ಕರ್ನಾಟಕ

karnataka

ETV Bharat / entertainment

ಸಾರಾ..'ನೀವು ನನ್ನ ಹೆಸರು ಹೇಳಿದ ರೀತಿ ಇಷ್ಟವಾಯಿತು': ವಿಜಯ್ ದೇವರಕೊಂಡ - ಸಾರಾ ಅಲಿ ಖಾನ್‌ ವಿಜಯ್ ದೇವರಕೊಂಡ ಡೇಟ್

ಚಲನಚಿತ್ರೋದ್ಯಮದಿಂದ ಡೇಟ್ ಮಾಡಲು ಬಯಸುವ ವ್ಯಕ್ತಿಯ ಹೆಸರು ಹೇಳುವಂತೆ ಕರಣ್​ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸಾರಾ ಅಲಿ ಖಾನ್‌ ನಾಚಿಕೊಂಡು ವಿಜಯ್ ದೇವರಕೊಂಡ ಹೆಸರು ಹೇಳಿದ್ದಾರೆ.

Vijay Deverakonda send love to Sara through Instagram story
ಸಾರಾ ಅಲಿ ಖಾನ್‌ - ವಿಜಯ್ ದೇವರಕೊಂಡ

By

Published : Jul 13, 2022, 4:51 PM IST

ಬಾಲಿವುಡ್ ನಟಿ ಸಾರಾ ಅಲಿ ಖಾನ್‌ ಹೇಳಿಕೆಯೊಂದಕ್ಕೆ ಟಾಲಿವುಡ್​ ನಟ ವಿಜಯ್ ದೇವರಕೊಂಡ ಅವರು ಅತ್ಯಂತ ಪ್ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಚಲನಚಿತ್ರ ನಿರ್ಮಾಪಕ, ನಿರೂಪಕ ಕರಣ್ ಜೋಹರ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಸಾರಾ ಅಲಿ ಖಾನ್‌ ನೀಡಿದ ಉತ್ತರ ಸಖತ್​ ಸೌಂಡ್ ಮಾಡಿದೆ. ಇದೀಗ ಸ್ವತಃ ವಿಜಯ್ ದೇವರಕೊಂಡ ಸ್ಪೆಷಲ್, ಬ್ಯೂಟಿಫುಲ್ ರಿಯಾಕ್ಷನ್ ಕೊಟ್ಟಿದ್ದಾರೆ.

ಕಾಫಿ ವಿತ್ ಕರಣ್ 7ನ ಮುಂದಿನ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದೆ. ಅದರಲ್ಲಿ ಜಾನ್ವಿ ಕಪೂರ್ ಜೊತೆ ಸಾರಾ ಅಲಿ ಖಾನ್‌ ಕಾಣಿಸಿಕೊಂಡಿದ್ದಾರೆ. ಚಲನಚಿತ್ರೋದ್ಯಮದಿಂದ ಡೇಟ್ ಮಾಡಲು ಬಯಸುವ ವ್ಯಕ್ತಿಯ ಹೆಸರು ಹೇಳುವಂತೆ ಕರಣ್​ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಸಾರಾ ಅಲಿ ಖಾನ್‌ ನಾಚಿಕೊಂಡು, ಸಖತ್​ ಕ್ಯೂಟ್ ಆಗಿ ವಿಜಯ್ ದೇವರಕೊಂಡ ಎಂದಿದ್ದಾರೆ. ಈ ಪ್ರೋಮೋ ಸಖತ್​ ವೈರಲ್ ಆಗಿ ಸುದ್ದಿ ಮಾಡಿದೆ.

ವಿಜಯ್ ದೇವರಕೊಂಡ ಇನ್​ಸ್ಟಾಗ್ರಾಮ್ ಸ್ಟೋರಿ

ಇದಕ್ಕೆ ಸ್ವತಃ ವಿಜಯ್ ದೇವರಕೊಂಡ ಅವರೇ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ-ನೀವು ನನ್ನ ಹೆಸರು ಹೇಳಿದ ರೀತಿ ನನಗೆ ಬಹಳ ಇಷ್ಟವಾಯಿತು, ಕ್ಯೂಟ್ ಆಗಿದೆ ಎಂದು ಬರೆದು ಹಗ್ಸ್, ರೆಡ್ ಹಾರ್ಟ್ ಇಮೋಜಿ ಹಾಕಿಕೊಂಡಿದ್ದಾರೆ. ನಟ ತನ್ನ ಪೋಸ್ಟ್‌ನಲ್ಲಿ ಸಾರಾ ಮತ್ತು ಜಾನ್ವಿಯನ್ನು ಸಹ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ:ನಟ ಸುಶಾಂತ್ ಸಿಂಗ್‌ಗೆ ಗಾಂಜಾ ನಶೆ ಏರಿಸಿದ್ದೇ ರಿಯಾ ಚಕ್ರವರ್ತಿ: ಎನ್​ಸಿಬಿ ಚಾರ್ಜ್​ಶೀಟ್ ಸಲ್ಲಿಕೆ ​

ನಟಿ ಸಾರಾ ಅಲಿ ಖಾನ್‌ ಈ ಹಿಂದಿನ ಕಾಫಿ ವಿತ್ ಕರಣ್ ಶೋಗೆ ತನ್ನ ತಂದೆ, ನಟ ಸೈಫ್ ಅಲಿ ಖಾನ್ ಅವರೊಂದಿಗೆ ಆಗಮಿಸಿದ್ದರು. ಸಾರಾ ಆ ಸಮಯದಲ್ಲಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮೇಲಿನ ತನ್ನ ಪ್ರೀತಿಯನ್ನು ಬಹಿರಂಗಪಡಿಸಿದ್ದರು. ಈ ಬಾರಿ ಕರಣ್ ಅವರ ಪ್ರಶ್ನೆಗೆ ವಿಜಯ್ ದೇವರಕೊಂಡ ಅವರ ಹೆಸರನ್ನು ತಿಳಿಸಿದ್ದಾರೆ.

ABOUT THE AUTHOR

...view details