ಕರ್ನಾಟಕ

karnataka

ETV Bharat / entertainment

'ಶುಗರ್​ ಫ್ಯಾಕ್ಟರಿ'ಗಾಗಿ ಕಝಾಕಿಸ್ತಾನ್​ನಲ್ಲಿ ಸೋನಾಲ್​ ಜೊತೆ ಡಾರ್ಲಿಂಗ್​ ಕೃಷ್ಣ ರೊಮ್ಯಾನ್ಸ್​ - ಈಟಿವಿ ಭಾರತ ಕನ್ನಡ

'ಶುಗರ್​ ಫ್ಯಾಕ್ಟರಿ' ಸಿನಿಮಾದ 'ಜಹಾಪನಾ' ಎಂಬ ರೊಮ್ಯಾಂಟಿಕ್​ ಹಾಡು ಬಿಡುಗಡೆಯಾಗಿದೆ.

Sugar Factory movie romantic song released
'ಶುಗರ್​ ಫ್ಯಾಕ್ಟರಿ'ಗಾಗಿ ಕಝಾಕಿಸ್ತಾನ್​ನಲ್ಲಿ ಸೋನಾಲ್​ ಜೊತೆ ಡಾರ್ಲಿಂಗ್​ ಕೃಷ್ಣ ರೊಮ್ಯಾನ್ಸ್​

By ETV Bharat Karnataka Team

Published : Oct 14, 2023, 4:20 PM IST

ಒಂದು ಸಿನಿಮಾ ಪ್ರೇಕ್ಷಕರನ್ನು ಗೆಲ್ಲಬೇಕಂದ್ರೆ ಅಲ್ಲಿ ಒಂದೊಳ್ಳೆ ಕಂಟೆಂಟ್​, ಮನಸ್ಸಿಗೆ ಮುದ ನೀಡುವ ಸನ್ನಿವೇಶಗಳು, ಎಮೋಷನಲ್​ ಸೀನ್​ಗಳು ಇರಲೇಬೇಕು. ಹಾಗಿದ್ದಾಗ ಮಾತ್ರ ಆ ಚಿತ್ರ ಸೂಪರ್​ ಹಿಟ್​ ಎನಿಸಿಕೊಳ್ಳುತ್ತದೆ. ಸದ್ಯ ಇಂತಹದ್ದೇ ಅದ್ಭುತ ಕಂಟೆಂಟ್​ ಇರುವ ಸಿನಿಮಾವೊಂದು ಕನ್ನಡದಲ್ಲಿ ತಯಾರಾಗುತ್ತಿದೆ. ಚಿತ್ರದ ಹೆಸರು 'ಶುಗರ್​ ಫ್ಯಾಕ್ಟರಿ'. ಕೆಲವು ದಿನಗಳ ಹಿಂದೆ ಈ ಚಿತ್ರದ ಟ್ರೇಲರ್​ ಬಿಡುಗಡೆಯಾಗಿದ್ದು, ಮಿಲಿಯನ್​ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಚಿತ್ರತಂಡ ರೊಮ್ಯಾಂಟಿಕ್​ ಹಾಡನ್ನು ರಿವೀಲ್​ ಮಾಡಿದೆ.

'ಶುಗರ್​ ಫ್ಯಾಕ್ಟರಿ'ಗಾಗಿ ಕಝಾಕಿಸ್ತಾನ್​ನಲ್ಲಿ ಸೋನಾಲ್​ ಜೊತೆ ಡಾರ್ಲಿಂಗ್​ ಕೃಷ್ಣ ರೊಮ್ಯಾನ್ಸ್​

ಸುಮಧುರ ಪ್ರೇಮ ಗೀತೆಗಳ ಮಾಸ್ಟರ್ ಎಂದೇ ಕರೆಸಿಕೊಂಡಿರುವ ಜಯಂತ ಕಾಯ್ಕಿಣಿ ಬರೆದಿರುವ 'ಜಹಾಪನಾ' ಲವ್​ ಟ್ರ್ಯಾಕ್​ ಇದಾಗಿದೆ. ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ನಿಹಾಲ್ ತಾವ್ರೊ ಹಾಗೂ ಅಮೃತಾ ನಾಯಕ್ ಅವರ ಕಂಠಸಿರಿಯಲ್ಲಿ ಹಾಡು ಮಧುರವಾಗಿ ಮೂಡಿಬಂದಿದೆ. ಈ ರೋಮ್ಯಾಂಟಿಕ್ ಹಾಡಿಗೆ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮೊಂತೆರೊ ಹೆಜ್ಜೆ ಹಾಕಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ.

'ಶುಗರ್​ ಫ್ಯಾಕ್ಟರಿ'ಗಾಗಿ ಕಝಾಕಿಸ್ತಾನ್​ನಲ್ಲಿ ಸೋನಾಲ್​ ಜೊತೆ ಡಾರ್ಲಿಂಗ್​ ಕೃಷ್ಣ ರೊಮ್ಯಾನ್ಸ್​

ಈ ಹಾಡಿನ ವಿಶೇಷತೆ ಬಗ್ಗೆ ಮಾತನಾಡಿರುವ ನಿರ್ದೇಶಕ ದೀಪಕ್ ಅರಸ್, "ಈ ಹಾಡನ್ನು ನಾವು ಯುರೋಪ್ ದೇಶದ ಕಝಾಕಿಸ್ತಾನ್ ಎಂಬ ಸುಂದರ ತಾಣದಲ್ಲಿ ಚಿತ್ರೀಕರಣ ಮಾಡಿದ್ದೇವೆ. ಕಝಾಕಿಸ್ತಾನದಲ್ಲಿ ಶುಗರ್​ ಫ್ಯಾಕ್ಟರಿ ಚಿತ್ರತಂಡ ಬರೋಬ್ಬರಿ 11 ದಿನಗಳ ಕಾಲ ಇದ್ದು, ಏಳು ದಿನ ಈ ಒಂದು ಹಾಡನ್ನು ಶೂಟಿಂಗ್​ ಮಾಡಿದ್ದೇವೆ. ಇದೆಕ್ಕೆಲ್ಲಾ ಸಾಥ್ ಕೊಟ್ಟಿದ್ದು ನನ್ನ ಗೆಳೆಯ ಹಾಗೂ ನಿರ್ಮಾಪಕ ಗಿರೀಶ್. ನೃತ್ಯ ನಿರ್ದೇಶಕ ಧನಂಜಯ್ ಈ ಕಲರ್ ಫುಲ್ ಹಾಡನ್ನು ಕೋರಿಯೋಗ್ರಾಫಿ ಮಾಡಿದ್ದಾರೆ. ಕ್ಯಾಮರಮ್ಯಾನ್ ಸಂತೋಷ್ ರೈ ಪಾತಾಜೆ ಬಹಳ ಸುಂದರವಾಗಿ ಚಿತ್ರೀಕರಣ ಮಾಡುವುದರ ಜೊತೆಗೆ ಕೃಷ್ಣ ಹಾಗು ಸೋನಲ್ ಮಂತೋರ್ ಅವರನ್ನು ಬಹಳ ಮುದ್ದಾಗಿ ತೋರಿಸಿದ್ದಾರೆ" ಎಂದರು.

ಇದನ್ನೂ ಓದಿ:'ಶುಗರ್ Factory' ಟೀಸರ್ ಔಟ್ : Attitude​​​ ಎಲ್ಲಾ ಅಂತಿದ್ದಾರೆ ಡಾರ್ಲಿಂಗ್ ಕೃಷ್ಣ​

ಡಾರ್ಲಿಂಗ್ ಕೃಷ್ಣ ಅವರ ಸಿನಿ ಜರ್ನಿಯಲ್ಲೇ ಶುಗರ್ ಫ್ಯಾಕ್ಟರಿ ಬಿಗ್ ಬಜೆಟ್ ಚಿತ್ರವಾಗಿದೆ. ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಡಾರ್ಲಿಂಗ್​​ ಕೃಷ್ಣಗೆ ನಾಯಕಿಯರಾಗಿ ನಟಿಸಿದ್ದಾರೆ. ಇವರ ಜೊತೆಗೆ ರಂಗಾಯಣ ರಘು, ಶಶಿ ಹಾಗೂ ಮಹಾಂತೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ದೀಪಕ್ ಅರಸ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಆರ್ ಗಿರೀಶ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಕಬೀರ್ ರಫಿ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿದೆ. ನವೆಂಬರ್ 24 ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಶುಗರ್ ಫ್ಯಾಕ್ಟರಿ ಟ್ರೇಲರ್​​​ಗೆ ಸಿನಿ ರಸಿಕರ ಮೆಚ್ಚುಗೆ: ಡಾರ್ಲಿಂಗ್ ಕೃಷ್ಣ ಲುಕ್​ಗೆ ಫ್ಯಾನ್ಸ್ ಫಿದಾ

ABOUT THE AUTHOR

...view details