ಇಂಡಿಯನ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮುಖ್ಯಭೂಮಿಕೆಯ 'ಡಂಕಿ' ಬಿಡುಗಡೆಗೆ ಇನ್ನೊಂದೇ ತಿಂಗಳು ಬಾಕಿ. ನಾಯಕ ಮತ್ತು ನಿರ್ಮಾಪಕನಾಗಿ ಕೆಲಸ ಮಾಡಿರುವ ಕಿಂಗ್ ಖಾನ್, ಸಿನಿಮಾ ಬಿಡುಗಡೆಗೆ ಸರಿಯಾಗಿ ಒಂದು ತಿಂಗಳು ಬಾಕಿ ಇರುವಾಗ ಪ್ರಚಾರ ಪ್ರಾರಂಭಿಸಿದ್ದಾರೆ. ಡಂಕಿ ಪ್ರಮೋಶನ್ ಭಾಗವಾಗಿ ಸಖತ್ ಸ್ಟೈಲಿಶ್ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಡಂಕಿ ಪ್ರಮೋಶನ್: ಪಠಾಣ್ ಎಂಬ ಬ್ಲಾಕ್ಬಸ್ಟರ್ ಮೂಲಕ ವರ್ಷಾರಂಭ ಮಾಡಿದ ಎಸ್ಆರ್ಕೆ ಜವಾನ್ ಮೂಲಕ ಮತ್ತೊಮ್ಮೆ ವಿಜಯೋತ್ಸವ ಆಚರಿಸಿದ್ದರು. 58ರ ಹರೆಯದ ನಟ ಡಂಕಿ ಮೂಲಕ 2023 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಪಣ ತೊಟ್ಟಿದ್ದಾರೆ. ರಾಜ್ಕುಮಾರ್ ಹಿರಾನಿ ನಿರ್ದೇಶನದ 'ಡಂಕಿ' ಸಿನಿಮಾ ಬಿಡುಗಡೆಗೆ ಎಸ್ಆರ್ಕೆ ಸಜ್ಜಾಗಿದ್ದಾರೆ.
ಕಿಂಗ್ ಖಾನ್ಗೆ ಪ್ರೀತಿಯ ಮಳೆ: ಈ ನಿಟ್ಟಿನಲ್ಲಿ ಬಹುನಿರೀಕ್ಷಿತ ಸಿನಿಮಾದ ಪ್ರಚಾರ ಆರಂಭಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಿಂಗ್ ಖಾನ್ ಸಖತ್ ಸ್ಟೈಲಿಶ್ ಅಂಡ್ ಹ್ಯಾಂಡ್ಸಮ್ ಲುಕ್ನಲ್ಲಿ ಕಾಣಿಸಿಕೊಂಡಿರುವ ಫೋಟೋ ಶೇರ್ ಮಾಡಲಾಗಿದೆ. 58ರ ಹರೆಯದಲ್ಲೂ ಯುವಕರೂ ನಾಚುವಂತ ಫಿಟ್ ಅಂಡ್ ಹ್ಯಾಂಡ್ಸಮ್ ಲುಕ್ ಒಳಗೊಂಡಿದ್ದು, ಅಭಿಮಾನಿಗಳು ಪ್ರೀತಿಯ ಧಾರೆಯೆರೆದಿದ್ದಾರೆ.
ಫೋಟೋ ಹಂಚಿಕೊಂಡ ಪೂಜಾ ದದ್ಲಾನಿ: ಹೌದು, ಇಂದು ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸೂಪರ್ ಸ್ಟಾರ್ನ ಸ್ಟನ್ನಿಂಗ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಖಾನ್ ಯುವಕನಂತೆ ಕಾಣಿಸಿಕೊಂಡಿದ್ದಾರೆ. ಡಾರ್ಕ್ ಬ್ಲ್ಯೂ ಸೂಟ್, ಬೂದು ಬಣ್ಣದ ಪ್ಯಾಂಟ್, ವೈಟ್ ಶರ್ಟ್ನಲ್ಲಿ ಯುವಕನಂತೆ ಕಂಗೊಳಿಸಿದ್ದಾರೆ. ಮೂರು ಆಕರ್ಷಕ ಫೋಟೋಗಳನ್ನು ಹಂಚಿಕೊಂಡ ಪೂಜಾ ದದ್ಲಾನಿ, "30 ದಿನದಲ್ಲಿ ಡಂಕಿ ಬರಲಿದೆ'' ಎಂಬರ್ಥದಲ್ಲಿ ಕ್ಯಾಪ್ಷನ್ ಕೊಟ್ಟಿದ್ದಾರೆ.
ಇದನ್ನೂ ಓದಿ:'ಕಾಫಿ ವಿತ್ ಕರಣ್'ನಲ್ಲಿ ಪಾಸ್ಟ್ ರಿಲೇಶನ್ಶಿಪ್ ಚರ್ಚೆ: 'ಗೌಪ್ಯತೆ' ಗೌರವಿಸಿ ಎಂದ ಕಾರ್ತಿಕ್ ಆರ್ಯನ್
ಪೂಜಾ ಅವರು ಶಾರುಖ್ ಅವರ ಅದ್ಭುತ ಚಿತ್ರಗಳನ್ನು ಹಂಚಿಕೊಂಡ ಬೆನ್ನಲ್ಲೇ ಕಿಂಗ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಡಂಕಿ ಸಿನಿಮಾದ ಮೊದಲ ಹಾಡಿನ ಅಪ್ಡೇಟ್ಸ್ ಅನ್ನು ನಟ ಹಂಚಿಕೊಂಡಿದ್ದು, ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಪೋಸ್ಟರ್ ಹಂಚಿಕೊಂಡ ನಟ, ನಾಳೆ 'ಲಟ್ಟ್ ಪುಟ್ಟ್' ಗಯಾ ಹಾಡು ಅನಾವರಣಗೊಳ್ಳಲಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಪೋಸ್ಟರ್ನಲ್ಲಿ, ನಟ ಶಾರುಖ್ ಖಾನ್ ಅವರ ಕೈ ಹಿಡಿದು ತಾಪ್ಸಿ ಪನ್ನು ಹೆಜ್ಜೆ ಹಾಕುತ್ತಿದ್ದು, ಇದೊಂದು ಪ್ರೇಮಗೀತೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಹಾಡಿಗೆ ಅಭಿಮಾನಿಗಳು ಕಾತರರಾಗಿದ್ದು, ಸಿನಿಮಾ ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.
ಇದನ್ನೂ ಓದಿ:ಅಪ್ಪನ ಜೊತೆಗೆ ತೆರೆ ಹಂಚಿಕೊಳ್ಳಲು ಸಿದ್ದಳಾದ ಸುಹಾನಾ ಖಾನ್; ಮತ್ತೊಂದು ಆ್ಯಕ್ಷನ್ ಚಿತ್ರದಲ್ಲಿ 'ಕಿಂಗ್' ಖಾನ್