ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಚಿತ್ರದ ಟೈಟಲ್ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ 'ಕ್ಯಾಪ್ಚರ್'. ಪ್ರಿಯಾಂಕ ಉಪೇಂದ್ರ ನಟನೆಯ ಮಮ್ಮಿ, ದೇವಕಿ ಚಿತ್ರಗಳ ನಿರ್ದೇಶಕ ಲೋಹಿತ್ ನಿರ್ದೇಶಿಸಿ, ರವಿರಾಜ್ ಅದ್ಧೂರಿ ನಿರ್ಮಾಣದ 'ಕ್ಯಾಪ್ಚರ್' ಸ್ಯಾಂಡಲ್ವುಡ್ನಲ್ಲಿ ಸಾಕಷ್ಟು ವಿಶೇಷತೆಗಳಿಂದ ಸೌಂಡ್ ಮಾಡುತ್ತಿದೆ. ಸೈಲೆಂಟ್ ಆಗಿ ಚಿತ್ರೀಕರಣ ಮಾಡುತ್ತಿರುವ ತಂಡ ಓರ್ವ ಸ್ಪೆಷಲ್ ವ್ಯಕ್ತಿ ಜೊತೆ ಪ್ರಿಯಾಂಕಾ ಉಪೇಂದ್ರ ಅವರನ್ನು ಸಂದರ್ಶನ ಮಾಡಿಸಿತು.
ಅಷ್ಟಕ್ಕೂ ಪ್ರಿಯಾಂಕ ಉಪೇಂದ್ರರನ್ನು ಸ್ಪೆಷಲ್ ಇಂಟರ್ ವ್ಯೂ ಮಾಡಿರೋದು ಉಪೇಂದ್ರ, ಪ್ರಿಯಾಂಕರ ಮುದ್ದಿನ ಮಗ ಆಯುಷ್. ಆಯುಷ್ ಅವರು ಅಮ್ಮನಿಗೆ ಕ್ಯಾಪ್ಚರ್ ಚಿತ್ರದ ಬಗ್ಗೆ ಹಾಗು ದೆವ್ವಗಳನ್ನು ನೋಡಿದ್ದೀರಾ? ಎಂಬೆಲ್ಲ ಸಾಕಷ್ಟು ಇಂಟ್ರೆಸ್ಟ್ರಿಂಗ್ ವಿಚಾರಗಳನ್ನು ಕೇಳಿದರು.
ಹಾರರ್ ಮೂವೀಸ್ ನೋಡಿ ನಿದ್ದೆ ಬಿಟ್ಟಿದ್ದರು ಪ್ರಿಯಾಂಕ:ಪ್ರಿಯಾಂಕ ಚಿಕ್ಕವರಿದ್ದಾಗಿನಿಂದ ಹಾರರ್ ಚಿತ್ರಗಳನ್ನು ನೋಡುತ್ತಿದ್ದರಂತೆ. ಈ ರೀತಿಯ ಸಿನಿಮಾಗಳಲ್ಲಿ ಹೆಚ್ಚು ಆಸಕ್ತಿ ಇತ್ತಂತೆ. ತಾವು ಮೊದಲು ತಾವು ನೋಡಿದ ಹಾರರ್ ಚಿತ್ರವನ್ನು ಅವರು ತಿಳಿಸಿದ್ದಾರೆ. ಹಾಲಿವುಡ್ನ 'ದಿ ಎಕ್ಸಾರ್ಸಿಸ್ಟ್' ಮೂವಿಯನ್ನು ನೋಡಿ3-4ತಿಂಗಳು ನಿದ್ದೆಯನ್ನೇ ಮಾಡಿಲ್ವಂತೆ.
ಇನ್ನು ತಮ್ಮ ಸಿನಿಮಾ ಕೆರಿಯರ್ನಲ್ಲಿ ಹಾರರ್ ಚಿತ್ರದಲ್ಲಿ ನಟಸಿರುವ ಬಗ್ಗೆ ಕೇಳಿದಾಗ, 'ಮಮ್ಮಿ' ಸಿನಿಮಾ ಮೊದಲ ಹಾರರ್ ಚಿತ್ರವಾಗಿದ್ದು, ನಿರ್ದೇಶಕ ಲೋಹಿತ್ ಸ್ಕ್ರಿಪ್ಟ್ ತಿಳಿಸಿದ ರೀತಿಯಿಂದಲೇ ನಾನು ತುಂಬಾ ಥ್ರಿಲ್ ಆಗಿದ್ದೆ. ಮಮ್ಮಿ ಸಿನಿಮಾ ಕೇವಲ ಹಾರರ್ ಅಲ್ಲದೆ, ಅದರಲ್ಲಿ ಗರ್ಭಿಣಿ ಪಾತ್ರವಾಗಿರಬಹುದು, ತಾಯಿ, ಮಗು ರೀತಿಯ ಬೇರೆ ಬೇರೆ ಅಂಶಗಳಿದ್ದವು ಎಂದು ತಿಳಿಸಿದರು. ಜತೆಗೆ ಪ್ರಿಯಾಂಕರ ಮಮ್ಮಿ ಸಿನಿಮಾದ ಫಸ್ಟ್ ಶೋ ನೋಡಿದ್ದ ಮಗ ಆಯುಷ್ ಥಿಯೆಟರ್ನಿಂದಲೇ ಓಡಿ ಹೋಗಿರುವ ವಿಚಾರವನ್ನೂ ಇಂಟರ್ವ್ಯೂನಲ್ಲಿ ಬಿಚ್ಚಿಟ್ಟಿದ್ದಾರೆ.