ಕರ್ನಾಟಕ

karnataka

ETV Bharat / entertainment

'ಕಂಗುವ' ಪೋಸ್ಟರ್: ವಿಭಿನ್ನ ಅವತಾರಗಳಲ್ಲಿ ಸೂಪರ್​ ಸ್ಟಾರ್ ಸೂರ್ಯ - ಸೂರ್ಯ ಕಂಗುವ

ಏಪ್ರಿಲ್ 11ರಂದು ತೆರೆಕಾಣಲಿರುವ 'ಕಂಗುವ' ಸಿನಿಮಾದ ಪೋಸ್ಟರ್ ಅನಾವರಣಗೊಂಡಿದೆ.

Suriya starrer Kanguva poster
ಸೂರ್ಯ ಅಭಿನಯದ 'ಕಂಗುವ' ಪೋಸ್ಟರ್

By ETV Bharat Karnataka Team

Published : Jan 16, 2024, 3:27 PM IST

ದಕ್ಷಿಣ ಚಿತ್ರರಂಗದ ಖ್ಯಾತ ನಟ ಸೂರ್ಯ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಂಗುವ'. ಶಿವ ಅವರು ಆ್ಯಕ್ಷನ್​​ ಕಟ್​ ಹೇಳುತ್ತಿರುವ ಕಂಗುವ 2024ರ ದಿ ಮೋಸ್ಟ್ ಎಕ್ಸ್​​ಪೆಕ್ಟೆಡ್​ ಮೂವಿ ಕೂಡ ಹೌದು. ಪೀರಿಯಾಡಿಕಲ್​​ ಆ್ಯಕ್ಷನ್ ಡ್ರಾಮಾ ಎಂದು ಬಿಂಬಿಸಲಾಗಿರುವ ಈ ಚಿತ್ರವು ಏಪ್ರಿಲ್ 11ರಂದು ತೆರೆಗಪ್ಪಳಿಸಲು ಸಜ್ಜಾಗಿದೆ. ಚಿತ್ರನಿರ್ಮಾಪಕರು ನವೆಂಬರ್​​ನಲ್ಲಿ ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ್ದರು. ಆ ಪೋಸ್ಟರ್‌ನಲ್ಲಿ ಸೂರ್ಯ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

ಕಂಗುವ ಸೆಕೆಂಡ್ ಲುಕ್ ಪೋಸ್ಟರ್: ಫಸ್ಟ್ ಲುಕ್ ಬಿಡುಗಡೆಯಾದ ಹಲವು ದಿನಗಳ ನಂತರ, ಚಿತ್ರನಿರ್ಮಾಪಕರು 'ಸೆಕೆಂಡ್ ಲುಕ್ ಪೋಸ್ಟರ್' ಸೋಷಿಯಲ್​ ಮೀಡಿಯಾಗಳಲ್ಲಿ ಅನಾವರಣಗೊಳಿಸಿದ್ದಾರೆ. ಜೈ ಭೀಮ್ ಖ್ಯಾತಿಯ ನಟ ಎರಡು ವಿಭಿನ್ನ ನೋಟಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಮೊದಲ ಪೋಸ್ಟರ್‌ಗೆ ಹೋಲುತ್ತದೆ, ಇನ್ನೊಂದು ಆಧುನಿಕ ಶೈಲಿಗೆ ಅನುಗುಣವಾಗಿದೆ.

ಚಿತ್ರ ತಯಾರಕರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್​​​ನಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. "ಸಮಯಕ್ಕಿಂತ ಬಲವಾದ ಗುರಿ; ಭೂತ, ವರ್ತಮಾನ ಮತ್ತು ಭವಿಷ್ಯ; ಎಲ್ಲದರ ಪ್ರತಿಧ್ವನಿ ಕಂಗುವ" ಎಂದು ಚಿತ್ರತಂಡ ಕ್ಯಾಪ್ಷನ್​ ಕೂಡಾ​ ಕೊಟ್ಟಿದೆ. ಸೂರ್ಯ ಮತ್ತು ಶಿವ ಕಾಂಬಿನೇಶನ್​ನ ಚೊಚ್ಚಲ ಚಿತ್ರವಿದು. ಸೂಪರ್​ ಸ್ಟಾರ್​ ಈ ಸಿನಿಮಾದಲ್ಲಿ ಆರು ವಿಭಿನ್ನ ಪಾತ್ರಗಳಲ್ಲಿ ನಟಿಸುವ ನಿರೀಕ್ಷೆ ಇದೆ. ದಿಶಾ ಪಟಾನಿ ಮತ್ತು ಬಾಬಿ ಡಿಯೋಲ್ ಅವರುಗಳು ಕಂಗುವ ಮೂಲಕ ತಮಿಳು ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ. ಇವರಲ್ಲದೇ ಜಗಪತಿ ಬಾಬು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ಕೆಎಸ್ ರವಿಕುಮಾರ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಚಲನಚಿತ್ರ ನಿರ್ಮಾಣ ಸಂಸ್ಥೆಗಳಾದ ಸ್ಟುಡಿಯೋ ಗ್ರೀನ್ ಮತ್ತು ಯುವಿ ಕ್ರಿಯೇಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ವೆಟ್ರಿ ಪಳನಿಸಾಮಿ ಕ್ಯಾಮರಾ ನಿರ್ವಹಿಸಿದ್ದಾರೆ. ನಿಶಾದ್ ಯೂಸುಫ್ ಎಡಿಟಿಂಗ್ ಕೆಲಸ ಮಾಡಿದ್ದಾರೆ. ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ ಸೇರಿದಂತೆ ಸುಮಾರು ಹತ್ತು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಫಿಲ್ಮ್‌ಫೇರ್ ಪ್ರಶಸ್ತಿ 2024: ನಾಮನಿರ್ದೇಶನಗಳ ಪಟ್ಟಿ; 19 ವಿಭಾಗಗಳಲ್ಲಿ 'ಅನಿಮಲ್'​ಗೆ ಸ್ಥಾನ

ಈ ಚಿತ್ರದ ನಂತರ ಸೂರ್ಯ ಅವರು ವೆಟ್ರಿಮಾರನ್ ಅವರೊಂದಿಗೆ ವಾಡಿವಾಸಲ್ ಎಂಬ ಪ್ರಾಜೆಕ್ಟ್​ನಲ್ಲಿ ತೊಡಗಿಕೊಳ್ಳಲಿದ್ದಾರೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್, ನಜ್ರಿಯಾ ನಾಜಿಮ್ ಮತ್ತು ವಿಜಯ್ ವರ್ಮಾ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬುದು ಈಗಾಗಲೇ ಘೋಷಣೆಯಾಗಿದೆ. ಚಿತ್ರಕ್ಕೆ ಜಿವಿ ಪ್ರಕಾಶ್ ಸಂಗೀತ ನೀಡಲಿದ್ದು, ಜೋಮನ್ ಟಿ ಜಾನ್ ಕ್ಯಾಮರಾ ವರ್ಕ್​​ ನಿರ್ವಹಿಸಲಿದ್ದಾರೆ.

ಇದನ್ನೂ ಓದಿ:ಬಿಗ್​​ ಬಾಸ್​ ಮನೆಗೆ ಹಳೇ ಸ್ಪರ್ಧಿಗಳ ಎಂಟ್ರಿ!

ABOUT THE AUTHOR

...view details