ತಮ್ಮ ಫ್ಯಾಷನ್ಸೆನ್ಸ್ ಮೂಲಕ ಅಭಿಮಾನಿಗಳನ್ನು ಸೆಳೆಯುವಲ್ಲಿ ಬಾಲಿವುಡ್ ನಟಿ ರೇಖಾ ಎಂದಿಗೂ ಸೋತಿಲ್ಲ. ಬುಧವಾರ ಕೂಡ ತಮ್ಮ ಈ ಐಕಾನಿಕ್ ಸ್ಟೈಲ್ ಮೂಲಕ ಮುಂಬೈನ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಿಂಚಿದ್ದಾರೆ. ತಮ್ಮ ಎಂದಿನ ಸ್ಟೈಲ್ ಜೊತೆಗೆ ಅವರ ಟ್ರೇಡ್ ಮಾರ್ಕ್ ಆಗಿರುವ ಅದ್ಭುತ ಬಂಗಾರದ ಬಣ್ಣದ ಸೀರೆಯುಟ್ಟು ಕಂಗೊಳಿಸುತ್ತಾರೆ. ಈ ಪ್ರಶಸ್ತಿ ಕಾರ್ಯಕ್ರಮದಲ್ಲೂ ತಮ್ಮ ಅದ್ಬುತ ಧಿರಿಸಿನ ಜೊತೆ ಕಂಗೊಳಿಸಿದ್ದಾರೆ. ಇದೇ ವೇಳೆ, ಅಭಿಮಾನಿಯೊಬ್ಬರ ಕೆನ್ನೆಗೆ ಪ್ರೀತಿಯಿಂದ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಪ್ಯಾಪಾರಾಜಿಗಳು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವೈರಲ್ ವಿಡಿಯೋದಲ್ಲಿ 68 ವರ್ಷದ ಹಿರಿಯ ನಟಿ, ಗೋಲ್ಡನ್, ಸಿಲ್ವರ್ ಬಣ್ಣದ ಧೋತಿ ಶೈಲಿನ ಚೂಡಿದಾರ್ ಧರಿಸಿ ಕಂಗೊಳಿಸಿದ್ದಾರೆ. ಮನೀಷ್ ಮಲ್ಹೋತ್ರಾ ವಿನ್ಯಾಸ ಮಾಡಿರುವ ಈ ಧಿರಿಸಿಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ಸಂಪ್ರದಾಯಿಕ ಆಭರಣ ಜೊತೆಗೆ ಬಿಳಿ ಮತ್ತು ಗೋಲ್ಡನ್ ಬಣ್ಣದ ಹೀಲ್ಸ್ ಧರಿಸಿದ್ದಾರೆ. ಈ ವೇಳೆ, ಅಭಿಮಾನಿಯೊಬ್ಬರು ರೇಖಾ ಅವರೊಂದಿಗೆ ಫೋಟೋವನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಆ ವ್ಯಕ್ತಿಯ ಕೆನ್ನೆಗೆ ಪ್ರೀತಿಯ ಹೊಡೆತ ನೀಡಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮತ್ತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ಆತ ತುಂಬಾ ಲಕ್ಕಿ ಎಂದಿದ್ದಾರೆ. ಮತ್ತೊಬ್ಬರು, ಆಕೆ ಪ್ರೀತಿ ತುಂಬಿದ ಹೃದಯ ಹೊಂದಿದ್ದಾರೆ ಎಂದಿದ್ದಾರೆ. ಮತ್ತೊಬ್ಬ ಅಭಿಮಾನಿ ಸದಾಕಾಲದ ಲೆಜೆಂಡ್, ಅವರು ಅದ್ಬುತ ಎಂದಿದ್ದಾರೆ.