ಕರ್ನಾಟಕ

karnataka

ETV Bharat / entertainment

ಲಾಲ್​ ಸಿಂಗ್​ ಚಡ್ಡಾಗೆ ಪ್ರೇಕ್ಷಕರ ಬಹುಪರಾಕ್: ಸೆಹ್ವಾಗ್, ರೈನಾ ಹೇಳಿದ್ದೇನು? - ಈಟಿವಿ ಭಾರತ ಕರ್ನಾಟಕ

ಬಾಲಿವುಡ್ ನಟ ಅಮೀರ್ ಖಾನ್ ಅವರ ಬಹುನಿರೀಕ್ಷಿತ ಲಾಲ್​ ಸಿಂಗ್ ಚಡ್ಡಾ ದೇಶಾದ್ಯಂತ ರಿಲೀಸ್​ ಆಗಿದ್ದು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

Laal Singh Chaddha
Laal Singh Chaddha

By

Published : Aug 11, 2022, 4:07 PM IST

ಅಮೀರ್ ಖಾನ್ ನಟನೆಯ ಬಹುನಿರೀಕ್ಷಿತ ಲಾಲ್ ಸಿಂಗ್​ ಚಡ್ಡಾ ಸಿನಿಮಾ ದೇಶಾದ್ಯಂತ ರಿಲೀಸ್ ಆಗಿದೆ. ವ್ಯಾಪಕ ವಿರೋಧದ ಮಧ್ಯೆಯೂ ಚಿತ್ರಮಂದಿರಗಳಿಗೆ ಅಪ್ಪಳಿಸಿರುವ ಸಿನಿಮಾಗೆ ಪ್ರೇಕ್ಷಕರು ಬಹುಪರಾಕ್​ ಎಂದಿದ್ದಾರೆ. ಬಾಯ್ಕಾಟ್​​​ ಅಭಿಯಾನದ ಮಧ್ಯೆ ಬಂದಿರುವ ಲಾಲ್​ ಸಿಂಗ್​ ಚಡ್ಡಾ ದೇಶಾದ್ಯಂತ ಉತ್ತಮ ಪ್ರದರ್ಶನ ಕಾಣ್ತಿದ್ದು, ಅಮೀರ್​ ಖಾನ್​​ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಸೆಹ್ವಾಗ್, ರೈನಾ ಖುಷ್‌:ಸಿನಿಮಾ ವೀಕ್ಷಿಸಿರುವ ಟೀಂ ಮಾಜಿ ಕ್ರಿಕೆಟ್‌ ಆಟಗಾರರಾದ ವಿರೇಂದ್ರ ಸೆಹ್ವಾಗ್ ಹಾಗೂ ಸುರೇಶ್ ರೈನಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಥಾಹಂದರವನ್ನು ಶ್ಲಾಘಿಸಿರುವ ಸೆಹ್ವಾಗ್, ಈ ಚಿತ್ರ ಭಾರತದ ಸಾಮಾನ್ಯ ಜನರ ಭಾವನೆಯನ್ನು ಸಂಪೂರ್ಣವಾಗಿ ಹಿಡಿದಿಟ್ಟುಕೊಳ್ಳುತ್ತದೆ. ಅಮೀರ್ ಖಾನ್​ ನಟನೆ ಚಿತ್ರಕ್ಕೆ ಮೆರುಗು ನೀಡಿದೆ ಎಂದು ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸುರೇಶ್ ರೈನಾ ಪ್ರತಿಕ್ರಿಯಿಸಿ, ಚಿತ್ರತಂಡದ ಕಠಿಣ ಪರಿಶ್ರಮ, ಪ್ರಯತ್ನಗಳಿಗೆ ನಾನು ಅಚ್ಚರಿಗೊಂಡಿದ್ದೇನೆ. ಪ್ರೇಮಕಥೆ ಮತ್ತು ಸುಂದರ ಹಾಡುಗಳು ನನಗೆ ಇಷ್ಟವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ತಡವಾಗಿ ತೆರೆಗೆ ಅಪ್ಪಳಿಸಿದ ಲಾಲ್​ ಸಿಂಗ್​ ಚಡ್ಡಾ.. ನಿಟ್ಟುಸಿರು ಬಿಟ್ಟ ಅಮೀರ್​ ಖಾನ್​

ನೆಟಿಜನ್ಸ್​ ಮೆಚ್ಚುಗೆ: ಹಣ ಕೊಟ್ಟು ಚಿತ್ರ ನೀಡಿದ್ದು ವೇಸ್ಟ್​ ಆಗಲಿಲ್ಲ. ಐಎಂಬಿಡಿಯಲ್ಲಿ ಟಾಪ್ ರೇಟ್ ಸಿಕ್ಕಿದೆ. ಇದೊಂದು ಇಂಡಿಯಾದ ಕಾಮನ್ ಮ್ಯಾನ್​​ ಸಿನಿಮಾ ಎಂದು ಹೇಳಿದ್ದಾರೆ.

ಮೋನಾ ಸಿಂಗ್​, ನಾಗ ಚೈತನ್ಯ, ಕರೀನಾ ಕಪೂರ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ. ಅಮೀರ್ ಖಾನ್ ಮೂರು ಪಾತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅದ್ವೈತ್​ ಚಂದನ್ ನಿರ್ದೇಶನ ಮಾಡಿದ್ದಾರೆ. ಇದು 1994ರಲ್ಲಿ ತೆರೆಕಂಡ ಹಾಲಿವುಡ್​​ ಫಾರೆಸ್ಟ್​​ ಗಂಪ್​ ಚಿತ್ರದ ರಿಮೇಕ್​ ಆಗಿದೆ.

ABOUT THE AUTHOR

...view details