ಸ್ಯಾಂಡಲ್ವುಡ್ನಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಮತ್ತು ಟಾಲಿವುಡ್ ಸ್ಟಾರ್ ಹೀರೋ ವಿಜಯ್ ದೇವರಕೊಂಡ ಅವರ ಹೆಸರು ಆಗಾಗ್ಗೆ ಒಟ್ಟಿಗೆ ಕೇಳಿ ಬರುತ್ತವೆ. ನಟ ನಟಿ ಶೇರ್ ಮಾಡಿಕೊಳ್ಳುವ ಫೋಟೋಗಳು ಅಭಿಮಾನಿಗಳ ತಲೆಗೆ ಹುಳ ಬಿಟ್ಟಂತಾಗುತ್ತದೆ. ಅದರಂತೆ ನಟಿ ನಿನ್ನೆಯಷ್ಟೇ ಶೇರ್ ಮಾಡಿರುವ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ನಟಿ ನಿನ್ನೆಯಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡು, ಹೃದಯಸ್ಪರ್ಶಿ ಬರಹಗಳ ಮೂಲಕ ಗಮನ ಸೆಳೆದರು. ''ಸಾಯಿ ಮತ್ತು ಅವರ ಕುಟುಂಬಸ್ಥರ ಪರಿಚಯವಾಗಿ ಸುಮಾರು 6-7 ವರ್ಷಗಳು ಕಳೆದಿವೆ. ಅವರು ನನ್ನ ಕುಟುಂಬವಿದ್ದಂತೆ. ಇದೀಗ ಅವರು ಹಸೆಮಣೆ ಏರಿದ್ದು, ಅವರ ವಿಶೇಷ ದಿನದ ಭಾಗವಾಗಲು ನನಗೆ ಅವಕಾಶ ಸಿಕ್ಕಿತು. ಇಂತಹ ಉತ್ತಮ ಜನರ ನಡುವೆ ಇರುವುದಕ್ಕೆ ನನಗೆ ಬಹಳ ಖುಷಿಯಾಗುತ್ತಿದೆ. ಅವರೆಲ್ಲರೂ ಸಂತೋಷದಿಂದಿರುವುದನ್ನು ನೋಡಲು ಸಹ ಖುಷಿಯಾಗುತ್ತದೆ. ಅವರು ದಾಂಪತ್ಯ ಜೀವನ ಆರಂಭಿಸಿದ್ದಾರೆಂಬದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದು ಬಹಳ ಸಂತೋಷಕರ ಕ್ಷಣ. ಸಾಯಿ ಹಾಗೂ ಪ್ರೀತಿ, ನಿಮಗೆ ನನ್ನ ಕಡೆಯಿಂದ ಅಭಿನಂದನೆಗಳು. ದೇವರು ಆಶೀರ್ವದಿಸಲಿ. ನಿಮ್ಮ ಜೀವನ ಸದಾ ಸಂತೋಷದಿಂದ ತುಂಬಿರಲಿ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Amulya: ಪುಟ್ಟ ಕೃಷ್ಣರಾದ ಅಮೂಲ್ಯ ಮಕ್ಕಳು.. ಅಷ್ಟಮಿ ಸಂಭ್ರಮ ಹೆಚ್ಚಿಸಿದ ನಟಿಯ ಪುತ್ರರ ಫೋಟೋ
ಸರಣಿ ಸಿನಿಮಾಗಳ ಬ್ಯುಸಿ ಶೆಡ್ಯೂಲ್ ನಡುವೆಯೂ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಸಿಬ್ಬಂದಿ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಖತ್ ಸಿಂಪಲ್ ಸೀರೆಯಲ್ಲಿ ಪುಷ್ಪ ನಟಿ ಕಂಗೊಳಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಮದುವೆಯ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಸರಳತೆ, ಸೌಂದರ್ಯ, ಸೀರೆ ಬೆಲೆ ಹೀಗೆ ನಾನಾ ವಿಚಾರಗಳ ಬಗ್ಗೆ ಅಭಿಮಾನಿಗಳು ಚರ್ಚೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಎಂದಿನಂತೆ ವಿಜಯ್ ದೇವರಕೊಂಡ ಹೆಸರನ್ನು ನೆಟ್ಟಿಗರು ಎಳೆದು ತಂದಿದ್ದಾರೆ.
ಇದನ್ನೂ ಓದಿ:'ಲೈನ್ ಮ್ಯಾನ್' ಬಿಡುಗಡೆಗೆ ಭರದ ಸಿದ್ಧತೆ.. ರಘು ಶಾಸ್ತ್ರಿ ನಿರ್ದೇಶನದ ಚಿತ್ರಕ್ಕೆ ಸಿಕ್ತು ಸೆನ್ಸಾರ್ ಒಪ್ಪಿಗೆ
ರಶ್ಮಿಕಾ ನವಜೋಡಿಗಳ ಫೋಟೋ ಹಂಚಿಕೊಳ್ಳುವ ಜೊತೆಗೆ ತಮ್ಮ ಸಿಂಗಲ್ ಫೋಟೋಗಳನ್ನೂ ಶೇರ್ ಮಾಡಿದ್ದಾರೆ. ಆರೆಂಜ್, ಯೆಲ್ಲೋ ಮಿಶ್ರಿತ ಸಿಂಪ್ ಸೀರೆ ಉಟ್ಟಿದ್ದಾರೆ. ನಗುಮೊಗದ ಫೋಟೋ ಅಭಿಮಾನಿಗಳ ಹೃದಯ ಆವರಿಸಿದೆ. ಟೆರೆಸ್ ಗಾರ್ಡನ್ ಹಿನ್ನೆಲೆಯಲ್ಲಿ ಈ ಫೋಟೋ ಕ್ಲಿಕ್ಕಿಸಿದ್ದಾರೆ. ನಟ ವಿಜಯ್ ದೇವರಕೊಂಡ ಅವರ ಫೋಟೋ ಕೂಡ ಇದೇ ರೀತಿಯ ಟೆರೆಸ್ ಗಾರ್ಡನ್ ಬಳಿ ಕ್ಕಿಕ್ಕಿಸಿರುವ ಫೋಟೋ ವೈರಲ್ ಆಗುತ್ತಿದೆ. ಆದ್ರೆ ಸೇಮ್ ಲೊಕೇಶನ್ ಎಂಬುದರ ಬಗ್ಗೆ ಖಾತ್ರಿಯಿಲ್ಲ. ನೆಟ್ಟಿಗರು ಮಾತ್ರ ಈ ಫೋಟೋಗಳನ್ನು ಹೋಲಿಸಿ, ಇವರಿಬ್ಬರು ''ಲಿವಿಂಗ್ ಟುಗೆದರ್'' ನಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಾನಾ ತರನಾದ ಕಾಮೆಂಟ್ಗಳು ಹರಿದು ಬರುತ್ತಿದೆ.