ಕರ್ನಾಟಕ

karnataka

ETV Bharat / entertainment

Satyaprem Ki Katha: 50 ಕೊಟಿ ರೂ. ಗಡಿದಾಟಿದ 'ಸತ್ಯಪ್ರೇಮ್ ಕಿ ಕಥಾ' - ಕಾರ್ತಿಕ್ ಆರ್ಯನ್

ಸತ್ಯಪ್ರೇಮ್ ಕಿ ಕಥಾ ಸಿನಿಮಾ ತೆರೆಕಂಡು ಒಂದು ವಾರದಲ್ಲಿ 50.61 ಕೋಟಿ ರೂ. ಕಲೆಕ್ಷನ್​ ಮಾಡಿದೆ.

Satyaprem Ki Katha collection
ಸತ್ಯಪ್ರೇಮ್ ಕಿ ಕಥಾ ಕಲೆಕ್ಷನ್​

By

Published : Jul 6, 2023, 4:19 PM IST

ಬಾಲಿವುಡ್ ಪ್ರತಿಭಾನ್ವಿತ ಕಲಾವಿದರಾದ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಜೋಡಿಯ ರೊಮ್ಯಾಂಟಿಕ್ ಮ್ಯೂಸಿಕಲ್​ ಲವ್​ಸ್ಟೋರಿ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸಿದೆ. ಮೊದಲ ದಿನಗಳಲ್ಲಿ ಉತ್ತಮ ಕಲೆಕ್ಷನ್​ ಮಾಡಿದ ಸಿನಿಮಾದ ಅಂಕಿ - ಅಂಶ ಕೊಂಚ ತಗ್ಗಿದೆ. ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಸತ್ಯಪ್ರೇಮ್ ಕಿ ಕಥಾ ಮೊದಲ ಸೋಮವಾರದಿಂದ ಕುಸಿತ ಕಾಣಲು ಪ್ರಾರಂಭಿಸಿದೆ. ಬುಧವಾರದಂದು 3.85 ಕೋಟಿ ರೂಪಾಯಿಗಳಷ್ಟು ಸಂಪಾದನೆ ಮಾಡಿದೆ.

ಸಮೀರ್ ವಿದ್ವಾನ್ಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸತ್ಯಪ್ರೇಮ್ ಕಿ ಕಥಾ ಮೊದಲ ವಾರದಲ್ಲಿ 50 ಕೋಟಿ ರೂಪಾಯಿ ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಸಕಾರಾತ್ಮಕ ವಿಮರ್ಶೆಗಳ ಹೊರತಾಗಿಯೂ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟಿನ ಸದ್ದು ಮಾಡಿಲ್ಲ.

ವರದಿಗಳ ಪ್ರಕಾರ, ಸತ್ಯಪ್ರೇಮ್ ಕಿ ಕಥಾ ಮೊದಲ ವಾರದ ಒಟ್ಟು ಕಲೆಕ್ಷನ್ ಸುಮಾರು 50.61 ಕೋಟಿ ರೂ. ಕಳೆದ ಗುರುವಾರ ಈದ್​​ ಸಂದರ್ಭದಲ್ಲಿ ತೆರೆಕಂಡ ಸಿನಿಮಾ ಮೊದಲ ದಿನ 9.25 ಕೋಟಿ ರೂ. ಗಳಿಸಿದೆ. ಶುಕ್ರವಾರ ಈ ಸಂಖ್ಯೆ ಕೊಂಚ ಕುಸಿತ ಕಂಡಿತ್ತು. ಶನಿವಾರ ಮತ್ತು ಭಾನುವಾರ ಕ್ರಮವಾಗಿ 10 ಕೋಟಿ ಮತ್ತು 12 ಕೋಟಿ ರೂ. ಸಂಪಾದಿಸಿತ್ತು. ಆದರೆ, ಸೋಮವಾರ ಕಲೆಕ್ಷನ್ ಸಂಖ್ಯೆ 4 ಕೋಟಿ ರೂ.ಗೆ ಕುಸಿಯಿತು. ಆ ನಂತರ ವಾರದ ದಿನ ಹಿನ್ನೆಲೆ ಗಳಿಕೆಯಲ್ಲಿ ಪ್ರಗತಿ ಕಾಣಿಸಲಿಲ್ಲ. ಸಿನಿಮಾ ತೆರೆಕಂಡ ಏಳನೇ ದಿನ ಅಂದರೆ ಬುಧವಾರ 3.85 ಕೋಟಿ ರೂ. ವ್ಯವಹಾರ ನಡೆಸಿದೆ.

ಸತ್ಯಪ್ರೇಮ್ ಕಿ ಕಥಾ ಚಿತ್ರದಲ್ಲಿ ಕಾರ್ತಿಕ್ ಮತ್ತು ಕಿಯಾರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಶೀರ್ಷಿಕೆಯೇ ನಟ ನಟಿಯ ಹೆಸರು. ಸತ್ಯಪ್ರೇಮ್ ಆಗಿ ಕಾರ್ತಿಕ್ ಆರ್ಯನ್ ನಟಿಸಿದರೆ, ಕಥಾ ಆಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಗಜ್​​ರಾಜ್ ರಾವ್, ಸುಪ್ರಿಯಾ ಪಾಠಕ್, ಶಿಖಾ ತಲ್ಸಾನಿಯಾ, ರಾಜ್​​ಪಾಲ್ ಯಾದವ್, ಸಿದ್ಧಾರ್ಥ್ ರಾಂಧೇರಿಯಾ ಮತ್ತು ಅನುರಾಧಾ ಪಟೇಲ್ ಕೂಡ ಅಭಿನಯಿಸಿದ್ದಾರೆ.

ಇದನ್ನೂ ಓದಿ:Salaar: ಬಿಡುಗಡೆಯಾದ ಕೆಲ ಗಂಟೆಯಲ್ಲೇ 25 ಮಿಲಿಯನ್​ ವೀಕ್ಷಣೆ .. ಸಲಾರ್​ ಟೀಸರ್​ ಬಗ್ಗೆ ಅಭಿಮಾನಿಗಳೇನಂದ್ರು?

ಕಾರ್ತಿಕ್ ಮತ್ತು ಕಿಯಾರಾ ನಟನೆಯ ಎರಡನೇ ಸಿನಿಮಾ ಇದು. 2022ರ ಸೂಪರ್ ಹಿಟ್ ಚಿತ್ರ ಭೂಲ್ ಭುಲೈಯ್ಯಾ 2ರಲ್ಲಿ ಈ ಜೋಡಿ ಕೆಲಸ ಮಾಡಿದ್ದರು. ಹಾಗಾಗಿ ಸತ್ಯಪ್ರೇಮ್ ಕಿ ಕಥಾ ಸಿನಿಮಾದ ಮೇಲೂ ಸಾಕಷ್ಟು ನಿರೀಕ್ಷೆ ಹೊಂದಲಾಗಿತ್ತು. ಆದರೆ ಸಿನಿಮಾ ಕಲೆಕ್ಷನ್ ಗಮನಿಸಿದರೆ ಭೂಲ್ ಭುಲೈಯ್ಯಾ 2 ಅನ್ನು ಮೀರಿಸುತ್ತದೆ ಎಂದು ಅನಿಸುತ್ತಿಲ್ಲ. ಭೂಲ್ ಭುಲೈಯ್ಯಾ 2 ಸಿನಿಮಾ ಮೊದಲ ದಿನವೇ 14.11 ಕೋಟಿ ರೂಪಾಯಿ ಗಳಿಸಿತ್ತು. ಮೊದಲ ವಾರದಲ್ಲಿ 92 ಕೋಟಿ ರೂಪಾಯಿಗಳನ್ನು ಗಳಿಸುವಲ್ಲಿ ಯಶಸ್ವಿ ಆಗಿತ್ತು. ಇದು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 185 ಕೋಟಿ ರೂಪಾಯಿ ಸಂಗ್ರಹಿಸಿತ್ತು.

ಇದನ್ನೂ ಓದಿ:Salaar: 400 ಕೋಟಿ ರೂಪಾಯಿ ವೆಚ್ಚ, 14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್​! ಸಲಾರ್‌ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ

'ಸತ್ಯಪ್ರೇಮ್ ಕಿ ಕಥಾ' ಥಿಯೇಟರ್​ಗಳಲ್ಲಿ ಸೋಲೋ ರಿಲೀಸ್​ ಪ್ರಯೋಜನ ಪಡೆದಿಲ್ಲ. ಏಕೆಂದರೆ, ಸಿನಿಮಾ ತೆರೆಕಂಡ ವೇಳೆ ಆದಿಪುರುಷ್​ ಮತ್ತು ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾಗಳು ಸ್ಪರ್ಧೆ ನೀಡಿತ್ತು. ವಿದ್ಯಾ ಬಾಲನ್ ಅವರ ಸಸ್ಪೆನ್ಸ್ ಥ್ರಿಲ್ಲರ್ ನೀಯತ್​ ಸಿನಿಮಾ ನಾಳೆ ತೆರೆಕಾಣಲಿದ್ದು, 'ಸತ್ಯಪ್ರೇಮ್ ಕಿ ಕಥಾ' ಸ್ಪರ್ಧೆ ಎದುರಿಸಲಿದೆ.

ABOUT THE AUTHOR

...view details