ಕರ್ನಾಟಕ

karnataka

ETV Bharat / entertainment

ಶಾಹಿದ್​ - ಮೀರಾ ಗ್ರೀಸ್​ ಹಾಲಿಡೇಸ್​: ಪತಿಯ ಸ್ಟನ್ನಿಂಗ್​ ಫೋಟೋಸ್​ ಹಂಚಿಕೊಂಡ ಮೀರಾ - ಮದುವೆ ವಾರ್ಷಿಕೋತ್ಸವ

ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ಗ್ರೀಸ್​ ಟೂರ್​ ಮುಗಿಸಿಕೊಂಡು ಬಂದಿರುವ ಶಾಹಿದ್​ ಹಾಗೂ ಮೀರಾ ಜೋಡಿ.

Mira shares stunning photos of Shahid
ಪತಿಯ ಸ್ಟನ್ನಿಂಗ್​ ಫೊಟೋಸ್​ ಹಂಚಿಕೊಂಡ ಮೀರಾ

By

Published : Jul 10, 2023, 5:33 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​​ ಅಂಗಳದ ಅತ್ಯಂತ ಕ್ಯೂಟ್​ ಹಾಗೂ ಸೂಪರ್​ ಜೋಡಿಗಳಲ್ಲಿ ಒಂದಾದ ನಟ ಶಾಹಿದ್​ ಕಪೂರ್​ ಹಾಗೂ ಮೀರಾ ರಜಪೂತ್​ ಜೋಡಿ ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದು, ಜೋಡಿ ಚಂದದ ಫೋಟೋಗಳು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿತ್ತು. ಇತ್ತೀಚೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ಮೀರಾ ಹಾಗೂ ಶಾಹಿದ್ ಜೋಡಿ ಗ್ರೀಸ್​ನಲ್ಲಿ ತಮ್ಮ ವೆಕೇಷನ್​​​ ಟ್ರಿಪ್​ ಮುಗಿಸಿಕೊಂಡು ಬಂದಿರುವ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಗ್ರೀಸ್​ ಟೂರ್​ ವೇಳೆ ಪತಿ ಶಾಹಿದ್​ಗಾಗಿ ಪತ್ನಿ ಮೀರಾ ಅವರೇ ಫೋಟೋಗ್ರಾಫರ್​ ಆಗಿದ್ದು, ತನ್ನ ಪತಿ ಶಾಹಿದ್​ಗೆ ಸೂರ್ಯ ಮುತ್ತಿಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರೀಸ್​ನಲ್ಲಿ ಮೀರಾ ರಜಪೂತ್​ ತಮ್ಮ ಗ್ರೀಸ್​ ಡೈರಿಯಿಂದ ಫೋಟೋಗಳ ಸರಣಿಯನ್ನೇ ಪೋಸ್ಟ್​ ಮಾಡಿದ್ದರು. ಆದರೆ, ಅಷ್ಟು ಫೋಟೋಗಳಲ್ಲಿ ಸುಂದರವಾದ ಹಿನ್ನೆಲೆಯೊಂದಿಗೆ ಪೋಸ್​ ಕೊಟ್ಟಿರುವ ನಟ ಶಾಹಿದ್​ ಕಪೂರ್​ ಫೋಟೋ ಮಾತ್ರ ಹೆಚ್ಚು ಆಕರ್ಷಕವಾಗಿತ್ತು.

ಫೋಟೊದಲ್ಲಿ ಶಾಹಿದ್​ ಕಪೂರ್​ ಬಿಳಿ ಟಿ ಶರ್ಟ್​ ಹಾಗೂ ಶಾರ್ಟ್ಸ್​ ತೊಟ್ಟು ಅದಕ್ಕೊಪ್ಪುವಂತಹ ಶೂಸ್​ ಧರಿಸಿ, ಸೂರ್ಯನ ಚುಂಬಿಸುವಂತೆ ಪೋಸ್​ ಕೊಟ್ಟಿದ್ದಾರೆ. ಸನ್​ಗ್ಲಾಸ್​ ಧರಿಸಿ, ಕೆದರಿದ ಕೂದಲು ಜೊತೆಗೆ ಗಡ್ಡ ವಾವ್​ ಶಾಹಿದ್​ನ ಸ್ಮೋಕಿ ಲುಕ್​ ಫೋಟೋವನ್ನು ಪತ್ನಿ ಮೀರಾ ರಜಪೂತ್​ ಹಂಚಿಕೊಂಡಿದ್ದಾರೆ. ಫೋಟೋವನ್ನು ಹಂಚಿಕೊಂಡಿರುವ ಮೀರಾ, ಬೆಂಕಿಯ ಇಮೋಜಿಯೊಂದಿಗೆ "ಆಯ್ ಆಯ್ " ಎಂದು ಬರೆದಿದ್ದಾರೆ.

ತಮ್ಮ ಫೋಟೋಗಳನ್ನು ಕೂ ಮೀರಾ ಹಂಚಿಕೊಂಡಿದ್ದು, ಹಸಿರು ಬಣ್ಣದ ಸ್ಕಿಫ್ಲಿ ಮಿಡ್ ಲೆಂತ್​ ಡ್ರೆಸ್​ನಲ್ಲಿ ಮೀರಾ ಕೂಡ ಸುಂದರವಾಗಿ ಕಾಣುತ್ತಿದ್ದರು. ಮಿನಿಮಮ್​ ಮೇಕ್​​​- ಅಪ್​ನಲ್ಲಿ ಕಪ್ಪು ಟೋಪಿ, ಹೊಂದಿಕೆಯಾಗುವ ಬೂಟು ತೊಟ್ಟು, ದೋಣಿ ವಿಹಾರದಲ್ಲಿ ಮಿಂಚಿದ್ದಾರೆ. ಶುಕ್ರವಾರವಷ್ಟೇ ಶಾಹಿದ್​ ಕಪೂರ್​ ಹಾಗೂ ಮೀರಾ ತಮ್ಮ 8ನೇ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಈ ಖುಷಿಯ ಸಂದರ್ಭವನ್ನು ಕೂಡ ಇನ್​ಸ್ಟಾಗ್ರಾಂನಲ್ಲಿ ವಿಶೇಷ ಪೋಸ್ಟ್​ಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದ್ದರು.

ನಟ ಶಾಹಿದ್​ ಕೂಡ ಮೀರಾ ಜೊತೆಗಿನ ವೆಕೇಷನ್​ ಹೋದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳಿಗೆ "ನಕ್ಷತ್ರಗಳಿಂದ ತುಂಬಿದ ಆಕಾಶದಲ್ಲಿ .... ನಾನು ನಿನಗೆ ನನ್ನ ಹೃದಯವನ್ನು ನೀಡಿದ್ದೇನೆ .. ನನ್ನ ಹೃದಯದಲ್ಲಿ ನೀನು ಮಾತ್ರ ಇರುವೆ. (ಪ್ಲೀಸ್ ನನ್ನನ್ನು ಕೊಲ್ಲಬೇಡ, ಏಕೆಂದರೆ ನಿಮ್ಮ ಮೆಚ್ಚಿನ ಹಾಡಿನಿಂದ ನನ್ನ ಆವೃತ್ತಿಯನ್ನು ನಾನು ರಚಿಸಿದ್ದೇನೆ) ನನ್ನ ಹೆಂಡತಿಗೆ ವಾರ್ಷಿಕೋತ್ಸವದ ಶುಭಾಶಯಗಳು." ಎಂದು ಪ್ರೀತಿಯಿಂದ ಕ್ಯಾಫ್ಷನ್​ ಕೂಡ ನೀಡಿದ್ದಾರೆ.

ಚಿತ್ರದಲ್ಲಿ, ಶಾಹಿದ್ ಮತ್ತು ಮೀರಾ ಕ್ಯಾಶುಯಲ್ ಡ್ರೆಸ್​ ಧರಿಸಿ, ಕಿಸ್​ ಮಾಡುತ್ತಿರುವುದನ್ನು ಕಾಣಬಹುದು. ಮೀರಾ ಚಿತ್ರವೊಂದನ್ನು ಹಂಚಿಕೊಂಡಿದ್ದು, . ಫೋಟೋದಲ್ಲಿ, ಮೀರಾ ಶಾಹಿದ್ ಕೆನ್ನೆಯ ಮೇಲೆ ಮುತ್ತು ನೀಡುತ್ತಿರುವುದನ್ನು ಕಾಣಬಹುದು. ಶಾಹಿದ್ ಮತ್ತು ಮೀರಾ ತಮ್ಮ ರಜೆಯ ಗ್ಲಿಂಪ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅದಷ್ಟೇ ಅಲ್ಲದೆ ಮೀರಾ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶಾಹಿದ್ ಜೊತೆಗಿನ ವಿಂಡೋ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ.

ಶಾಹಿದ್ ಮತ್ತು ಮೀರಾ 2015 ಜುಲೈ 7ರಂದು ದೆಹಲಿಯಲ್ಲಿ ಹಸೆಮಣೆ ಏರಿದ್ದರು. ಇವರಿಬ್ಬರದು ಅರೇಂಜ್ಡ್​​ ​ ಮ್ಯಾರೇಜ್​. ಈ ಕ್ಯೂಟ್​ ಕಪಲ್​ ಗೆ ಮುದ್ದಾದ ಮಕ್ಕಳಿಬ್ಬರು, ಮಗಳು ಮಿಶಾ ಮತ್ತು ಮಗ ಜೈನ್‌. ಮಿಶಾ 2016 ರಲ್ಲಿ ಜನಿಸಿದರೆ, ಶಾಹಿದ್-ಮೀರಾ 2018 ರಲ್ಲಿ ಜೈನ್ ಅವರನ್ನು ಸ್ವಾಗತಿಸಿದರು. ಸಿನಿಮಾ ನೋಡುವುದಾದರೆ ಶಾಹಿದ್ ಇತ್ತೀಚೆಗೆ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಬ್ಲಡಿ ಡ್ಯಾಡಿ' ಯಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:Jawan Prevue: 'ಜವಾನ್'​ ಪ್ರಿವ್ಯೂ ರಿಲೀಸ್​; ಕಿಂಗ್​ ಖಾನ್​ ಹೊಸ ಅವತಾರಕ್ಕೆ ಫ್ಯಾನ್ಸ್​ ಫಿದಾ!

ABOUT THE AUTHOR

...view details