ಕರ್ನಾಟಕ

karnataka

ETV Bharat / entertainment

ಗಂಧದ ಗುಡಿ ಅಪ್ಪು ಕೊನೆಯ ಚಿತ್ರವಲ್ಲ, ಇದು ಆರಂಭ: ಶಿವರಾಜ್ ಕುಮಾರ್ - Shiva Rajkumar reaction about gandhada gudi

ಪುನೀತ್ ರಾಜ್ ಕುಮಾರ್ ಅಭಿನಯದ ಗಂಧದ ಗುಡಿ ಸಾಕ್ಷ್ಯ ಚಿತ್ರ ತೆರೆಕಂಡಿದೆ. ಈ ಸಂಬಂಧ ನಟ ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಗಂಧದ ಗುಡಿ ಅಪ್ಪು ಕೊನೆಯ ಚಿತ್ರವಲ್ಲ, ಇದು ಆರಂಭ ಎಂದು ಹೇಳಿದರು.

Shiva Rajkumar
ನಟ ಶಿವರಾಜ್ ಕುಮಾರ್

By

Published : Oct 28, 2022, 10:32 AM IST

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕನಸಿನ‌ ಚಿತ್ರ ಗಂಧದ ಗುಡಿ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿನಿಮಾ ನೋಡಿದ ಕೋಟ್ಯಂತರ ಅಭಿಮಾನಿಗಳು ಕಣ್ಣೀರು ಹಾಕುವ ಮೂಲಕ‌ ಸಿಲ್ವರ್ ಸ್ಕ್ರೀನ್ ಮೇಲೆ‌ ಪವರ್ ಸ್ಟಾರ್ ನೋಡಿ ಕಣ್ಣು ತುಂಬಿಕೊಂಡಿದ್ದಾರೆ.‌

ರಾಘವೇಂದ್ರ ರಾಜ್ ಕುಮಾರ್ ‌ಮಕ್ಕಳಾದ‌ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ನರ್ತಕಿ ಚಿತ್ರಮಂದಿರದಲ್ಲಿ ಅಭಿಮಾನಗಳ ಜೊತೆ ಸಿನಿಮಾ ನೋಡಿದರು. ಆದರೆ, ದೊಡ್ಮನೆಯಿಂದ ನಟ ಶಿವರಾಜ್ ಕುಮಾರ್ ಮಾತ್ರ ಗಂಧದ ಗುಡಿ ಚಿತ್ರದ ಪ್ರೀಮಿಯರ್ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ.‌ ಹೀಗಾಗಿ, ಇಂದು ಸಂಜೆ ಸಿನಿಮಾ ವೀಕ್ಷಣೆ ಮಾಡುತ್ತೇನೆ‌ ಅಂತಾ ಶಿವಣ್ಣ ಹೇಳಿದರು.

ಇದನ್ನೂ ಓದಿ:ವಿಶ್ವಾದ್ಯಂತ ತೆರೆಗೆ ಅಪ್ಪಳಿಸಿದ ಗಂಧದ ಗುಡಿ.. ಅಭಿಮಾನಿಗಳ ಜೊತೆ ರಾಘಣ್ಣ ಡ್ಯಾನ್ಸ್

ಗಂಧದ ಗುಡಿ ಅಪ್ಪು ಅವರ ಕೊನೆಯ ಚಿತ್ರವಲ್ಲ, ಇದು ಆರಂಭ. ಅಪ್ಪು ಯಾವಾಗಲೂ ನಮ್ಮ ಜೊತೆ ಇರ್ತಾರೆ. ಪ್ರಕೃತಿಯ ಬಗ್ಗೆ ಗಂಧದ ಗುಡಿಯಲ್ಲಿ ಅಪ್ಪಾಜಿ ತಿಳಿಸಿದ್ದರು. ಅದರಿಂದ ಅದೆಷ್ಟೋ ಜನರಿಗೆ ಪ್ರೇರಣೆಯಾಗಿತ್ತು. ನನ್ನ ಅದೃಷ್ಟ ನಾನು ಗಂಧದ ಗುಡಿ ಪಾರ್ಟ್ 2 ಮಾಡಿದೆ. ಇಂದು ಪ್ರಕೃತಿಯಲ್ಲಿ ಏರೇಪೇರು ಆಗುತ್ತಿದ್ದು, ಕಾಡಿನ ಮಹತ್ವದ ಬಗ್ಗೆ ಅಪ್ಪು ತಿಳಿಸಿದ್ದಾರೆ. ಅಭಿಮಾನಿಗಳು ಅಪ್ಪುವನ್ನ ನೋಡಲು ಬರಬೇಕು. ಗಂಧದ ಗುಡಿ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು ಎಂದು ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮನವಿ ಮಾಡಿದರು.

ಇದನ್ನೂ ಓದಿ:ಗಂಧದ ಗುಡಿ ರಿಲೀಸ್: ನಟರಾಜ ಥಿಯೇಟರ್ ಮುಂದೆ ಜಮಾಯಿಸಿದ ಅಭಿಮಾನಿಗಳು

ABOUT THE AUTHOR

...view details