ಕರ್ನಾಟಕ

karnataka

ETV Bharat / entertainment

ವಿಕ್ರಾಂತ್ ರೋಣನ 'ರಾರಾ ರುಕ್ಕಮ್ಮ' ರಿಲೀಸ್​.. ರಿಂಗ ರಿಂಗ ರೋಜು ಲಂಗದಲ್ಲಿ ಜಾಕ್ವೆಲಿನ್ ಮಿಂಚಿಂಗ್! - ಗಡಾಂಗ್ ರುಕ್ಕಮ್ಮ

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣನ ರಾರಾ ರುಕ್ಕಮ್ಮ ಸಾಂಗ್ ರಿಲೀಸ್ ಆಗಿದೆ.

Vikrant Rona Ra Ra Rakkamma
Vikrant Rona Ra Ra Rakkamma

By

Published : May 23, 2022, 3:57 PM IST

ನಟ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ‘ವಿಕ್ರಾಂತ್‌ ರೋಣ’ ಸಿನಿಮಾ ದಿನಕ್ಕೊಂದು ಇಂಟ್ರೆಸ್ಟಿಂಗ್ ಸುದ್ದಿ ಕೊಡುತ್ತಿದೆ. ಇದೀಗ ಚಿತ್ರದ 'ಗಡಾಂಗ್ ರುಕ್ಕಮ್ಮ' ಲಿರಿಕಲ್ ಹಾಡು ಬಿಡುಗಡೆ ಮಾಡಿದೆ. ಸಖತ್ತಾಗಿರುವ ಲಿರಿಕ್ಸ್​ಗೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ್ದು, ಯುಟೂಬ್​ನಲ್ಲಿ ಭಾರಿ ಸಂಚಲನ ಮೂಡಿಸುವ ಭರವಸೆ ಮೂಡಿಸಿದೆ.

ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಬಿಡುಗಡೆಯಾಗುತ್ತಿದೆ. ಆದರೆ, ಇಂದು ಕನ್ನಡದ ಲಿರಿಕಲ್ ಸಾಂಗ್ ಮಾತ್ರ ರಿಲೀಸ್ ಆಗಿದ್ದು, ದಿನಕ್ಕೊಂದು ಭಾಷೆಯಲ್ಲಿ ಲಿರಿಕ್ಸ್ ಬಿಡುಗಡೆ ಮಾಡಲು ಟೀಂ ನಿರ್ಧರಿಸಿದೆ. ನಾಳೆ ಹಿಂದಿ, ಮೇ.25 ರಂದು ತೆಲುಗು, ಮೇ26ಕ್ಕೆ ತಮಿಳು ಹಾಗೂ 27ರಂದು ಮಲಯಾಳಂನಲ್ಲಿ ಹಾಡು ಯೂಟೂಬ್​ನಲ್ಲಿ ಕಾಣಿಸಿಕೊಳ್ಳಲಿದೆ.

ಇನ್ನು ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದು, ಪ್ರೇಕ್ಷಕರಿಗೆ ರಸದೌತಣ ಸಿಗುವ ಎಲ್ಲ ಲಕ್ಷಣಗಳು ಲಿರಿಕಲ್ ವಿಡಿಯೋದಲ್ಲಿ ಕಾಣಿಸುತ್ತಿವೆ. ಚಿತ್ರ ನಿರ್ದೇಶಕ ಅನೂಪ್ ಭಂಡಾರಿ ಅವರೇ ಕ್ಯಾಚಿ ಸಾಹಿತ್ಯ ರಚಿಸಿದ್ದು, ಅಜನೀಶ್ ಲೋಕನಾಥ್ ಉತ್ತಮ ಸಂಗೀತ ನೀಡಿದ್ದಾರೆ. ಅನೂಪ್‌ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಶಾಲಿನಿ ಆರ್ಟ್ಸ್‌ ಮೂಲಕ ಜಾಕ್‌ ಮಂಜು ಹಾಗೂ ಅಲಂಕಾರ್‌ ಪಾಂಡ್ಯನ್‌ ನಿರ್ಮಾಣ ಮಾಡಿದ್ದಾರೆ. ಜುಲೈ 28ರಂದು ಏಕಕಾಲಕ್ಕೆ ಪ್ರಪಂಚದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ. ಇನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರ ಬ್ಯಾನರ್ ವಿಕ್ರಾಂತ್ ರೋಣಕ್ಕೆ ಸಾಥ್ ನೀಡಿದೆ.

3Dಯಲ್ಲೂ ತೆರೆಗೆ ಬರುತ್ತಿರುವ ವಿಕ್ರಾಂತ್ ರೋಣ ಸಸ್ಪೆನ್ಸ್ ಥ್ರಿಲರ್ ಕತೆಯಾಗಿದ್ದು, ಈಗಾಗಲೇ ಭಾರಿ ನಿರೀಕ್ಷೆ ಮೂಡಿಸಿದೆ. ಈ ಮೂಲಕ ಕೆಜಿಎಫ್ 2 ನಂತರ ಕನ್ನಡದ ನೆಲದಿಂದ ಮತ್ತೊಂದು ಸಿನಿಮಾ ದೇಶಾದ್ಯಂತ ಸದ್ದು ಮಾಡಲು ಸಿದ್ಧವಾಗಿದೆ.

(ಇದನ್ನೂ ಓದಿ: ಓವರ್ ಸೀಸ್ ಮಾರುಕಟ್ಟೆಯಲ್ಲಿ ದಾಖಲೆ ಬರೆದ 'ವಿಕ್ರಾಂತ್ ರೋಣ')

ABOUT THE AUTHOR

...view details