ಕರ್ನಾಟಕ

karnataka

ETV Bharat / entertainment

ಜಸ್ಟ್​ ಗ್ಲಿಂಪ್ಸ್​ ವಿಡಿಯೋದಲ್ಲೇ ದಾಖಲೆ ಬರೆದ 'ಸೂರ್ಯ 43' ಸಿನಿಮಾ - etv bharat kannada

Suriya 43 Glimpse Video: 'ಸೂರ್ಯ 43' ಸಿನಿಮಾದ ಗ್ಲಿಂಪ್ಸ್​ ವಿಡಿಯೋ ಎಕ್ಸ್​ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

Suriya 43 announcement video breaks record in views
ಜಸ್ಟ್​ ಗ್ಲಿಂಪ್ಸ್​ ವಿಡಿಯೋದಲ್ಲೇ ದಾಖಲೆ ಬರೆದ 'ಸೂರ್ಯ 43' ಸಿನಿಮಾ

By ETV Bharat Karnataka Team

Published : Nov 10, 2023, 6:36 PM IST

ಕಾಲಿವುಡ್​ ಸೂಪರ್​ಸ್ಟಾರ್​ ನಟ ಸೂರ್ಯ ಸದ್ಯ 'ಕಂಗುವ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸುಧಾ ಕೊಂಗರ ನಿರ್ದೇಶನದಲ್ಲಿ ಅವರ 43ನೇ ಸಿನಿಮಾ ಮೂಡಿ ಬರಲಿದೆ. ಈ ಚಿತ್ರದ ಗ್ಲಿಂಪ್ಸ್​ ಅನ್ನು ಚಿತ್ರತಂಡ ಇತ್ತೀಚೆಗೆ ಹಂಚಿಕೊಂಡಿದೆ. ನೋಡಲು ಕುತೂಹಲ ಮೂಡಿಸಿರುವ ಈ ವಿಡಿಯೋದಲ್ಲಿ, ಚಿತ್ರದಲ್ಲಿ ನಟಿಸಲಿರುವ ತಾರೆಯರ ಹೆಸರು, ಚಿತ್ರದ ಕಥೆ ಸೇರಿದಂತೆ ಇತರ ಕೆಲವು ಪ್ರಮುಖ ಅಂಶಗಳಿವೆ. ಜೊತೆಗೆ ಕೊನೆಯಲ್ಲಿ ಚಿತ್ರದ ಶೀರ್ಷಿಕೆ ಕೂಡ ರಿವೀಲ್​ ಮಾಡಲಾಗಿದೆ.

ಇದರ ಜೊತೆಗೆ ಈ ವಿಡಿಯೋ ದಾಖಲೆ ನಿರ್ಮಿಸಿದೆ. ದಳಪತಿ ವಿಜಯ್​ ತಮ್ಮ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ವರ್ಷದ ಹಿಂದೆ ಸೋಷಿಯಲ್​ ಮೀಡಿಯಾ ಎಕ್ಸ್​ನಲ್ಲಿ ಹಂಚಿಕೊಂಡಿದ್ದ ವಿಶೇಷ ವಿಡಿಯೋ ದಾಖಲೆ ಸರಿಗಟ್ಟಿದೆ. ಸೂರ್ಯ ಅವರು ಅಕ್ಟೋಬರ್ 26 ರಂದು 'ಸೂರ್ಯ 43' ಶೀರ್ಷಿಕೆಯೊಂದಿಗೆ ತಮ್ಮ 43ನೇ ಚಿತ್ರದ ಬಗೆಗಿನ ಘೋಷಣೆಯ ವಿಡಿಯೋವನ್ನು ಹಂಚಿಕೊಂಡರು. ಈ ವಿಡಿಯೋ ಈಗಾಗಲೇ 26.6 (2.66 ಕೋಟಿ) ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಮೂಲಕ ಎಕ್ಸ್​ನಲ್ಲಿ ಅತ್ಯಂತ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಇದಾಗಿದೆ.

ಈವರೆಗೂ ಈ ದಾಖಲೆಯು, ಕಳೆದ ವರ್ಷ ಡಿಸೆಂಬರ್​ನಲ್ಲಿ ಕಾಲಿವುಡ್​ ನಟ ದಳಪತಿ ವಿಜಯ್​ ತಮ್ಮ ಚಿತ್ರಕ್ಕೆ ಸಂಬಂಧಿಸಿದಂತೆ ಪೋಸ್ಟ್​ ಮಾಡಿದ ವಿಡಿಯೋ ಹೆಸರಿನಲ್ಲಿತ್ತು. ಈ ವಿಡಿಯೋ ಆ ಸಮಯದಲ್ಲಿ 26.2 (2.62 ಕೋಟಿ) ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿತ್ತು. ಆದರೆ, ಇದೀಗ ಈ ದಾಖಲೆಯನ್ನು 'ಸೂರ್ಯ 43' ಮುರಿದಿದೆ. ಗ್ಲಿಂಪ್ಸ್​ ರಿಲೀಸ್​ ಆದ ಎರಡೇ ವಾರದಲ್ಲಿ ವಿಜಯ್​ ಸಿನಿಮಾದ ದಾಖಲೆಯನ್ನು ಪುಡಿಗಟ್ಟಿದೆ. ಜಸ್ಟ್​ ಗ್ಲಿಂಪ್ಸ್​ ಮೂಲಕವೇ ಹೊಸ ದಾಖಲೆ ಬರೆದಿರುವ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಿದೆ. ಸದ್ಯ ವಿಡಿಯೋ ವೈರಲ್​ ಆಗುತ್ತಿದೆ.

ಇದನ್ನೂ ಓದಿ:ಟೈಗರ್ vs ಪಠಾಣ್: ಎಸ್​ಆರ್​ಕೆ ಜೊತೆಗಿನ ಮುಂದಿನ ಸಿನಿಮಾ ಬಗ್ಗೆ ಸಲ್ಮಾನ್​ ಖಾನ್ ಹೇಳಿದ್ದಿಷ್ಟು

'ಸೂರ್ಯ 43' ಬಗ್ಗೆ..ಸೂರ್ಯ ಹಾಗೂ ನಿರ್ದೇಶಕಿ ಸುಧಾ ಕೊಂಗರ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್​ ಜೀವನ ಕಥಾಧಾರಿತ ಸಿನಿಮಾ 'ಸೂರರೈ ಪೋಟ್ರು' ಮೂಲಕ ಸಂಚಲನ ಮೂಡಿಸಿದ್ದ ಈ ಜೋಡಿ ಮಗದೊಮ್ಮೆ ಒಂದಾಗಿದ್ದಾರೆ. 'ಸೂರರೈ ಪೋಟ್ರು' ಸಿನಿಮಾವು ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದಲೂ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು. ಆಸ್ಕರ್​ ರೇಸ್​ಗೂ ಇಳಿದಿದ್ದ ಈ ಚಿತ್ರ ಹಲವು ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿತ್ತು. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಈ ತಂಡ ಇದೀಗ ಹೊಸ ಪ್ರಾಜೆಕ್ಟ್​ಗಾಗಿ ಮತ್ತೆ ಒಂದಾಗಿದೆ.

'ಸೂರರೈ ಪೋಟ್ರು' ಮೂಲಕ ಧಮಾಕ ಸೃಷ್ಟಿಸಿದ್ದ ಸೂರ್ಯ ಹಾಗೂ ಸುಧಾ ಕೊಂಗರ ಹೊಸ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದೆ. ಮಾಲಿವುಡ್​ ಹ್ಯಾಂಡ್ಸಮ್​ ಹಂಕ್​ ದುಲ್ಕರ್​ ಸಲ್ಮಾನ್​, ನಜ್ರಿಯಾ ಫಹದ್​ ಹಾಗೂ ವಿಜಯ್​ ವರ್ಮಾ ಅವರು ಸೂರ್ಯ ನಟನೆಯ 43ನೇ ಚಿತ್ರದ ಭಾಗವಾಗಿದ್ದಾರೆ. ಚಿತ್ರಕ್ಕೆ 'ಪುರನನೂರು' ಎಂದು ಶೀರ್ಷಿಕೆ ಇಡಲಾಗಿದೆ. ಸಿನಿಮಾವನ್ನು ಸೂರ್ಯ ಒಡೆತನದ 2D ಎಂಟರ್​ಟೈನ್​ಮೆಂಟ್​ ಅಡಿ ಜ್ಯೋತಿಕಾ, ಸೂರ್ಯ ಮತ್ತು ರಾಜಶೇಖರ್​ ಕರ್ಪೂರ ಸುಂದರ ಪಾಂಡಿಯನ್​ ನಿರ್ಮಿಸಲಿದ್ದಾರೆ. ಮ್ಯೂಸಿಕ್​ ಮಾಂತ್ರಿಕ ಜಿ.ವಿ ಪ್ರಕಾಶ್​ ಸಂಗೀತ ನಿರ್ದೇಶಿಸುತ್ತಿರುವ 100ನೇ ಚಿತ್ರ ಇದಾಗಿರುವುದು ಮತ್ತೊಂದು ವಿಶೇಷ. 'ಸೂರರೈ ಪೋಟ್ರು' ಮೂಲಕ ಮೋಡಿ ಮಾಡಿದ್ದ ಸೂರ್ಯ, ಸುಧಾ ಹಾಗೂ ಜಿ.ವಿ ಪ್ರಕಾಶ್​ ಹೊಸ ಪ್ರಾಜೆಕ್ಟ್​ ಮೇಲೆ ನಿರೀಕ್ಷೆ ಇಮ್ಮಡಿಯಾಗಿದೆ.

ಇದನ್ನೂ ಓದಿ:'ಸ್ಯಾಮ್ ಬಹದ್ದೂರ್': ಭಾರತೀಯ ಸೇನಾ ಕ್ಯಾಂಪ್​​ನಲ್ಲಿ ವಿಕ್ಕಿ ಕೌಶಲ್​​ - ತರಬೇತಿಯ ವಿಡಿಯೋ ನೋಡಿ

ABOUT THE AUTHOR

...view details