ಕರ್ನಾಟಕ

karnataka

ಹುಟ್ಟು ಹಬ್ಬದಂದೂ ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್

By

Published : Jun 10, 2022, 8:56 AM IST

ಬಾಲಿವುಡ್​ನಲ್ಲಿ ಫ್ಯಾಷನ್ ಐಕಾನ್ ಎಂದೇ ಪ್ರಸಿದ್ದವಾಗಿರುವ ಬಾಲಿವುಡ್ ನಟಿ ಸೋನಂ ಕಪೂರ್ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದಾರೆ.

Sonam Kapoor flaunts blooming baby bump in off white ensemble
ಹುಟ್ಟು ಹಬ್ಬದಂದು ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್

ಬಾಲಿವುಡ್ ನಟಿ ಸೋನಮ್ ಕಪೂರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ತಮ್ಮ ಹುಟ್ಟುಹಬ್ಬದಂದು ಮೆಟರ್ನಿಟಿ ಫೋಟೋಶೂಟ್‌ ಮಾಡಿಸಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೋನಮ್ ಕಪೂರ್ ಬಿಳಿ ಬಣ್ಣದ ಡ್ರೆಸ್‌ನಲ್ಲಿ ಸಖತ್ ಮಿಂಚಿದ್ದಾರೆ. ಬೇಬಿ ಬಂಫ್ ಪೋಟೋಗಳು ಸುಂದರವಾಗಿ ಮೂಡಿಬಂದಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ತನ್ನ ಹುಟ್ಟುಹಬ್ಬದಂದು ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದು, ಈ ಬಾರಿ ತನ್ನ ಜನ್ಮದಿನ ವಿಶೇಷವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಸೋನಂ ಕಪೂರ್, 'ತಾಯ್ತನದ ಉತ್ತುಂಗದಲ್ಲಿದ್ದೇನೆ. ಅಲ್ಲದೇ ಗರ್ಭಿಣಿ ಆಗಿರುವ ನನಗೆ ಇಂದು ನನ್ನ ಹುಟ್ಟುಹಬ್ಬ ತುಂಬಾ ವಿಶೇಷವಾಗಿದೆ' ಎಂದು ಬರೆದುಕೊಂಡಿದ್ದಾರೆ.

ಹುಟ್ಟು ಹಬ್ಬದಂದು ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ ಸೋನಂ ಕಪೂರ್

2007ರಲ್ಲಿ ತೆರೆಗೆ ಬಂದ 'ಸಾವರಿಯಾ' ಚಿತ್ರದ ಮೂಲಕ ಸೋನಂ ಕಪೂರ್ ಬಣ್ಣದ ಬದುಕು ಆರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2018ರಲ್ಲಿ ಉದ್ಯಮಿ ಆನಂದ್ ಅಹೂಜಾ ಅವರನ್ನು ಮದುವೆಯಾಗಿದ್ದರು.

ಇದನ್ನೂ ಓದಿ:ಹುಟ್ಟುಹಬ್ಬಕ್ಕೂ ಮುನ್ನ ಪತಿಯೊಂದಿಗೆ ಕಿರು ವಿಡಿಯೋ ಹಂಚಿಕೊಂಡ ಸೋನಂ ಕಪೂರ್

ABOUT THE AUTHOR

...view details