ಕರ್ನಾಟಕ

karnataka

ETV Bharat / entertainment

ನಟಿ ಸಮಂತಾ ಅಭಿನಯದ ಶಾಕುಂತಲಂ ಫೆಬ್ರವರಿಯಲ್ಲಿ ಬಿಡುಗಡೆ - ಸಮಂತಾ

ಸೌತ್ ನಟಿ ಸಮಂತಾ ರುತ್ ಪ್ರಭು ಅಭಿನಯದ ಮುಂಬರುವ ಸಿನಿಮಾ 'ಶಾಕುಂತಲಂ' ಫೆ.17 ರಂದು ಬಿಡುಗಡೆ ಆಗಲಿದೆ. ಈ ವಿಷಯವನ್ನು ನಟಿ ಚಿತ್ರದ ಪೋಸ್ಟರ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಪೌರಾಣಿಕ ಕಥಾಹಂದರವುಳ್ಳ ಸಿನಿಮಾ ಶಾಕುಂತಲಂ
ಪೌರಾಣಿಕ ಕಥಾಹಂದರವುಳ್ಳ ಸಿನಿಮಾ ಶಾಕುಂತಲಂ

By

Published : Jan 2, 2023, 7:22 PM IST

ಮುಂಬೈ:ದಕ್ಷಿಣ ಭಾರತದ ಸುಂದರ ಮತ್ತು ಮುದ್ದಾದ ನಟಿ ಸಮಂತಾ ರುತ್ ಪ್ರಭು ಅವರ ಪೌರಾಣಿಕ ಕಥಾಹಂದರವುಳ್ಳ ಸಿನಿಮಾ ಶಾಕುಂತಲಂ ಬಿಡುಗಡೆ ದಿನಾಂಕ ಫಿಕ್ಸ್​ ಆಗಿದೆ. ಈ ಸಿನಿಮಾವು ಮುಂದಿನ ತಿಂಗಳ ಫೆಬ್ರವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟಿ ಸ್ಯಾಮ್​ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಬಿಡುಗಡೆಯ ದಿನಾಂಕವನ್ನು ತಿಳಿಸಿದ್ದಾರೆ. ಪೋಸ್ಟರ್​ನಲ್ಲಿ ಸಮಂತಾ ಜೊತೆ ನಟ ದೇವ್ ಮೋಹನ್ ಕಾಣಿಸಿಕೊಂಡಿದ್ದಾರೆ.

ಫೆ.17 ರಂದು ಸಿನಿಮಾ ಬಿಡುಗಡೆ: ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ, ಸಮಂತಾ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, '17 ಫೆಬ್ರವರಿ 2023 ರಂದು ಶಾಕುಂತಲಂ ಸಿನಿಮಾ ವಿಶ್ವದಾದ್ಯಂತ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ 3D ನಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಕವಿ ಕಾಳಿದಾಸ ಬರೆದ ಜನಪ್ರಿಯ ನಾಟಕ ಶಾಕುಂತಲಾವನ್ನು ಆಧರಿಸಿ, ಶಕುಂತಲಾಂ ಸಿನಿಮಾವನ್ನು ಮಾಡಲಾಗಿದೆ. ಇದರಲ್ಲಿ ದೇವ್ ಮೋಹನ್ ಮತ್ತು ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ :''ನಿಮಗೆ ಬೇಕಾದಂತೆ ನೀವಿರಿ'': ನಟಿ ಸಮಂತಾ

ದೇವ್ ಮೋಹನ್ ಈ ಚಿತ್ರದಲ್ಲಿ ಪುರು ರಾಜವಂಶದ ರಾಜ ದುಶ್ಯಂತ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸಮಂತಾ ಮತ್ತು ದೇವಮೋಹನ್ ಜೊತೆಗೆ ಮೋಹನ್ ಬಾಬು, ಗೌತಮಿ, ಅದಿತಿ ಬಾಲನ್ ಮತ್ತು ಅನನ್ಯ ನಾಗಲ್ಲ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ.

ಹೈದರಾಬಾದ್ ಸುತ್ತಮುತ್ತ ಚಿತ್ರೀಕರಣ: ರಾಮೋಜಿ ಫಿಲ್ಮ್ ಸಿಟಿ, ಅನಂತಗಿರಿ ಹಿಲ್ಸ್ ಮತ್ತು ಗಾಂಧಿಪೇಟ್ ಸರೋವರ ಸೇರಿದಂತೆ ಹೈದರಾಬಾದ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸೌತ್ ಬ್ಯೂಟಿಯ 'ಯಶೋದಾ' ಸಿನಿಮಾ ಕಳೆದ ವರ್ಷ ನವೆಂಬರ್ 11 ರಂದು ಬಿಡುಗಡೆಯಾಗಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಯಶೋದಾ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು ಅಲ್ಲದೇ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ಹರಿ ಮತ್ತು ಹರೀಶ್ ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ಸಮಂತಾ ಗರ್ಭಿಣಿಯಾಗಿ ಫುಲ್ ಆ್ಯಕ್ಷನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರು ಆಕೆಗೆ 3 ತಿಂಗಳ ಗರ್ಭಿಣಿ ಎಂದು ಹೇಳುತ್ತಾರೆ. ಆದರೆ, ಈ ಮಧ್ಯೆ ಸಮಂತಾ ರುತ್ ಪ್ರಭು ಕುಳಿತಾಗ ಅನೇಕ ವಿಷಯಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ನಟಿಗೆ ಅನಿಸುತ್ತದೆ. ಇಡೀ ಚಿತ್ರವು ಮಹಿಳೆಯ ಶಕ್ತಿ ಸುತ್ತ ಸುತ್ತುತ್ತದೆ. ಅವಳು ಹೇಗೆ ಹೋರಾಡುತ್ತಾಳೆ ಎಂಬುದನ್ನೂ ಚಿತ್ರದಲ್ಲಿ ಸುಂದರವಾಗಿ ತೋರಿಸಲಾಗಿದೆ. ಸಮಂತಾ ಶೀಘ್ರದಲ್ಲೇ ದಕ್ಷಿಣ ನಟ ವಿಜಯ್ ದೇವರಕೊಂಡ ಜೊತೆ 'ಖುಷಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:'ಸಮಂತಾ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿಗಳನ್ನು ನಂಬಬೇಡಿ..'

ABOUT THE AUTHOR

...view details