ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಪಠಾಣ್ ಸಿನಿಮಾ ಮರು ಚೇತರಿಕೆ ನೀಡಿದೆ ಎಂದರೆ ತಪ್ಪಾಗಲಾರದು. ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಬಿಡುಗಡೆಯಾಗಿ ತಿಂಗಳ ನಂತರವೂ ಥಿಯೇಟರ್ಗಳಲ್ಲಿ ಜನ ಮನ್ನಣೆ ಪಡೆಯುತ್ತದೆ. ಮತ್ತೆ ಶಾರುಖ್ ಖಾನ್ ಬಾಲಿವುಡ್ ಬಾದ್ ಶಾ ಎಂಬುದನ್ನು ಪ್ರೂವ್ ಮಾಡಿದ್ದಾರೆ. ಪಠಾಣ್ ಸಿನಿಮಾದ ಯಶಸ್ಸಿನಲ್ಲಿರುವ ಕಿಂಗ್ ಆಫ್ ರೋಮ್ಯಾನ್ಸ್ ಎಂದೇ ಖ್ಯಾತರಾಗಿರುವ ಶಾರುಖ್ ಅವರು ತಮ್ಮ ಅಭಿಮಾನಿಗಳ ಜೊತೆ ಟ್ವಿಟರ್ನಲ್ಲಿ ಸಂವಾದ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆಕ್ಟೀವ್ ಇರುವ ಖಾನ್ ತಮ್ಮ ಅಭಿಮಾನಿಗಳ ಪ್ರಶ್ನೆಗೆ ಮುಕ್ತವಾಗಿ ಉತ್ತರಿಸಿದ್ದಾರೆ. ಈ ವೇಳೆ ಒಬ್ಬ ಅಭಿಮಾನಿ ಶಾರುಖ್ ಖಾನ್ ಮೇಲೆ ಎಫ್ಐಆರ್ ಹಾಕುವುದಾಗಿ ಹೇಳಿದ್ದಾರೆ.
ಖಾನ್ ವಿರುದ್ಧ ಎಫ್ಐಆರ್:ಅರೆ ಅಭಿಮಾನಿ ಏಕೆ ತನ್ನ ನೆಚ್ಚಿನ ನಟನ ಮೇಲೆ ಎಫ್ಐಆರ್ ದಾಖಲಿಸುತ್ತಾರೆ ಎಂದೆನಿಸುವುದು ಸಾಮಾನ್ಯ.. ಆದರೆ ಅದಕ್ಕೆ ಕಾರಣವೇ ಬೇರೆ ಇದೆ. ಪಠಾಣ್ ಚಿತ್ರಕ್ಕಾಗಿ ಶಾರುಖ್ ತಮ್ಮ ದೇಹವನ್ನು ದಂಡಿಸಿದ್ದಾರೆ. ತಮ್ಮ 57ನೇ ವಯಸ್ಸಿನಲ್ಲಿಯೂ ಸಿನಿಮಿಮಾಕ್ಕಾಗಿ ಹೆಚ್ಚಿನ ಡೆಡಿಕೇಶನ್ ತೋರಿಸಿರುವ ಕಿಂಗ್ ಖಾನ್ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ಈ ರೀತಿ ಫಿಟ್ ಆಗಿ ಕಾಣುತ್ತಿರುವ ಶಾರುಖ್ ಅವರ ವಯಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿವೆ. ಅದೇ ರೀತಿ ಖಾನ್ ಕೂಡ ತಮ್ಮ ವಯಸ್ಸು 57 ಎಂದು ಹೇಳಿಕೊಳ್ಳುತ್ತಾರೆ.
ಶಾರುಖ್ ಖಾನ್ ಈ ರೀತಿ ತಮಗೆ ವಯಸ್ಸಾಗಿದೆ ಎಂದು ಹೇಳಿಕೊಳ್ಳುವ ಬಗ್ಗೆ ಅಭಿಮಾನಿ ಬೇಸರ ವ್ಯಕ್ತಪಡಿಸಿ ಇನ್ನೊಮ್ಮೆ ವಯಸ್ಸಾಗಿದೆ ಎಂದು ಹೇಳಿದರೆ ಎಫ್ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ. ಇದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯೆ ನೀಡಿರುವ ಪಠಾಣ್ ಹೀರೋ, "ದಯವಿಟ್ಟು ಬೇಡ, ನಾನು ನನ್ನ ವಯಸ್ಸನ್ನು 30 ಎಂದು ಹೇಳುತ್ತೇನೆ. ಮುಂದಿನ ಸಿನಿಮಾವನ್ನು ಜವಾನ್ (ಹರೆಯ)" ಎಂದೇ ಮಾಡುತ್ತೇನೆ ಎಂದಿದ್ದಾರೆ.