ಬೆಂಗಳೂರು: ತಮ್ಮ ಅದ್ಬುತ ಲುಕ್ನಿಂದ ಸದಾ ಎಲ್ಲರ ಗಮನ ಸೆಳೆಯುವ ನಟಿ, ಮೌನಿ ರಾಯ್. ನಟನೆ, ಲುಕ್, ಫ್ಯಾಷನ್ನಿಂದ ತನ್ನದೇ ಅಭಿಮಾನಿ ಬಳಗವನ್ನು ಈ ನಟಿ ಹೊಂದಿದ್ದಾರೆ. ದಿನದಿಂದ ದಿನಕ್ಕೆ ತಮ್ಮ ಫ್ಯಾಷನ್ನಿಂದ ಅಭಿಮಾನಿಗಳನ್ನು ಸೆಳೆಯುತ್ತಿರುವ ನಾಗಿನ್ ನಟಿ ಮುಂಬೈನಲ್ಲಿ ನೀಲಿ ಬಣ್ಣದ ಕೋ ಆರ್ಡ್ ಸೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಆರಾಮದಾಯಕ ಉಡುಗೆಗೆ ಬಿಳಿ ಸ್ನಿಕರ್ಸ್ ಅನ್ನು ಅವರು ತೊಟ್ಟಿದ್ದಾರೆ. ಕಪ್ಪು ಸನ್ಗ್ಲಾಸ್ ಜೊತೆ ಓಪನ್ ಹೇರ್ ಬಿಟ್ಟಿರುವ ಅವರ ಸ್ಟೈಲ್ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮುಂಬೈನ ವಿಮಾನ ನಿಲ್ದಾಣದಲ್ಲಿ ಅಂದದ ಉಡುಗೆಯಲ್ಲಿ ಕಂಡು ಬಂದ ಆಕೆ ಪ್ರವೇಶದ್ವಾರದ ಮುಂದೆಯೇ ನಿಲ್ಲುವ ಪರಿಸ್ಥಿತಿ ಎದುರಾಯಿತು. ಕಾರಣ ಆಕೆ ಪಾಸ್ಪೋರ್ಟ್ ಅನ್ನು ಮರೆತು ಬಂದ ಹಿನ್ನೆಲೆ. ಪಾಸ್ಪೋರ್ಟ್ಗಾಗಿ ಅವರು ಬ್ಯಾಗ್ನೆಲ್ಲ ಜಾಲಾಡಿದ್ದಾರೆ. ಆದರೆ, ಈ ವೇಳೆ ಎಲ್ಲೂ ಪಾಸ್ಪೋರ್ಟ್ ಕಂಡು ಬಂದಿಲ್ಲ. ಈ ಹಿನ್ನೆಲೆ ಪ್ರವೇಶ ದ್ವಾರದ ಬಳಿಯೇ ನಿಲ್ಲುವಂತೆ ಆಗಿದೆ. ಇದೇ ಸಮಯದಲ್ಲಿ ಅವರು ಪಾಪರಾಜಿಗಳತ್ತ ಸುಂದರ ನಗು ಚೆಲ್ಲಿ, ಕೈ ಆಡಿಸಿದ್ದಾರೆ.
ತಡರಾತ್ರಿ ಮತ್ತು ಬೆಳಗಿನ ಜಾವದ ಕಾರ್ಯಕ್ರಮಗಳಿಂದಾಗ ಹರಿ ಬಿರಿಯಲ್ಲಿ ಪಾಸ್ಪೋರ್ಟ್ ಮರೆತು ಬಂದಿರುವುದಾಗಿ ತಿಳಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, 'ನೀವು ನಾಗಿನ್, ಹೆದರುವುದು ಏಕೆ' ಎಂದಿದ್ದಾರೆ.