ಕರ್ನಾಟಕ

karnataka

ETV Bharat / entertainment

ಸಿನಿಮಾಗೆ ಸಂಗೀತ ಮಾಡುವುದಕ್ಕಿಂತ ಆಲ್ಬಂ ಹಾಡು ಮಾಡೋದು ನನಗೆ ತೃಪ್ತಿ: ರಿಕ್ಕಿ ಕೇಜ್ - Ricky Kej is a multi-Grammy Award-winning Indian music composer and environmentalist

ಲಹರಿ ಮ್ಯೂಸಿಕ್ ಸಂಸ್ಥೆಯ ಮೂಲಕ ರಿಕ್ಕಿ ಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಡಿವೈನ್ ಟೈಡ್ಸ್' ಆಲ್ಬಂಗೆ 2022ರ ಗ್ರ್ಯಾಮಿ ಪ್ರಶಸ್ತಿ ದೊರೆತಿದೆ. ಆ ಬಗ್ಗೆ ರಿಕ್ಕಿ ಕೇಜ್‌ ಮತ್ತು ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಸಂತಸ ಹಂಚಿಕೊಂಡಿದ್ದಾರೆ..

Ricky Kej
ರಿಕ್ಕಿ ಕೇಜ್

By

Published : Apr 15, 2022, 4:54 PM IST

ಕಳೆದ ನಲವತ್ತೆಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ. ಈ ಲಹರಿ ಮ್ಯೂಸಿಕ್ ಮೂಲಕ ರಿಕ್ಕಿ ಕೇಜ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಡಿವೈನ್ ಟೈಡ್ಸ್ ಆಲ್ಬಂಗೆ, ಕೆಲ ದಿನಗಳ ಹಿಂದೆ, ಸಂಗೀತ ಕ್ಷೇತ್ರದ ಮೇರು ಪ್ರಶಸ್ತಿಯಾದ ಗ್ರ್ಯಾಮಿ ದೊರೆತಿದೆ. ಈ ಖುಷಿಯನ್ನು ಗ್ರ್ಯಾಮಿ ಪ್ರಶಸ್ತಿ ಪಡೆದ ರಿಕ್ಕಿ ಕೇಜ್ ಹಾಗೂ ಲಹರಿ ಸಂಸ್ಥೆ ಲಹರಿ ವೇಲು ಸಂತಸ ಹಂಚಿಕೊಂಡರು.

ಲಹರಿ ವೇಲು ಮಾತನಾಡಿ, ಮೊದಲ ಬಾರಿಗೆ ನಮ್ಮ ಸಂಸ್ಥೆ ಮೂಲಕ ಬಿಡುಗಡೆಯಾದ 'ಡಿವೈನ್ ಟೈಡ್ಸ್' ಆಲ್ಬಂಗೆ ಸಂಗೀತ ನೀಡಿದ್ದಕ್ಕಾಗಿ ರಿಕ್ಕಿ ಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಬಂದಿರೋದು ಹೆಮ್ಮೆಯ ವಿಷಯ. ವಿಶ್ವ ಗಮನವನ್ನು ಕರ್ನಾಟಕದ ಕಡೆ ಸೆಳೆಯುವ ಹಾಗೆ ಮಾಡಿದವರು ರಿಕ್ಕಿ ಕೇಜ್. ಭಾರತಕ್ಕೆ ಈಗ ಎರಡು ಗ್ರ್ಯಾಮಿ ಅವಾರ್ಡ್ ಬಂದಿದೆ‌. ಮುಂದಿನ ದಿನಗಳಲ್ಲಿ ನಮ್ಮ ದೇಶಕ್ಕೆ ಮತ್ತೊಂದು ಗ್ರ್ಯಾಮಿ ಪ್ರಶಸ್ತಿ ಬರಲಿ ಎಂದು ಹೇಳಿದರು.

ಸಿನಿಮಾಗೆ ಸಂಗೀತ ಮಾಡುವುದಕ್ಕಿಂತ ಆಲ್ಬಂ ಹಾಡು ಮಾಡೋದು ನನಗೆ ತೃಪ್ತಿ ಅಂತಾರೆ ರಿಕ್ಕಿ ಕೇಜ್‌..

ರಿಕ್ಕಿ ಕೇಜ್ ಮಾತನಾಡಿ, ನನಗೆ ಎರಡನೇ ಬಾರಿ ಈ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ. ಪ್ಯಾಂಡಮಿಕ್ ಸಮಯದಲ್ಲಿ ಈ ಆಲ್ಬಂ ನಿರ್ಮಾಣವಾಯಿತು. ಅನೇಕ ಕಲಾವಿದರನ್ನು ಜೂಮ್ ಕಾಲ್ ಹಾಗೂ ಮೆಸೇಜ್​ಗಳ ಮೂಲಕ ಸಂಪರ್ಕ ಮಾಡಿದ್ದೆ. ನೂರೈವತ್ತಕ್ಕೂ ಅಧಿಕ ಕಲಾವಿದರು ಹಾಗೂ ತಂತ್ರಜ್ಞರು ಈ ಹಾಡಿಗೆ ಕೆಲಸ ಮಾಡಿದ್ದಾರೆ. ಅದರಲ್ಲಿ ‌ಅರವತ್ತಕ್ಕೂ ಅಧಿಕರು ಭಾರತದವರು. ವಾರಿಜಾಶ್ರೀ, ಅರುಣ್ ಕುಮಾರ್, ಸುಮಾ ರಾಣಿ, ಚೈತ್ರ ಮುಂತಾದ ಕಲಾವಿದರು ಈ ಆಲ್ಬಂನಲ್ಲಿದ್ದಾರೆ ಎಂದರು.

ನಾನು ಕನ್ನಡದಲ್ಲಿ ಆ್ಯಕ್ಸಿಡೆಂಟ್, ವೆಂಕಟ ಇನ್ ಸಂಕಟ ಹಾಗೂ ಕ್ರೇಜಿ ಕುಟುಂಬ ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ರಮೇಶ್ ನನ್ನ ಆತ್ಮೀಯ ಸ್ನೇಹಿತರು. ನನಗೆ ಸಿನಿಮಾಗಿಂತ ವಿಭಿನ್ನ ಆಲ್ಬಂಗಳನ್ನು ಮಾಡುವುದರಲ್ಲೇ ಹೆಚ್ಚು ಆಸಕ್ತಿ. ಯಾಕೆಂದರೆ, ಸಿನಿಮಾಗಳಿಗೆ ಒಂದು ಅಥವಾ ಎರಡು ತಿಂಗಳಲ್ಲಿ ಸಂಗೀತ ಮಾಡಬೇಕು. ಆಲ್ಬಂ ಹಾಡು ಮಾಡೋದಿಕ್ಕೆ ಒಂದು ವರ್ಷ ಆಗುತ್ತೆ. ಹೀಗಾಗಿ, ನನಗೆ ಸಿನಿಮಾಗಳಿಗೆ ಮ್ಯೂಜಿಕ್ ಮಾಡುವುದಕ್ಕಿಂತ, ಆಲ್ಬಂ ಹಾಡಿಗೆ ಮ್ಯೂಸಿಕ್ ಮಾಡೋದು ತೃಪ್ತಿ ಇದೆ ಅಂತಾರೆ ರಿಕ್ಕಿ ಕೇಜ್.

ಇದನ್ನೂ ಓದಿ:ಕಿರುಚಿತ್ರ ನಿರ್ಮಾಪಕ ಗಣೇಶ್ ವೇಮುಲ್ಕರ್ ಅಂಗಾಂಗ ದಾನದಿಂದ 8 ಜನರಿಗೆ ಹೊಸ ಜೀವನ..‌

ABOUT THE AUTHOR

...view details