ಚೆನ್ನೈ(ತಮಿಳುನಾಡು):ದಳಪತಿ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ತಮಿಳು ಚಲನಚಿತ್ರ 'ವರಿಸು'ಗೆ ಇದೀಗ ಸಂಕಷ್ಟ ಎದುರಾಗಿದೆ. ಕಡ್ಡಾಯವಾಗಿ ಪಡೆಯಬೇಕಿದ್ದ ಅನುಮತಿ ಪಡೆಯದೇ ಐದು ಆನೆಗಳನ್ನು ಬಳಸಿದ್ದಕ್ಕಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯೂಬಿಐ) ಶೋಕಾಸ್ ನೋಟಿಸ್ ನೀಡಿದೆ.
ವರಿಸು ಚಿತ್ರವನ್ನು ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಿಸುತ್ತಿದ್ದಾರೆ. ಎಡಬ್ಲ್ಯೂಬಿಐ ಕಾರ್ಯದರ್ಶಿ ಎಸ್.ಕೆ ದತ್ತಾ ಅವರು ನವೆಂಬರ್ 23 ರ ನೋಟಿಸ್ನಲ್ಲಿ, ವರಿಸು ಚಿತ್ರದಿಂದ ಕಡ್ಡಾಯ ಪೂರ್ವ ಚಿತ್ರೀಕರಣ ಅನುಮತಿ ಅರ್ಜಿಯನ್ನು ಮಂಡಳಿ ಸ್ವೀಕರಿಸಿಲ್ಲ ಮತ್ತು ಚಿತ್ರ ನಿರ್ಮಾಪಕರು ಪ್ರಾಣಿಗಳ ಪ್ರದರ್ಶನ (ನೊಂದಣಿ) ನಿಯಮಗಳು 2001 ಅನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ.