ಪ್ರತಿಭಾನ್ವಿತ ನಟ ವಿಜಯ್ ವರ್ಮಾ ಅವರು ಉತ್ತಮ ಅಭಿನಯದ ಮೂಲಕ ಸಿನಿ ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಚಲನಚಿತ್ರಗಳನ್ನು ಆಯ್ಕೆ ಮಾಡುವ ವಿಷಯದಲ್ಲಿ ಹಿಂದಿ ಸಿನಿಮಾ ಕ್ಷೇತ್ರದಲ್ಲಿ ನಿಪುಣರು ಎಂದೇ ಗುರುತಿಸಿಕೊಂಡಿದ್ದಾರೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ನಟ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ.
ಡಾರ್ಲಿಂಗ್ಸ್ ನಟ ವಿಜಯ್ ವರ್ಮಾ ಮುಂಬರುವ ತಮ್ಮ ಲಸ್ಟ್ ಸ್ಟೋರೀಸ್ 2 ( Lust Stories 2 ) ಸಹ ನಟಿ ತಮನ್ನಾ ಭಾಟಿಯಾ ಅವರೊಂದಿಗೆ ಡೇಟಿಂಗ್ನಲ್ಲಿದ್ದಾರೆ ಎಂಬ ವದಂತಿಗಳಿವೆ. ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿರುವ ಹಾಲ್ಗೆನ್ನೆ ಚೆಲುವೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಡೇಟಿಂಗ್ ವದಂತಿಗಳ ಬಗ್ಗೆ ವಿಜಯ್ ವರ್ಮಾ ಅವರಲ್ಲಿ ಕೇಳಲಾಯಿತು. ತಮನ್ನಾ ಹೆಸರನ್ನು ಪ್ರಸ್ತಾಪಿಸಿದ ಕೂಡಲೇ ನಟನಿಗೆ ನಾಚಿಕೊಳ್ಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ.
ಪ್ರಸ್ತುತ 'ದಹಾದ್' ಸೀರಿಸ್ ಪ್ರಚಾರದಲ್ಲಿ ವಿಜಯ್ ವರ್ಮಾ ತೊಡಗಿದ್ದಾರೆ. ಈ ಸರಣಿ ಇಂದಿನಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರ ಪ್ರಾರಂಭಿಸಿದೆ. ತಂಡ ಪ್ರಚಾರ ಕಾರ್ಯವನ್ನು ಮುಂದುವರಿಸಿದೆ. ಇತ್ತೀಚಿನ ಈವೆಂಟ್‌ನಲ್ಲಿ, ಸಹನಟ ಗುಲ್ಶನ್ ದೇವಯ್ಯ ಅವರು ತಮನಾ ಭಾಟಿಯಾ ಹೆಸರು ಹಿಡಿದು ವಿಜಯ್ ಅವರನ್ನು ತಮಾಷೆ ಮಾಡಿದ ಬಗ್ಗೆ ಪ್ರಶ್ನೆ ಎದುರಾಯಿತು. ತಮನ್ನಾ ಭಾಟಿಯಾ ಹೆಸರು ತೆಗೆಯುತ್ತಿದ್ದಂತೆ ನಾಚಿಕೆ ಪಡುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ.
ಈ ಸಂದರ್ಶನದಲ್ಲಿ ಗುಲ್ಶನ್ ಅವರೊಂದಿಗೆ ಏಕೆ ಕುಳಿತುಕೊಳ್ಳುತ್ತಿಲ್ಲ ಎಂದು ನಟ ವಿಜಯ್ ವಿವರಿಸಿದರು. ನನ್ನ ಸಹನಟ 'ಸ್ಫೋಟಕ' ಪ್ರಚಾರಗಳಿಗೆ ಹೊಸ ಅಂಶಗಳನ್ನು ಒದಗಿಸಬಹುದು ಎಂದು ವಿಜಯ್ ಪರೋಕ್ಷವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಡೇಟಿಂಗ್ ವದಂತಿಗೆ ಉತ್ತರ ಕೊಟ್ಟರು. "ಜನರು ನಿಮ್ಮನ್ನು ದೂರುತ್ತಿದ್ದಾರೆ" ಎಂದು ವರ್ಮಾ ದೇವಯ್ಯನನ್ನು ಲೇವಡಿ ಮಾಡಿದರು.