊಳ್ಳುವ ವಿಡಿಯೋ ವೈರಲ್​ ಆಗಿದೆ.

Suhana Khan and lil brother AbRam
ಶಾರುಖ್​ ಮಕ್ಕಳು

By

Published : Apr 17, 2023, 5:47 PM IST

ಬಾಲಿವುಡ್​ ಸೂಪರ್​ ಸ್ಟಾರ್​ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ದಂಪತಿಯ ಮಕ್ಕಳಾದ ಸುಹಾನಾ ಖಾನ್​, ಆರ್ಯನ್​ ಖಾನ್​ ಮತ್ತು ಅಬ್ರಾಮ್​ ಖಾನ್​ ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸ್ಟಾರ್​ ಕಿಡ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಂಡಾಗಲೆಲ್ಲಾ ಅಭಿಮಾನಿಗಳು ಫುಲ್​ ಖುಷಿಯಾಗುತ್ತಾರೆ. ಭಾನುವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್​ ಮತ್ತು ಕೊಲ್ಕತ್ತಾ ನೈಟ್​ ರೈಡರ್ಸ್​ ಪಂದ್ಯದ ವೇಳೆ ಶಾರುಖ್​ ಕಿರಿಯ ಮಕ್ಕಳಾದ ಸುಹಾನಾ ಖಾನ್​ ಮತ್ತು ಅಬ್ರಾಮ್​ ಖಾನ್​ ವಿಶೇಷವಾಗಿ ಗಮನ ಸೆಳೆದರು.

ಶಾರುಖ್​ ಖಾನ್​ ಅವರು ಕೋಲ್ಕತ್ತಾ ನೈಟ್​ ರೇಡರ್ಸ್​ ತಂಡದ ಸಹ ಮಾಲೀಕರಾಗಿದ್ದಾರೆ. ಹೀಗಾಗಿ ಕೋಲ್ಕತ್ತಾ ಪಂದ್ಯ ಇರುವಾಗ ಅವರು ಸ್ಟೇಡಿಯಂಗೆ ತೆರಳಿ ಪಂದ್ಯವನ್ನು ವೀಕ್ಷಿಸುತ್ತಾರೆ. ಜೊತೆಗೆ ತಂಡದ ಆಟಗಾರರಿಗೆ ಹುರಿದುಂಬಿಸುತ್ತಾರೆ. ಅದರಂತೆ ನಿನ್ನೆ ಅವರ ಮಕ್ಕಳಿಬ್ಬರು ಸುಹಾನ್​ ಮತ್ತು ಅಬ್ರಾಮ್​ ಪಂದ್ಯ ವೀಕ್ಷಿಸಲು ವಾಖೆಂಡೆ ಸ್ಟೇಡಿಯಂಗೆ ತೆರಳಿದ್ದರು. ಸದ್ಯ ಸ್ಟೇಡಿಯಂನಲ್ಲಿ ಸುಹಾನಾ ಮತ್ತು ಅಬ್ರಾಮ್​ ಪ್ರೀತಿಯ ಕ್ಷಣವನ್ನು ಹಂಚಿಕೊಳ್ಳುವ ವಿಡಿಯೋ ವೈರಲ್​ ಆಗಿದೆ. ಈ ದೃಶ್ಯವು ಸೋಷಿಯಲ್​ ಮೀಡಿಯಾದಲ್ಲಿ ಫ್ಯಾನ್ಸ್​ ಪ್ರೀತಿ ಪಡೆಯುವಲ್ಲಿ ಯಶಸ್ವಿಯಾಗಿದೆ.

ವಿಡಿಯೋದಲ್ಲಿ ಸುಹಾನಾ ಸಹೋದರನ ಹಿಂದೆ ಹಳಿಗಳನ್ನು ಹಿಡಿದು ನಿಂತಿರುವುದನ್ನು ಕಾಣಬಹುದು. ಅವರಿಬ್ಬರು ಸಂಭಾಷಣೆಯಲ್ಲಿ ತೊಡಗಿರುವಾಗ ಸುಹಾನಾ ಮುಂದೆ ಬಾಗಿ ಅಬ್ರಾಹಂ​ ಜೊತೆ ಏನೋ ಹೇಳುತ್ತಾರೆ. ಸುಹಾನಾ ತನ್ನ ನೋಟವನ್ನು ಪೂರ್ಣಗೊಳಿಸಲು ರೆಡ್​ ವಿತ್​ ಬ್ಲ್ಯಾಕ್​ ಟಿ-ಶರ್ಟ್​ ಧರಸಿ ಕ್ಯಾಶುವಲ್​ ಉಡುಪಿನಲ್ಲಿ ಕಾಣಿಸಿಕೊಂಡರು. ಅದಕ್ಕೆ ಮ್ಯಾಚಿಂಗ್​ ಆಗುವಂತ ಒಂದು ಜೋಡಿ ಗೋಲ್ಡನ್​ ಕಿವಿಯೋಲೆ ಧರಿಸಿದ್ದರು. ಇವರಿಬ್ಬರ ಸಂಭಾಷಣೆಯ ವಿಡಿಯೋ ಹೆಚ್ಚು ಮೆಚ್ಚುಗೆ ಪಡೆದು ಕೊಂಡಿದೆ.

ಇದನ್ನೂ ಓದಿ:ಗೋವುಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ರಿಷಬ್​ ಶೆಟ್ಟಿ ಪುತ್ರ: ಮುದ್ದಾದ ವಿಡಿಯೋ ನೋಡಿ

ಬ್ಯೂಟಿ ಪ್ರಾಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​ ಸುಹಾನಾ: ಸುಹಾನಾ ಖಾನ್​ ಅವರು ಅಂತಾರಾಷ್ಟ್ರೀಯ ಮಟ್ಟದ ಬ್ಯೂಟಿ ಪ್ರಾಡೆಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​ ಆಗಿದ್ದಾರೆ. ತಮ್ಮ ಗ್ಲಾಮರಸ್​ ಮೂಲಕ ಗಮನ ಸೆಳೆಯುತ್ತಿದ್ದ ಅವರು ಮೆಬಿಲಿನ್​ ಬ್ಯೂಟಿ ಪ್ರಾಡಕ್ಟ್​ ಬ್ರ್ಯಾಂಡ್​ ಅಂಬಾಸಿಡರ್​ ಆಗಿರುವುದು ಸದ್ಯ ಹಾಟ್​ ಟಾಪಿಕ್​ ಆಗಿದೆ. ಜೊತೆಗೆ 22 ವರ್ಷದ ತಾರೆ ಜೋಯಾ ಅಖ್ತರ್​ ಅವರ ಚಿತ್ರ ದಿ ಆರ್ಚೀಸ್​ ಎಂಬ ವೆಬ್​ಸಿರೀಸ್​ನೊಂದಿಗೆ ಬಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ. ಈ ಚಿತ್ರದಲ್ಲಿ ಅವರು ವೆರೋನಿಕಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಗಳ ಸಾಧನೆಗೆ ತಂದೆಯಿಂದ ಪ್ರಶಂಸೆ: ಸುಹಾನಾ ನ್ಯೂಯಾರ್ಕ್​ನ ಜನಪ್ರಿಯ ಸೌಂದರ್ಯ ಬ್ರ್ಯಾಂಡ್​ನ ಮುಖವಾಗಿರುವುದಕ್ಕೆ ಶಾರುಖ್​ ಖಾನ್​ ಇತ್ತೀಚೆಗೆ ತಮ್ಮ ಹರ್ಷ ವ್ಯಕ್ತಪಡಿಸಲು ಸೋಷಿಯಲ್​ ಮೀಡಿಯಾ ವೇದಿಕೆ ಬಳಸಿಕೊಂಡಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು, ಕಲ್​ ಹೋ ನಾ ಹೋ ಹಾಡು ಹಾಕಿದ್ದರು. ಜೊತೆಗೆ "ಮೆಬಿಲಿನ್​ ಮಗುಗೆ ಅಭಿನಂದನೆಗಳು. ಚೆನ್ನಾಗಿ ಡ್ರೆಸ್​ ಮಾಡಿಕೊಂಡಿದ್ದೀಯ. ಚೆನ್ನಾಗಿ ಮಾತನಾಡಿದ್ದೀಯಾ. ಎಲ್ಲವನ್ನೂ ಚೆನ್ನಾಗಿ ನಿಭಾಯಿಸುತ್ತೀಯಾ. ಲವ್​ ಯು ಮೈ ಲಿಟಲ್​ ಲೇಡಿ" ಎಂದು ಕ್ಯಾಪ್ಶನ್​ ಹಾಕಿದ್ದರು.

ಇದನ್ನೂ ಓದಿ:'ತಾರಿಣಿ' ಮೂಲಕ ಮತ್ತೆ ಕನ್ನಡದಲ್ಲಿ ಮಮತಾ ರಾಹುತ್; ಸ್ಯಾಂಡಲ್​ವುಡ್​ಗೆ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ

ABOUT THE AUTHOR

...view details