ಬೆಂಗಳೂರು: ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಬಹುನಿರೀಕ್ಷಿತ ಚಿತ್ರ 'ಫೈಟರ್' ತೆರೆಗೆ ಬರಲು ಸಿದ್ದತೆ ನಡೆಸಿದೆ. ಇದೆ ವೇಳೆ, ಅವರು ತಮ್ಮ ಮುಂದಿನ ಸಿದ್ದತೆಯನ್ನು ನಡೆಸಿದ್ದಾರೆ. ಹಾಲಿವುಡ್ನ ಕ್ಲಾಸಿಕಲ್ ರ್ಯಾಂಬೊ ಚಿತ್ರವನ್ನು ಅವರು ಭಾರತದ ಸನ್ನಿವೇಶಕ್ಕೆ ಅಳವಡಿಸಿಕೊಳ್ಳಲು ಸಿದ್ದರಾಗಿದ್ದಾರೆ. ಕಳೆದ ಆರು ವರ್ಷಗಳಿಂದ ಈ ಚಿತ್ರ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದರೂ ಅನೇಕ ಕಾರಣದಿಂದ ಇದು ವಿಳಂಬ ಆಗುತ್ತಿದೆ. ಇನ್ನು ಈ ಚಿತ್ರದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಮತ್ತು ಜಾಹ್ನವಿ ಪ್ರಮುಖ ಪಾತ್ರ ನಿರ್ವಹಣೆ ಮಾಡಲಿದ್ದು, ಈ ಇಬ್ಬರು ಇದೇ ಮೊದಲ ಬಾರಿಗೆ ಪರದೆ ಹಂಚಿಕೊಳ್ಳುತ್ತಿದ್ದಾರೆ. ಇದೊಂದು ಭರ್ಜರಿ ಸಾಹಸ ಚಿತ್ರವಾಗಿರಲಿದೆ.
ಸಿದ್ಧಾರ್ಥ್ ಆನಂದ್ ಅವರ ಆಪ್ತರ ಮೂಲದ ಪ್ರಕಾರ, ಹಾಲಿವುಡ್ ಸಿನಿಮಾ ರ್ಯಾಂಬೊ ರಿಮೇಕ್ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಇದು ಆ್ಯಕ್ಷನ್ ಚಿತ್ರವಾಗಿರುವ ಹಿನ್ನಲೆ ಟೈಗರ್ ಶ್ರಾಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇವರಿಗೆ ನಟಿ ಜಾಹ್ನವಿ ಕಪೂರ್ ಜೊತೆಯಾಗಲಿದ್ದಾರೆ. ಇನ್ನು ಜಾಹ್ನವಿ ಕಪೂರ್ ಪಾತ್ರದ ಕುರಿತು ಚಿತ್ರ ತಂಡ ಇನ್ನು ಯಾವುದೇ ಅಧಿಕೃತಗೊಳಿಸಿಲ್ಲ. ಈ ಇಬ್ಬರು ನಟರು ದೀರ್ಘ ಕಾಲದ ಸ್ನೇಹಿತರಾಗಿದ್ದು, ಒಂದೇ ಪ್ರಾಜೆಕ್ಟ್ನಲ್ಲಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದಿದ್ದಾರೆ.
ಇನ್ನು ಈ ರಿಮೇಕ್ ಚಿತ್ರವೂ ಮುಂದಿನ ವರ್ಷ ಜನವರಿಯಿಂದ ಕಾರ್ಯಾರಂಭ ಮಾಡಲಿದೆ. ಯುರೋಪ್ನಲ್ಲಿ ಈ ಹಿಂದೆ ಚಿತ್ರೀಕರಣ ಮಾಡದ ರೀತಿ ನಿರ್ಮಾಣ ಮಾಡಲು ಮುಂದಾಗಲಾಗಿದೆ. ಈ ಚಿತ್ರದ ಆ್ಯಕ್ಷನ್ಕ್ಕಾಗಿ ಟೈಗರ್ ಶ್ರಾಫ್ ವಿಶ್ವದಲ್ಲಿ ಪ್ರಖ್ಯಾತ ತಜ್ಞರಿಂದ ತರಬೇತಿಗೆ ಪಡೆಯಲಿದ್ದು, ಗೊರಿಲ್ಲಾ ಯುದ್ಧ ತಂತ್ರ ಮತ್ತು ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತಿಳಿಯಲಿದ್ದಾರೆ ಮೂಲಗಳ ಪ್ರಕಾರ, ಭಾರತದ ರ್ಯಾಂಬೊ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ್ಯಕ್ಷನ್ ಹೊಂದಿರಲಿದ್ದು, ನೋಡಲು ಕಣ್ಣಿಗೆ ಹಬ್ಬದಂತೆ ಇರಲಿದೆ.