ಕನ್ನಡದಲ್ಲಿ ಏಳು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಸಿನಿಮಾವೊಂದು ಹಿಂದಿಗೆ ರಿಮೇಕ್ ಆಗುತ್ತಿದೆ. 2015 ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ, 'ರಂಗಿತರಂಗ' ಸಿನಿಮಾ ಈಗ ಹಿಂದಿಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾವನ್ನ ನಿರ್ದೇಶಕ ಮಾಡಿದ್ದ ಅನೂಪ್ ಭಂಡಾರಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.
ಬಾಲಿವುಡ್ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರಂತೆ. ಮುಂಬೈನ ಕಾರ್ಪೊರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಕ್ಷಯ್ ಕುಮಾರ್ ಅಥವಾ ಶಾಹಿದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸ್ವತಃ ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ರಂಗಿತರಂಗ ನಿರ್ದೇಶಕ ಅನೂಪ್ ಭಂಡಾರಿ ಮೊದಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ಅನೂಪ್ ಸಹೋದರ ನಿರೂಪ್ ಭಂಡಾರಿ ಹೀರೋ ಆಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದರು. ನಟಿಯರಾದ ರಾಧಿಕಾ ನಾರಾಯಣ್ ಮತ್ತು ಆವಂತಿಕಾ ಶೆಟ್ಟಿಗೂ ಇದು ಮೊದಲ ಸಿನಿಮಾ. ಮೊದಲ ಹೆಜ್ಜೆಯಲ್ಲಿಯೇ ಇವರೆಲ್ಲರೂ ಸಕ್ಸಸ್ ಕಂಡಿದ್ದರು. ನಿರ್ದೇಶಕ ಅನೂಪ್ ಭಂಡಾರಿ ಕಡಿಮೆ ಬಜೆಟ್ನಲ್ಲಿ, ಅದ್ದೂರಿ ಮೇಕಿಂಗ್ ಮಾಡಿ ಸಕ್ಸಸ್ ಕಂಡಿದ್ದರು.