ಕರ್ನಾಟಕ

karnataka

ETV Bharat / entertainment

ಪ್ರವಾಸ ಹೊರಟ ತಮನ್ನಾ-ವಿಜಯ್ ಜೋಡಿ​​: ಲವ್​​ಬರ್ಡ್ಸ್ ವಿಡಿಯೋ ನೋಡಿ - ತಮನ್ನಾ ವಿಜಯ್​​ ಡೇಟಿಂಗ್​​

ಪ್ರೇಮಪಕ್ಷಿಗಳಾದ ನಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್​ ವರ್ಮಾ ಪ್ರವಾಸ ಹೊರಟಿರುವ ವಿಡಿಯೋ ವೈರಲ್​ ಆಗುತ್ತಿದೆ.

Tamannaah Bhatia and Vijay Varma
ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ

By ETV Bharat Karnataka Team

Published : Dec 27, 2023, 7:14 PM IST

ಹೊಸ ವರ್ಷಾಚರಣೆಗೆ ದಿನಗಣನೆ ಆರಂಭವಾಗಿದೆ. ಸೆಲೆಬ್ರಿಟಿಗಳು ಪ್ರೀತಿಪಾತ್ರರೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಲು ತಮಗಿಷ್ಟದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಏರ್​ಪೋರ್ಟ್​​​​ನಿಂದ ಈಗಾಗಲೇ ಬಾಲಿವುಡ್ ಸೆಲೆಬ್ರಿಟಿಗಳ ವಿಡಿಯೋ ಹೊರಬಿದ್ದಿದೆ. ವದಂತಿಯ ಲವ್​ಬರ್ಡ್ಸ್ ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಅವರ ವಿಡಿಯೋ ಸದ್ದು ಮಾಡುತ್ತಿದೆ.

ಮುಂಬೈ ಗದ್ದಲದಿಂದ ಸಿನಿಮಾ ತಾರೆಯರು ಬಿಡುವು​​ ಪಡೆಯುತ್ತಿದ್ದಾರೆ. ವೆಕೇಶನ್​​ ಸಲುವಾಗಿ ಮುಂಬೈನಿಂದ ಗೌಪ್ಯ ಸ್ಥಳಗಳಿಗೆ ಅವರೆಲ್ಲ ಹಾರುತ್ತಿದ್ದಾರೆ. ಮುಂಬೈ ಏರ್​ಪೋರ್ಟ್​​ನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಎಲ್ಲಿಗೆ ತೆರಳಿದ್ದಾರೆಂಬ ಮಾಹಿತಿ ಇಲ್ಲ.

ಈಗಾಗಲೇ ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ಮಲ್ಹೋತ್ರಾ, ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಏರ್​ಪೋರ್ಟ್ ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ತಮನ್ನಾ-ವಿಜಯ್​​ ವಿಡಿಯೋ ಇಂಟರ್​ನೆಟ್​​ನಲ್ಲಿ ಹರಿದಾಡುತ್ತಿದೆ. 2023ಕ್ಕೆ ವಿದಾಯ ಹೇಳಿ 2024 ಸ್ವಾಗತಿಸಲು ಪ್ರಯಾಣ ಪ್ರಾರಂಭಿಸಿದ್ದಾರೆ. ಕಳೆದ ನ್ಯೂ ಇಯರ್​ ಪಾರ್ಟಿಯಿಂದಲೇ ಈ ಜೋಡಿಯ ಪ್ರೇಮಪುರಾಣ ಹೊರಬಂದಿತ್ತು.

ಬಹುಭಾಷಾ ನಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಇಂದು ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅಭಿಮಾನಿಗಳೊಂದಿಗೆ ಅವರು ಫೋಟೋ ಕ್ಲಿಕ್ಕಿಸಿಕೊಂಡರು. ಪಾಪರಾಜಿಗಳೊಂದಿಗೆ ಹಾಯ್, ಬಾಯ್ ಮಾಡಿದರು. ಬಳಿಕ ವಿಮಾನ ನಿಲ್ದಾಣದೊಳಗೆ ತೆರಳಿದರು. ತಮನ್ನಾ ಡೆನಿಮ್‌, ಬ್ಲ್ಯಾಕ್​ ಸ್ವೆಟ್‌ಶರ್ಟ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿದ್ದರು. ವಿಜಯ್ ವರ್ಮಾ ಬ್ಲ್ಯಾಕ್​ ಜಾಕೆಟ್, ವೈಟ್ ಟೀ ಶರ್ಟ್, ಬೂದು ಬಣ್ಣದ ಪ್ಯಾಂಟ್‌, ಕ್ಯಾಪ್, ವೈಟ್​ ಶೂಸ್ ಧರಿಸಿದ್ದರು. ವಿಜಯ್ ಜೊತೆ ಹೊರಡುವ ಮೊದಲು ತಮನ್ನಾ ಪಾಪರಾಜಿಗಳೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ತಮ್ಮ ಅಧಿಕೃತ ಇನ್​ಸ್ಟಾ ಸ್ಟೋರಿನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:'ಡಂಕಿ' ಮಂಗಳವಾರ ಗಳಿಸಿದ್ದೆಷ್ಟು? ಬಾಕ್ಸಿ ಆಫೀಸ್‌ ಪೈಪೋಟಿ ಹೀಗಿದೆ

ಈ ಜೋಡಿ ಪರಸ್ಪರ ಪರಿಚಯವಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ. ಕಳೆದ ವರ್ಷ ಇದೇ ಸಮಯ ಗೋವಾದಲ್ಲಿ ನಡೆದ ಪಾರ್ಟಿಯಲ್ಲಿ ಚುಂಬಿಸಿದ್ದು, ವಿಡಿಯೋ ವೈರಲ್​ ಆಗಿತ್ತು. ನ್ಯೂ ಇಯರ್ ಪಾರ್ಟಿ ಸಂದರ್ಭದ ವಿಡಿಯೋ ವೈರಲ್​ ಆಗಿ ಡೇಟಿಂಗ್​ ವದಂತಿಯೂ ಹಬ್ಬಿತ್ತು. ಕೆಲಕಾಲ ಅಷ್ಟಾಗಿ ಒಟ್ಟಿಗೂ ಕಾಣಿಸಿಕೊಳ್ಳಲಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರೇಮಪಕ್ಷಿಗಳಂತೆ ಕಾಣಿಸಿಕೊಳ್ಳುವ ಮೂಲಕ ವದಂತಿಗಳಿಗೆ ತುಪ್ಪ ಸುರಿಯುತ್ತಿದ್ದಾರೆ. ನೆಟ್‌ಫ್ಲಿಕ್ಸ್ ಪ್ರೊಜೆಕ್ಟ್ ಲಸ್ಟ್ ಸ್ಟೋರೀಸ್ 2ನಲ್ಲಿ ತೆರೆ ಹಂಚಿಕೊಳ್ಳುವ ಸಂದರ್ಭದಲ್ಲಿ ಇವರ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ವರದಿಗಳು ಹೇಳಿವೆ.

ತಮನ್ನಾ ಭಾಟಿಯಾ ಇನ್​ಸ್ಟಾಗ್ರಾಮ್​ ಸ್ಟೋರಿ

ಇದನ್ನೂ ಓದಿ:ಬಿಗ್​ ಬಾಸ್​ಗೆ ಅಮ್ಮ ಬಂದ್ರೂ ಮಾತುಕತೆಯಿಲ್ಲ; ಬಿಕ್ಕಿ ಬಿಕ್ಕಿ ಅತ್ತ ಕಾರ್ತಿಕ್!

ಸಿನಿಮಾ ಪಯಣ: ವಿಜಯ್ ವರ್ಮಾ ಅವರಿಗೆ ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. 'ದಹಾದ್‌'ನಲ್ಲಿನ ನಟನೆಗೆ ಈ ಗೌರವ ಸಂದಿದೆ. ಮರ್ಡರ್ ಮುಬಾರಕ್ ಮತ್ತು ತಮಿಳು ನಟ ಸೂರ್ಯ ಅವರ ಮುಂಬರುವ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ತಮನ್ನಾ ಭಾಟಿಯಾ ಜೀ ಕರ್ದಾ, ಲಸ್ಟ್ ಸ್ಟೋರೀಸ್ 2, ಆಖ್ರಿ ಸಚ್‌ನಲ್ಲಿ ಕಾಣಿಸಿಕೊಂಡರು. ರಜನಿಕಾಂತ್ ಅಭಿನಯದ ಜೈಲರ್​​ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details