ಕರ್ನಾಟಕ

karnataka

ETV Bharat / entertainment

ಜರಾ ಹಟ್ಕೆ ಜರಾ ಬಜ್ಕೆ ಯಶಸ್ಸು.. ಪತ್ನಿ ಕತ್ರಿನಾ ಜೊತೆ ವಿಹಾರಕ್ಕೆ ತೆರಳಿದ ವಿಕ್ಕಿ, ವಿಡಿಯೋ ವೈರಲ್​ - Instagram ನಲ್ಲಿ ಫೋಟೋಗ್ರಾಫರ್​

ಜರಾ ಹಟ್ಕೆ ಜರಾ ಬಜ್ಕೆ ಯಶಸ್ಸಿನ ಹಿನ್ನೆಲೆ ನಟ ವಿಕ್ಕಿ ಪತ್ನಿ ಕತ್ರಿನಾ ಜೊತೆ ವಿಹಾರಕ್ಕೆ ತೆರಳಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

Vicky Kaushal  Katrina Kaif  Vicky Kaushal and Katrina Kaif  Vicky Kaushal and Katrina Kaif airport look  Vicky Kaushal airport look  Katrina Kaif airport look  vicky and katrina twinning in black  vicky and katrina twinning  ಜರಾ ಹಟ್ಕೆ ಜರಾ ಬಜ್ಕೆ ಯಶಸ್ಸು  ಪತ್ನಿ ಕತ್ರಿನಾ ಜೊತೆ ವಿಹಾರಕ್ಕೆ ತೆರಳಿದ ವಿಕ್ಕಿ  ನಟ ವಿಕ್ಕಿ ಪತ್ನಿ ಕತ್ರಿನಾ ಜೊತೆ ವಿಹಾರ  ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ Instagram ನಲ್ಲಿ ಫೋಟೋಗ್ರಾಫರ್​ ಕತ್ರಿನಾ ಮತ್ತು ವಿಕ್ಕಿ ತಮ್ಮ ಪ್ರಯಾಣ
ಜರಾ ಹಟ್ಕೆ ಜರಾ ಬಜ್ಕೆ ಯಶಸ್ಸು

By

Published : Jun 15, 2023, 1:15 PM IST

ಹೈದರಾಬಾದ್: ತಮ್ಮ ಇತ್ತೀಚಿನ ಚಿತ್ರ ‘ಜರಾ ಹಟ್ಕೆ ಜರಾ ಬಚ್ಕೆ’ಯ ಯಶಸ್ಸಿನ ಪ್ರಚಾರ ಮತ್ತು ಸಂಭ್ರಮಾಚರಣೆಯಲ್ಲಿ ನಿರತರಾಗಿರುವ ನಟ ವಿಕ್ಕಿ ಕೌಶಲ್ ಅವರು ತಮ್ಮ ಪತ್ನಿ ಕತ್ರಿನಾ ಕೈಫ್ ಅವರೊಂದಿಗೆ ವಿಹಾರಕ್ಕೆ ತೆರಳಿದ್ದಾರೆ. ಗುರುವಾರ, ದಂಪತಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡು ಬಂದರು. ಇಬ್ಬರೂ ಕಪ್ಪು ಬಟ್ಟೆಗಳನ್ನು ಧರಿಸಿದ್ದು, ಈ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳು ಇದೀಗ ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

Instagram ನಲ್ಲಿ ಫೋಟೋಗ್ರಾಫರ್​ ತಮ್ಮ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ, ಕತ್ರಿನಾ ಮತ್ತು ವಿಕ್ಕಿ ತಮ್ಮ ಪ್ರಯಾಣಕ್ಕಾಗಿ ಆರಾಮದಾಯಕವಾದ ಬಟ್ಟೆಗಳನ್ನು ತೊಟ್ಟಿದ್ದರು. ಕಪ್ಪು ಉಡುಪುಗಳ ಜೊತೆ ಸನ್​ಗ್ಲಾಸ್​ ಹಾಕಿಕೊಂಡು ಜಾಲಿಯಾಗಿ ವಿಮಾನ ಪ್ರಯಾಣಕ್ಕಾಗಿ ಏರ್​ಪೋರ್ಟ್​ಗೆ ಬಂದಿದ್ದರು. ಈ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆಯಾದರು.

ವಿಡಿಯೋವನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಕಾಮೆಂಟ್ ವಿಭಾಗಕ್ಕೆ ಭೇಟಿ ನೀಡಿದ್ದರು. ಬಳಿಕ ಅಭಿಮಾನಿಗಳು ದಂಪತಿಗೆ ಅಭಿನಂದನೆಗಳ ಸುರಿಮಳೆಯನ್ನೇ ಹರಿಸಿದರು. ವಿಕ್ಕಿ ಕೌಶಲ್ ಅವರ ಸಂದರ್ಶನಗಳು ಮತ್ತು ಚಲನಚಿತ್ರ ಪ್ರಚಾರದ ಸಮಯದಲ್ಲಿ ಕತ್ರಿನಾ ಬಗ್ಗೆ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಬುಧವಾರ, ವಿಕ್ಕಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ತಮ್ಮ ಪತ್ನಿಯೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರೂ ಬೀಚ್ ದಡದಲ್ಲಿ ಮತ್ತು ಸೂರ್ಯಾಸ್ತದ ಪ್ರಶಾಂತ ಹಿನ್ನೆಲೆಯಲ್ಲಿ ಪೋಸ್ ನೀಡಿರುವುದು ಕಂಡು ಬಂದಿತು. ದಂಪತಿ ಪರಸ್ಪರರ ಕೈಗಳನ್ನು ಹಿಡಿದುಕೊಂಡು ನಗುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.

ವಿಕ್ಕಿ ಕೌಶಲ್​ ಮತ್ತು ಸಾರಾ ಅಲಿ ಖಾನ್​ ನಟನೆಯ 'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿದೆ. ಈ ಚಿತ್ರವು ತನ್ನ ಎರಡನೇ ವಾರಾಂತ್ಯದಲ್ಲಿ 15 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಸಿನಿಮಾವು 50 ಕೋಟಿ ಗಡಿ ದಾಟಿದೆ. ಸಾಧಾರಣ ಬಜೆಟ್​ನಲ್ಲಿ ಸಿದ್ಧಗೊಂಡ ಈ ಚಿತ್ರ ಅನಿರೀಕ್ಷಿತವಾಗಿ ಉತ್ತಮ ಕಲೆಕ್ಷನ್​ ಮಾಡಿದೆ. ಈ ಯಶಸ್ಸನ್ನು ಚಿತ್ರತಂಡ ಪಾರ್ಟಿ ಆಯೋಜಿಸುವ ಮೂಲಕ ಸಂಭ್ರಮಿಸಿದೆ.

ವಿಕ್ಕಿ ಮತ್ತು ಸಾರಾ, ನಿರ್ದೇಶಕ ಲಕ್ಷ್ಮಣ್ ಉಟೇಕರ್ ಮತ್ತು ನಿರ್ಮಾಪಕ ದಿನೇಶ್ ವಿಜನ್ ಜೊತೆಗೂಡಿ ಗ್ರ್ಯಾಂಡ್​ ಪಾರ್ಟಿ ಮಾಡಿದ್ದಾರೆ. ವಿಕ್ಕಿ ಟ್ರ್ಯಾಕ್ ಪ್ಯಾಂಟ್ ಮತ್ತು ಬ್ಲ್ಯಾಕ್​ ಟೀ ಶರ್ಟ್​ ಧರಿಸಿದ್ದರು. ಸಾರಾ ಬಿಳಿ ಟೀ ಶರ್ಟ್ ಮತ್ತು ನೀಲಿ ಪ್ಯಾಂಟ್‌ನಲ್ಲಿ ಮುದ್ದಾಗಿ ಕಾಣುತ್ತಿದ್ದರು. ಅವರಿಬ್ಬರ ಟೀ ಶರ್ಟ್​ ಮೇಲೆ ಜರಾ ಹಟ್ಕೆ ಜರಾ ಬಜ್ಕೆ ಎಂದು ಬರೆಯಲಾಗಿತ್ತು.

ಕೃತಿ ಸನೋನ್​, ತಮನ್ನಾ ಭಾಟಿಯಾ ಮತ್ತು ಶಾಮ್ ಕೌಶಲ್ ಸಹ ಪಾರ್ಟಿಯಲ್ಲಿ ಭಾಗವಹಿಸಿದ್ದರು. ದಿನೇಶ್​ ವಿಜನ್​ ಜೊತೆ ಉತ್ತಮ ಬಾಂಧವ್ಯ ಹೊಂದಿರುವುದಕ್ಕಾಗಿ ಕೃತಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಿಕ್ಕಿ ಕೌಶಲ್​ ಮುಂದೆ ಮೇಘನಾ ಗುಲ್ಜಾರ್​ ಅವರ ಸ್ಯಾಮ್​ ಬಹದ್ದೂರ್​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಸಾರಾ, ಹೋಮಿ ಅದಾಜಾನಿಯಾ ನಿರ್ದೇಶನದ ಮರ್ಡರ್ ಮುಬಾರಕ್ ಮತ್ತು ಏ ವತನ್ ಮೇರೆ ವತನ್‌ನಲ್ಲಿ ನಟಿಸಲಿದ್ದಾರೆ. ಜೊತೆಗೆ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಮೆಟ್ರೋ ಇನ್ ಡಿನೋದಲ್ಲಿ ಕೆಲಸ ಮಾಡುತ್ತಿದ್ದಾರೆ.

ಓದಿ:'ಜರಾ ಹಟ್ಕೆ ಜರಾ ಬಚ್ಕೆ' ಸಿನಿಮಾದಲ್ಲಿ ಮಧ್ಯಮ ವರ್ಗ ಕುಟುಂಬದ ಚಿತ್ರಣ: ವಾರದೊಳಗೆ 35 ಕೋಟಿ ರೂ. ಗಳಿಕೆ!

ABOUT THE AUTHOR

...view details