ಸೌಂದರ್ಯ, ರಹಸ್ಯ ಪೋಸ್ಟ್ಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ಊರ್ವಶಿ ರೌಟೇಲಾ. ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಚೆಲುವಿನಿಂದಲೇ ಸದ್ದು ಮಾಡುವ ನಟಿ ಈಗ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಅವರನ್ನು ಬಾಲಿವುಡ್ ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ತೆಲುಗು ನಟ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ ಅವರಿಂದ ನಟಿ ಕಿರುಕುಳ ಅನುಭವಿಸುತ್ತಿದ್ದಾರೆ' ಎಂಬ ಉಮೈರ್ ಸಂಧು ಹೇಳಿಕೆಗೆ ಊರ್ವಶಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಊರ್ವಶಿ ಅವರು ಉಮೈರ್ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಯುರೋಪ್‌ನಲ್ಲಿ ಏಜೆಂಟ್ ಚಿತ್ರದ ಐಟಂ ಸಾಂಗ್ ಚಿತ್ರೀಕರಣದ ಸಮಯದಲ್ಲಿ ಅಖಿಲ್ ಅಕ್ಕಿನೇನಿ ಅವರು ಬಾಲಿವುಡ್ ನಟಿ ಊರ್ವಶಿ ರೌಟೇಲಾಗೆ ಕಿರುಕುಳ ನೀಡಿದ್ದಾರೆ. ಆ ನಟನೊಂದಿಗೆ ರೌಟೇಲಾಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಉಮೈರ್ ಸಂಧು ಟ್ವೀಟ್ ಮಾಡಿಕೊಂಡಿದ್ದರು. ಉಮೈರ್ ಹೇಳಿಕೆಯನ್ನು ನಿರಾಕರಿಸಿರುವ ಊರ್ವಶಿ ಅವರು, ಟ್ವೀಟ್ ಸ್ಕ್ರೀನ್ ಶಾಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಅದರ ಮೇಲೆ 'ಫೇಕ್' ಎಂದು ಬರೆದುಕೊಂಡಿದ್ದಾರೆ.
ತಮಗೆ ಮತ್ತು ತಮ್ಮ ಕುಟುಂಬಕ್ಕೆ ಅಹಿತಕರ ವಾತಾವರಣ ಸೃಷ್ಟಿ ಮಾಡಿದ್ದಕ್ಕಾಗಿ ತಮ್ಮ ಕಾನೂನು ತಂಡವು ಉಮೈರ್ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಊರ್ವಶಿ ಹಂಚಿಕೊಂಡಿದ್ದಾರೆ. "ತಮ್ಮ ಕಾನೂನು ತಂಡದಿಂದ ಮಾನನಷ್ಟ ಮೊಕದ್ದಮೆಯ ನೋಟಿಸ್ ನೀಡಲಾಗಿದೆ. ನಿಮ್ಮ ನಕಲಿ/ಹಾಸ್ಯಾಸ್ಪದ ಟ್ವೀಟ್‌ಗಳಿಂದಾಗಿ ಅಸಮಾಧಾನಗೊಂಡಿದ್ದೇನೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಅಹಿತಕರ ವಾತಾವರಣ ಸೃಷ್ಟಿ ಮಾಡಿದ ಅಪ್ರಬುದ್ಧ ಪತ್ರಕರ್ತರು'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮುದ್ದು ಮಗಳೊಂದಿಗೆ ಮಕ್ಕಳಾದ ಸ್ಟಾರ್ ಕಪಲ್: ಪ್ರಿಯಾಂಕಾ ಚೋಪ್ರಾ ಫ್ಯಾಮಿಲಿ ಫೋಟೋ