ಕರ್ನಾಟಕ

karnataka

ETV Bharat / entertainment

2022ರಲ್ಲಿ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟ ಸ್ಟಾರ್ ಕಿಡ್ಸ್​​..

2022ರಲ್ಲಿ ಯಾವ ತಾರೆಯರ ಮಕ್ಕಳು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಅಂತಾ ನೋಡೋಣ ಬನ್ನಿ...

sandalwood stars children
ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ಮಕ್ಕಳು

By

Published : Dec 25, 2022, 5:01 AM IST

ಈ ಸಿನಿಮಾ ಎಂಬ ಗ್ಲ್ಯಾಮರ್ ಪ್ರಪಂಚಕ್ಕೆ ಸಾಕಷ್ಟು ಮಂದಿ ನಟ, ನಟಿಯರು ಬರ್ತಾರೆ. ಆದರೆ ಕೆಲವರು ಮಾತ್ರ ಅಭಿಮಾನಿಗಳ ಮನದಲ್ಲಿ ಗಟ್ಟಿಯಾಗಿ ನಿಲ್ತಾರೆ. ಇದೀಗ ಕನ್ನಡದ ಕೆಲ ಸ್ಟಾರ್ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡವ ಮೂಲಕ ಭವಿಷ್ಯದ ಸೆಲೆಬ್ರೆಟಿಗಳಾಗುವ ಸೂಚನೆ ಕೊಟ್ಟಿದ್ದಾರೆ. 2022ರಲ್ಲಿ ಯಾವ ತಾರೆಯರ ಮಕ್ಕಳು ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ ಅಂತಾ ಹೇಳ್ತೀವಿ ಕೇಳಿ.

ರಾಧನಾ ರಾಮ್: ಸ್ಯಾಂಡಲ್‌ವುಡ್‌ನ ನಿರ್ಮಾಪಕ ದಿವಂಗತ ರಾಮು ಹಾಗೂ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್​ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹೆಸರಿಡದ ಚಿತ್ರದಲ್ಲಿ ರಾಧನಾ ರಾಮ್ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಸಿನಿಮಾ ನೋಡಿ ಬೆಳೆದಿರುವ ರಾಧನ್ ರಾಮ್, ನಿರ್ಮಾಪಕನ ಮಗಳು ಅಥವಾ ಮಾಲಾಶ್ರೀ ಮಗಳು ಅಂತಾ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ. ಬಾಲಿವುಡ್ ನಟ ಅನುಪಮ್​​ ಕೇರ್ ಅವರ ಆ್ಯಕ್ಟಿಂಗ್ ಇನ್ಸ್​​ಟಿಟ್ಯೂಟ್​ನಲ್ಲಿ ಅಭಿನಯ, ಡ್ಯಾನ್ಸ್ ಅಂತಾ ಸತತ ಎರಡು ವರ್ಷ ಕೋರ್ಸ್ ಮುಗಿಸಿದ ಮೇಲೆ ಹೀರೋಯಿನ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಮೊದಲ ಸಿನಿಮಾ ಬಿಡುಗಡೆ ಆಗುವ ಮೊದಲೇ ರಾಧನಾ ರಾಮ್​ಗೆ ಧ್ರುವ ಸರ್ಜಾ ಅವರ ಜೊತೆ ಸ್ಕ್ರೀನ್ ಶೇರ್ ಮಾಡುವ ಚಾನ್ಸ್ ಸಿಕ್ಕಿದೆ.

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ಮಕ್ಕಳು

ಅಮೃತ ಪ್ರೇಮ್: ರಾಮ್ ಹಾಗು ಮಾಲಾಶ್ರೀ ಮಗಳ ಬಳಿಕ ಈ 2022ನೇ ವರ್ಷದಲ್ಲಿ ಕನ್ನಡದ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಸ್ಟಾರ್ ಮಗಳು ಅಂದ್ರೆ ಅಮೃತ ಪ್ರೇಮ್. ನೆನಪಿರಲಿ ಖ್ಯಾತಿಯ ಪ್ರೇಮ್ ಅವರ ಮಗಳು ಅಮೃತ ಪ್ರೇಮ್ ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಟಗರು ಪಲ್ಯ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗ್ಲೇ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಉಮೇಶ್ ಕೆ ಕೃಪ ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ನಾಗಭೂಷಣ್ ಜೋಡಿಯಾಗಿ ಅಭಿನಯಿಸುತ್ತಿರುವ ಅಮೃತಾ ಕೂಡ ಬಾಲಿವುಡ್ ನಟ ಅನುಪಮ್​​ ಕೇರ್ ಆಕ್ಟಿಂಗ್ ಇನ್ಸಿಟ್ಯೂಟ್​ನಲ್ಲಿ ಅಭಿನಯ, ಡ್ಯಾನ್ಸ್ ಕಲಿತುಕೊಂಡು ಬಿಗ್ ಸ್ಕ್ರೀನ್​​ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ವಿಕ್ರಾಂತ್ ಪ್ರೇಮ್: ಇನ್ಮುಂದೆ ಲವ್ಲೀ ಸ್ಟಾರ್ ಮನೆಯಲ್ಲಿ ಪ್ರೇಮ್ ಅಲ್ಲದೇ ಮಗಳು ಅಮೃತಾ ಹಾಗು ಮಗ ವಿಕ್ರಾಂತ್ ಕೂಡ ಸೆಲೆಬ್ರಿಟಿ. ಯಾಕಂದ್ರೆ ಅಕ್ಕ ಅಮೃತಾ ಅವರಿಗಿಂತ ಮುಂಚೆ ಏಕಾಂತ್ ಮಾಮು ಟೀ ಅಂಗಡಿ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಸಿನಿಮಾ ಬಳಿಕ ಸಾಹೇಬ, ರಾಮರಾಜ್ಯ-ಗಾಂಧಿ ತಾತನ ಕನಸು ಎಂಬ ಮಕ್ಕಳ ಚಿತ್ರದಲ್ಲಿ ಏಕಾಂತ್ ನಟಿಸಿದರು. ಈಗ ಗುರು ಶಿಷ್ಯರು ಸಿನಿಮಾದಲ್ಲಿ ಏಕಾಂತ್ ಖೋ ಖೋ ಆಟಗಾರನಾಗಿ ನಟಿಸುವ ಮೂಲಕ ಭವಿಷ್ಯದ ಹೀರೋ ಅಂತಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್ ಮಕ್ಕಳು

ಹೃದಯ್: ಇನ್ನು ಸ್ಯಾಂಡಲ್​ವುಡ್ ಅಧ್ಯಕ್ಷ ಅಂತಾ ಕರೆಸಿಕೊಂಡಿರುವ ಶರಣ್ ಕುಟುಂಬದ ಕುಡಿಯೊಂದು ಈ ವರ್ಷ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಅವರೇ ಶರಣ್ ಮಗ ಹೃದಯ್. ಚೊಚ್ಚಲ ಸಿನಿಮಾದ ಗುರು ಶಿಷ್ಯರು ಸಿನಿಮಾದಲ್ಲಿ ತಂದೆಯ ಜೊತೆ ಸ್ಕ್ರೀನ್ ಹಂಚಿಕೊಳ್ಳುವ ಮೂಲಕ ಹೃದಯ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಅಪ್ಪ, ತಾತ, ಅಜ್ಜಿಯಂದಿರ ನಾಟಕ ಹಾಗು ಸಿನಿಮಾಗಳನ್ನು ನೋಡಿ ಬೆಳೆದಿರುವ ಹೃದಯ್ ಡ್ಯಾನ್ಸ್ ಆ್ಯಕ್ಟಿಂಗ್ ಅಂತಾ ಪ್ರ್ಯಾಕ್ಟೀಸ್ ಮಾಡಿ ಗುರು ಶಿಷ್ಯರು ಸಿನಿಮಾದಲ್ಲಿ ಅಭಿನಯಿಸಿ ಕನ್ನಡ ಸಿನಿಮಾ ಪ್ರೇಕ್ಷಕರ ಹೃದಯವನ್ನ ಗೆದ್ದಿದ್ದಾರೆ.

ರಕ್ಷಕ್: ಇದರ ಜೊತೆಗೆ ಹಾಸ್ಯ ನಟ ಬುಲೆಟ್ ಪ್ರಕಾಶ್‌ ಮಗ ರಕ್ಷಕ್ ಕೂಡ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸುವ ಮೂಲಕ ತಂದೆಯ ಆಸೆಯನ್ನು ಪೂರೈಸಿದ್ದಾರೆ. ಬುಲೆಟ್ ಪ್ರಕಾಶ್ ಬದುಕಿದ್ದಾಗ ಮಗನನ್ನು ಸಿನಿಮಾ ಇಂಡಸ್ಟ್ರಿಗೆ ತರಬೇಕು ಅಂತಾ ಕನಸು ಕಂಡಿದ್ದರು. ಆದರೆ ದುರಾದೃಷ್ಟವಶಾತ್ ಮಗನ ಯಶಸ್ಸು ನೋಡುವ ಮೊದಲೇ ಬುಲೆಟ್ ಪ್ರಕಾಶ್ ಇಹಲೋಕ ತ್ಯಜಿಸಬೇಕಾಯಿತು.

ಇದನ್ನೂ ಓದಿ:ಈ ವರ್ಷ ಕನ್ನಡ ಚಿತ್ರರಂಗ ಪ್ರವೇಶಿಸಿದ ಸ್ಟಾರ್ ಕುಟುಂಬದ ಮಕ್ಕಳು ಯಾರು? ಇವರೇ ನೋಡಿ..

ಇನ್ನು ನಟ ರವಿಶಂಕರ್ ಗೌಡ ಪುತ್ರ ಸೂರ್ಯ, ನವೀನ್ ಕೃಷ್ಣ ಪುತ್ರ ಹರ್ಷಿತ್ ಶರಣ್ಅಭಿನಯದ ಗುರು ಶಿಷ್ಯರು ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.ಇ ದಿಷ್ಟು 2022ನೇ ವರ್ಷದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸ್ಟಾರ್ಸ್ ಮಕ್ಕಳ ಮಾಹಿತಿ.

ABOUT THE AUTHOR

...view details