ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಮುಂಬರುವ 'ನಿಕಮ್ಮ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಣ್ಣಂಚಲಿ ನೀರು ತಂದುಕೊಂಡಿದ್ದಾರೆ. 14 ವರ್ಷಗಳ ನಂತರ ಬೆಳ್ಳಿ ಪರದೆಗಳಿಗೆ ಶಿಲ್ಪಾ ಮರಳುತ್ತಿದ್ದು, ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅವರ ತಾಯಿಯ ವಿಶೇಷ ಸಂದೇಶವನ್ನು ದೊಡ್ಡ ಪರದೆಯಲ್ಲಿ ಪ್ಲೇ ಮಾಡಲಾಯಿತು. ತಮ್ಮ ತಾಯಿಯ ವಿಡಿಯೋ ಸಂದೇಶ ನೋಡುತ್ತಿದ್ದಂತೆ ಕಣ್ಣಲ್ಲಿ ನೀರು ತುಂಬಿಕೊಂಡರು.
ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 'ನಿಕಮ್ಮ' ಚಿತ್ರದ ಕತೆಯು ತುಂಬಾ ಪ್ರಬಲವಾಗಿದೆ. ಇಷ್ಟು ದಿನ ಆರಾಮಾಗಿದ್ದ ನನ್ನನ್ನು ಮತ್ತೆ ಶ್ರಮ ವಹಿಸುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ದೀರ್ಘಕಾಲದವರೆಗೆ ಚಲನಚಿತ್ರಗಳಿಂದ ದೂರವಿದ್ದ ನಾನು ನಿಜವಾಗಿಯೂ ತುಕ್ಕು ಹಿಡಿದಿದ್ದೇನೆ. ಆದರೆ, ನಿರ್ದೇಶಕ ಸಬ್ಬೀರ್ ಖಾನ್ ನನ್ನಿಂದ ಅಭಿನಯಯನ್ನು ಮತ್ತೆ ಹೊರತೆಗೆದಿದ್ದಾರೆ ಎಂದು ಹೇಳಿದರು.